ನಾಗರತ್ನ ವಿರುದ್ಧ ಎಫ್.ಐ.ಆರ್ ದಾಖಲು: ಬಂಧಿಸ್ತಾರಾ ಪೊಲೀಸರು.?

Recommended Video

ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ : ನಾಗರತ್ನ ಬಂಧನ ಸಾಧ್ಯತೆ | FILMIBEAT KANNADA

ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ವಿರುದ್ಧ ಎರಡನೇ ಪತ್ನಿ ಕೀರ್ತಿ ಗೌಡ ದೂರು ದಾಖಲು ಮಾಡಿದ್ದರು. ಸೆಪ್ಟೆಂಬರ್ 23 ರಂದು ತಮ್ಮ ಮೇಲೆ ನಡೆದ ಹಲ್ಲೆಗೆ ಸಂಬಂಧ ಪಟ್ಟಂತೆ ಸಿಸಿಟಿವಿ ದೃಶ್ಯಾವಳಿ ಸಮೇತ ಕೀರ್ತಿ ಗೌಡ ಮೊನ್ನೆಯಷ್ಟೇ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ದರು.

ಕೀರ್ತಿ ಗೌಡ ಕೊಟ್ಟಿರುವ ದೂರಿನ ಅನ್ವಯ ಗಿರಿನಗರ ಪೊಲೀಸರು ನಾಗರತ್ನ ವಿರುದ್ಧ ಎಫ್.ಐ.ಆರ್ ದಾಖಲು ಮಾಡಿದ್ದಾರೆ. ನಾಗರತ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಆಗಿದೆ. ನಾಗರತ್ನಗಾಗಿ ಸದ್ಯ ಗಿರಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗಲಾಟೆ ನಡೆದ ಸಿಸಿಟಿವಿ ಫುಟೇಜ್ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ, ನಾಗರತ್ನ ನಾಪತ್ತೆ ಆಗಿದ್ದಾರೆ. ಮನೆಯಲ್ಲಿ ನಾಗರತ್ನ ಇದ್ದಾರೋ, ಇಲ್ವೋ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದ್ರೆ, ನಾಗರತ್ನರನ್ನ ಬಂಧಿಸುವುದು ಖಚಿತ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.

Assault case: FIR lodged against Duniya Vijay wife Nagaratna

ಘಟನೆ ಹಿನ್ನಲೆ: ಸೆಪ್ಟೆಂಬರ್ 23 ರಂದು ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಮನೆಗೆ ನುಗ್ಗಿದ ನಾಗರತ್ನ, ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಇದು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅದೇ ಸಿಸಿಟಿವಿ ಫುಟೇಜ್ ಇಂದು ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು ನೀಡಿದ್ದರು.

More from Filmibeat

English summary
Assault case: FIR lodged against Duniya Vijay wife Nagaratna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X