ಮೂರು ದಿನ ಆಯ್ತು: ಇನ್ನೂ ಪತ್ತೆ ಆಗದ ದುನಿಯಾ ವಿಜಯ್ ಪತ್ನಿ ನಾಗರತ್ನ.!
Recommended Video

ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ದುನಿಯಾ ವಿಜಯ್ ಪತ್ನಿ ನಾಗರತ್ನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಗರತ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಆಗಿದೆ.
ಅತ್ತ ದೂರು ದಾಖಲಾಗಿ, ಮಾಧ್ಯಮಗಳಲ್ಲಿ ಹಲ್ಲೆಯ ಸಿಸಿಟಿವಿ ದೃಶ್ಯಾವಳಿ ಪ್ರಸಾರ ಆಗುತ್ತಿದ್ದಂತೆಯೇ, ನಾಗರತ್ನ ಎಸ್ಕೇಪ್ ಆಗಿದ್ದಾರೆ. ನಾಗರತ್ನ ನಾಪತ್ತೆ ಆಗಿ ಮೂರು ದಿನಗಳು ಕಳೆದಿವೆ. ಸದ್ಯ ಆಕೆ ಎಲ್ಲಿದ್ದಾರೆ ಎಂಬ ಮಾಹಿತಿ ಇನ್ನೂ ಪೋಲಿಸರಿಗೆ ಲಭಿಸಿಲ್ಲ.
ನಾಗರತ್ನಗಾಗಿ ಎರಡು ಪೊಲೀಸ್ ತಂಡಗಳು ಅಂಜನಾಪುರ, ಹೊಸೂರು ರಸ್ತೆ, ಆನೇಕಲ್ ಸುತ್ತ ಮುತ್ತ ಹುಡುಕಾಟ ನಡೆಸುತ್ತಿವೆ. ಆದರೆ ಸುಳಿವು ಸಿಕ್ಕಿಲ್ಲ.

ಕ್ರೌರ್ಯದ ಕಾರಣ ನೀಡಿ ನಾಗರತ್ನರಿಂದ ವಿಚ್ಛೇದನ ಪಡೆಯಲು ದುನಿಯಾ ವಿಜಯ್ ಮತ್ತೊಂದು ಬಾರಿಗೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ಆದರೂ ನಾಗರತ್ನ ಮಾತ್ರ ಯಾರ ಕಣ್ಣಿಗೂ ಬಿದ್ದಿಲ್ಲ. ಇಬ್ಬರೂ ಹೆಣ್ಮಕ್ಕಳನ್ನ ಮನೆಯಲ್ಲೇ ಬಿಟ್ಟು ಪರಾರಿ ಆಗಿದ್ದಾರೆ. ನಾಗರತ್ನ ಪತ್ತೆ ಆದ ಕೂಡಲೆ ಆಕೆಯನ್ನ ಬಂಧಿಸುವುದು ಖಚಿತ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ. ಜಾಮೀನು ಸಿಕ್ಕ ಬಳಿಕ ನಾಗರತ್ನ ಪ್ರತ್ಯಕ್ಷ ಆಗುವ ಸಾಧ್ಯತೆ ಇದೆ.


Click it and Unblock the Notifications











