ಕೈ ಕಚ್ಚಿಲ್ಲ.. ಹಲ್ಲೆನೂ ಮಾಡಿಲ್ಲ: ಇದು ಸುಳ್ಳು ಎಂದ ನಟ ಜೈ ಜಗದೀಶ್!

ಕನ್ನಡದ ಹಿರಿಯ ನಟ ಜೈಜಗದೀಶ್ ಅವರ ಹೆಸರು ವಿವಾದದ ಮೂಲಕ ಸುದ್ದಿ ಆಯ್ತು. ನಟ ಜೈ ಜಗದೀಶ್ ವ್ಯಕ್ತಿಯೊಬ್ಬನ ಒಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತು ವ್ಯಕ್ತಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಮಂಡ್ಯದ ಬಳಿ ಜೈ ಜಗದೀಶ್ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೈ ಕಚ್ಚಿದ್ದಾರೆ ಎನ್ನಲಾಗಿದೆ.

ಬಸ್‌ನಿಂದ ನೀರಿನ ಬಾಟಲಿ ಬಿಸಾಡಿದ ಕಾರಣಕ್ಕೆ ಜಗಳ ಆರಂಭವಾಗಿದೆ. ಜೈ ಜಗದೀಶ್ ಅವರ ಕಾರಿನ ಮೇಲೆ, ಬಸ್ಸಿನಿಂದ ಇಳಿದ ವ್ಯಕ್ತಿ ಒಬ್ಬ ಬಾಟಲಿ ಬಿಸಾಡಿದ್ದ ವಿಚಾರಕ್ಕೆ ಜಗಳ ಆರಂಭವಾಗಿದೆ ಎನ್ನಲಾಗಿದೆ. ಇನ್ನು ಜೈ ಜಗದೀಶ್ ಅವರ ವಿರುದ್ಧ ದಾಖಲಿಸಿದ ದೂರಿನಲ್ಲಿ ಹಲ್ಲೆ ಮಾಡಿ, ಕೈ ಕಚ್ಚಿದ್ದಾರೆ ಎಂದು ಹೇಳಲಾಗಿದೆ.

ಆದರೆ ಈ ಘಟನೆಯ ಬಗ್ಗೆ ನಟ ಜೈ ಜಗದೀಶ್ ಮಾತನಾಡಿದ್ದಾರೆ. ಗಲಾಟೆ ಆಗುದ್ದು ನಿಜ ಆದರೆ, ಕೈ ಕಟ್ಟಿದ್ದು ಹಲ್ಲೆ ಮಾಡಿದ್ದು ಎಲ್ಲಾ ಸುಳ್ಳು ಎಂದಿದ್ದಾರೆ. ನಡೆದ ಘಟನೆಯನ್ನು ನಟ ಜೈ ಜಗದೀಶ್ ಇಂಚಿಂಚಾಗಿ ವಿವರಿಸಿದ್ದಾರೆ. ಅಷ್ಟಕ್ಕೂ ಆಗಿದ್ದು ಏನು ಎನ್ನುವ ಬಗ್ಗೆ ಫಿಲ್ಮೀ ಬೀಟ್ ಜೊತೆಗೆ ಅವರು ಹಂಚಿಕೊಂಡಿದ್ದು ಹೀಗೆ.

ಘಟನೆ ನಡೆದಿದ್ದು ಎಲ್ಲಿ?

ಘಟನೆ ನಡೆದಿದ್ದು ಎಲ್ಲಿ?

ನಡೆದ ಘಟನೆಯನ್ನು ಜೈ ಜಗದೀಶ್ ವಿವರಿಸಿದ್ದು ಹೀಗೆ. "ವಾರಕ್ಕೊಮ್ಮೆ ನಾನು ತೋಟಕ್ಕೆ ಹೋಗುತ್ತೇನೆ. ನ್ಯಾಷನಲ್ ಹೈವೇಯಲ್ಲಿ ಹೋಗ್ತಿದ್ದೆ. ಬೆಳ್ಳೂರು ಕ್ರಾಸ್ ಟೋಲ್ ಬಂತು, ಮುಂದೆ ಬಸ್ ನಿಂತಿತ್ತು. ಬಸ್ ಹಿಂದೆ ನಾವು ಕಾರು ನಿಲ್ಲಿಸಿದೆವು. ಯಾರೋ ಒಬ್ಬ ನೀರಿನ ಬಾಟಲಿಯನ್ನು ಕಾರಿನ ಮೇಲೆ ಎಸೆದ. ಕಾರಿನ ಮೇಲೆ ಬಿದ್ದ ಬಾಟಲಿ ಕೆಳಗೆ ಬಿತ್ತು."

ಬಾಟಲಿ ಯಾಕಪ್ಪ ಎಸೆದೆ?

ಬಾಟಲಿ ಯಾಕಪ್ಪ ಎಸೆದೆ?

"ಬಾಟಲಿ ಬಿಸಾಡಿ ಆತ ಕೆಳಗೆ ಇಳಿದ. ನಾನು, ಯಾಕ್ರಿ ಬಾಟಲಿ ಬಿಸಾಡುತ್ತೀರಿ ಎಂದೆ. ಯಾಕಂದ್ರೆ, ಈ ಹಿಂದೆ ನನಗೆ ಕಹಿ ಅನುಭವ ಆಗಿತ್ತು. ಕಾರಿನ ಮೇಲೆ 2 ಲೀಟರ್ ಬಾಟಲಿ ಎಸೆದ ಕಾರಣ ಕಾರಿನ ಗ್ಲಾಸ್ ಒಡೆದಿತ್ತು. ಯಾಕಪ್ಪ ಎಸೆಯುತ್ತೀಯಾ? ಆ ಕಡೆ ಸೈಡಲ್ಲಿ ಎಸೆಯಬಾರದಾ ಅಂದೆ. ಆಗ ಆತ ನಾನೇನು ಎಸೆದಿಲ್ಲ ಅಂದ. ಆಗ ನಾನು ಇಲ್ಲಪ್ಪ ನಾನು ನೋಡಿದೆ ನೀನೇ ಎಸೆದಿದ್ದು ಎಂದೆ."

ಪ್ರಶ್ನೆ ಮಾಡುತ್ತಲೆ ಅವಾಚ್ಯ ಶಬ್ದಗಳಿಂದ ನಿಂದನೆ!

ಪ್ರಶ್ನೆ ಮಾಡುತ್ತಲೆ ಅವಾಚ್ಯ ಶಬ್ದಗಳಿಂದ ನಿಂದನೆ!

"ನೀರಿನ ಬಾಟಲಿ ಎಸೆದಿಲ್ಲ ಎಂದ, ನಾನೇ ನೋಡಿದ್ದೇನೆ ನೀನು ಎಸೆದಿದ್ದು, ಹೋಗಲಿ ಬಿಡಪ್ಪ ಎನ್ನುತ್ತಲೇ ಆತ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಹೊಡೆಯೋ ಹಾಗೆ ಮೈ ಮೇಲೆ ಬಂದು ಬಿಟ್ಟ. ನಾನು ಕಾರಿನಲ್ಲೇ ಕುಳಿತಿದ್ದೆ. ಆತ ಕೆಟ್ಟ ಪದಗಳನ್ನು ಬಳಸಿದ್ದಕ್ಕೆ ನಮ್ಮ ಡ್ರೈವರ್ ಯಾರ ಜೊತೆ ಮಾತಾಡುತ್ತಿದ್ದೀಯಾ ಗೊತ್ತಾ ಅಂತ ಒಂದು ಬಿಟ್ಟ. ಅಲ್ಲಿಂದ ಮಾತಿನಲ್ಲೇ ಜಗಳ ಜೋರಾಯ್ತು."

ಕಾರು ಕೀ ಕಿತ್ತುಕೊಂಡ!

ಕಾರು ಕೀ ಕಿತ್ತುಕೊಂಡ!

"ಇದ್ದಕ್ಕಿದ್ದ ಹಾಗೆ ಕಾರು ಕೀ ಕಿತ್ತುಕೊಂಡ, ಕಾರಿ ಕೀ ತೆಗೆದ ಕೂಡಲೇ, ನಾವು ಬಲವಂತವಾಗಿ ಆತನ ಕೈಯಿಂದ ಕಾರು ಕೀ ಕಿತ್ತುಕೊಂಡೆವು. ಆಗ ಆತನ ಶರ್ಟಿನ ತೋಳು ಹರಿದು ಹೋಯ್ತು. ಮಧ್ಯೆ ಹೈವೆಯಲ್ಲಿ ಕಾರು ಕೀ ಕಿತ್ತುಕೊಂಡು ಓಡಿ ಹೋದರೆ ನಾವು ಏನು ಮಾಡಲು ಸಾಧ್ಯ. ಹಾಗಾಗಿ ಬೀಗ ಕಿತ್ತುಕೊಳ್ಳುವ ಅನಿವಾರ್ಯತೆ ಇತ್ತು. ನಡೆದಿದ್ದು ಇಷ್ಟೇ, ನಂತರ ನಾವು ಅಲ್ಲಿಂದ ಹೊರಟೆವು."

5 ದಿನದ ಬಳಿಕ ದೂರು ದಾಖಲು!

5 ದಿನದ ಬಳಿಕ ದೂರು ದಾಖಲು!

"ಘಟನೆ ನಡೆದು 5 ದಿನ ಆಯ್ತು, ಈಗ ದೂರು ಕೊಟ್ಟಿದ್ದಾರೆ. ಅದು ನಮ್ಮ ಜೊತೆಗೆ ಜಗಳ ಮಾಡಿದ ವ್ಯಕ್ತಿ ದೂರು ಕೊಟ್ಟಿಲ್ಲ. ಅವರ ತಂದೆಯ ಕೈಯಲ್ಲಿ ದೂರು ಕೊಡಿಸಿದ್ದಾರೆ. ಇನ್ನು ನಿಜಾಂಶ ಗೊತ್ತಿಲ್ಲದೆ, ಏನೇನೋ ಸುದ್ದಿಗಳು ಹರಿದಾಡುತ್ತಿವೆ. ನಾವು ಅಂದೆ ದೂರು ಕೊಡ ಬಹುದಿತ್ತು. ಆದರೆ ಯಾಕೆ ಅಂತ ಸುಮ್ಮನಾದೆವು". ಎಂದು ಘಟನೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ ಜೈ ಜಗದೀಶ್.

More from Filmibeat

English summary
Assault Complaint Against Actor Jai Jagadish, His First Reaction Is Here, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X