ನಟ ದರ್ಶನ್ ಗಂಡಸ್ತನ ಸವಾಲಿಗೆ ಇಂದ್ರಜಿತ್ ತಿರುಗೇಟು
''ಇಂದ್ರಜಿತ್ ಲಂಕೇಶ್ ಬಳಿ ನನ್ನದೊಂದು ಆಡಿಯೋ ಇದೆ. ಅವರಿಗೆ ಗಂಡಸ್ತನ ಇದ್ದರೆ ಇಂದು ಸಂಜೆ ವೇಳೆಗೆ ಅದನ್ನು ಬಿಡುಗಡೆ ಮಾಡಲಿ ನೋಡೋಣ'' ಎಂದು ನಟ ದರ್ಶನ್ ಸವಾಲ್ ಹಾಕಿದ್ದರು.
ನಟ ದರ್ಶನ್ ಅವರ ಚಾಲೆಂಜ್‌ಗೆ ತಿರುಗೇಟು ನೀಡಿದ ಇಂದ್ರಜಿತ್, ''ಗಂಡಸ್ತನ ಎನ್ನುವುದು ಆಡಿಯೋ ಬಿಡುಗಡೆ ಮಾಡಿದ್ರೆ ಬರಲ್ಲ, ಇದು ಗಂಡಸ್ತನ ಸಾಬೀತು ಪಡಿಸುವ ಪ್ರಶ್ನೆಯಲ್ಲ. ನೀವು ಹೋಟೆಲ್ ಸಿಬ್ಬಂದಿಗೆ ಹೊಡೆದ್ರಾ, ಇಲ್ವೋ ಅಷ್ಟೇ'' ಎಂದು ಪ್ರಶ್ನಿಸಿದ್ದಾರೆ.
''ಒಬ್ಬ ಸಾಮಾನ್ಯನಿಗೆ ಹೊಡೆದಿದ್ದು ಎಷ್ಟು ಸರಿ? ಮಹಿಳೆಯನ್ನು ಮನೆಗೆ ಕರೆಯಿಸಿಕೊಂಡಿದ್ದು ಏಕೆ? ನಿಮ್ಮ ಪದ, ನಿಮ್ಮ ಬಳಕೆ ನಿಮ್ಮ ಸಂಸ್ಕೃತಿ ತೋರಿಸುತ್ತಿದೆ. ಹೋಟೆಲ್‌ನಲ್ಲಿ ನೀವು ಯಾರ ಜೊತೆ ಗಂಡಸ್ತನ ಪ್ರೂವ್ ಮಾಡೋಕೆ ಹೋಗಿದ್ರಿ'' ಎಂದು ತಿರುಗೇಟು ಕೊಟ್ಟರು.

''ನೀವು ಸಂಸಾರ ಜೀವನದಲ್ಲಿ ವಿಚಲಿತರಾಗಿರುವುದು ತಿಳಿಯುತ್ತಿದೆ. ಮೊದಲು ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ. ನಾನು ಗೂಂಡಾಗಿರಿ ಎಂದು ಹೇಳಿದ್ದು. ನಾನು ಸೆಲೆಬ್ರಿಟಿಗಳಿಗೆ ಅನ್‌ಎಜುಕೇಟೆಡ್ ಅಂದಿಲ್ಲ'' ಎಂದು ಇಂದ್ರಜಿತ್ ಉತ್ತರಿಸಿದರು.
ದರ್ಶನ್ ಅವರಿಗೆ ಸಂಬಂಧಿಸಿದಂತೆ ಆಡಿಯೋ ಇದೆಯಾ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಇಂದ್ರಜಿತ್, ''ಆಡಿಯೋ ಇದೆಯೋ ಇಲ್ವೋ, ಸಾಕ್ಷ್ಯ ಇದೆಯೋ ಇಲ್ಲವೋ ಎನ್ನುವುದನ್ನು ಪೊಲೀಸರ ಬಳಿ ಚರ್ಚೆ ಮಾಡ್ತೇನೆ. ನಿಮ್ಮ ಮುಂದೆ ಹೇಳುವ ಅಗತ್ಯವಿಲ್ಲ'' ಎಂದು ಇಂದ್ರಜಿತ್ ಸ್ಪಷ್ಟನೆ ಕೊಟ್ಟಿದ್ದಾರೆ.


Click it and Unblock the Notifications











