'ದಾಸ'ನ ಜೈಲು ವಾಸ ಇಷ್ಟಕ್ಕೆ ಮುಗಿಯಲ್ಲ, ಮುಂದೆ ಇನ್ನೊಮ್ಮೆ ಜೈಲು ಸೇರುವ ಸಾಧ್ಯತೆ ಇದೆ ಎಂದ ಜ್ಯೋತಿಷಿ..!
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ.
ಈ ವಾದ-ವಿವಾದ ಏನೇ ಇರಲಿ.. ಸದ್ಯಕ್ಕೆ ದರ್ಶನ್ ಹಣೆಬರಹಕ್ಕೆ ಈ ಗ್ರಹ ಗತಿಗಳೇ ಕಾರಣ ಎಂಬ ಮಾತುಗಳು ಮಾತ್ರ ದಶ ದಿಕ್ಕುಗಳಲ್ಲಿ ಬಲವಾಗಿ ಕೇಳಿ ಬರುತ್ತಿವೆ. ಎದುರಾದ ಇದೊಂದು ಅಪಾಯವನ್ನು ದರ್ಶನ್ ಪಾರು ಮಾಡಿದರೆ ಮುಂದೆ ಯಾರಿಂದನೂ ದರ್ಶನ್ ಅವರನ್ನು ತಡೆಯಲು ಸಾಧ್ಯ ಇಲ್ಲ ಎಂಬ ಭವಿಷ್ಯವಾಣಿ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ನಾನು ಅಂದರೆ ನಂಬರ್.. ನಂಬರ್ ಅಂದರೆ ನಾನು..ಎನ್ನುವ ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ದರ್ಶನ್ ಅವರ ಜಾತಕ ಹರಿವುಕೊಂಡು ಮುಂದೆ ಏನೆಲ್ಲ ಆಗಬಹುದು ಎನ್ನುವುದನ್ನು ಈಗ್ಲೇ ಹೇಳಲು ಶುರು ಮಾಡಿದ್ದಾರೆ. ಸದ್ಯದಲ್ಲಿಯೇ ದರ್ಶನ್ ಬಂಧನದಿಂದ ಮುಕ್ತರಾಗುತ್ತಾರೆ ಎಂದು ಕೂಡ ಹೇಳುತ್ತಿದ್ದಾರೆ. ಈ ನಡುವೆ ಈಗ ದರ್ಶನ್ ಮುಂದಿನ ಜೀವನದ ಬಗ್ಗೆ ಈಗ ಜ್ಯೋತಿಷಿ ದಿನೇಶ್ ಭಟ್ ಸ್ಫೋಟಕವಾದ ಭವಿಷ್ಯವನ್ನು ಹೇಳಿದ್ದಾರೆ. ರಾಜಕೀಯದಲ್ಲಿ ದರ್ಶನ್ ಮಿಂಚುವುದು ಖಚಿತ.. ನಿಶ್ಚಿತ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಹೌದು, ವಿಸ್ತಾರ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದಿನೇಶ್ ಭಟ್, ಸದ್ಯ ಆರು ತಿಂಗಳವರೆಗೂ ದರ್ಶನ್ ಸೆರೆವಾಸದಲ್ಲೇ ಇರೋ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನೂ ದರ್ಶನ್ ಪರಪ್ಪನ ಅಗ್ರಹಾರದ ಪಾಲಾದ ನಂತರ ಇದೆಲ್ಲವೂ ಸಹವಾಸ ದೋಷ ಮತ್ತು ಸ್ರ್ತೀ ದೋಷದಿಂದ ಎದುರಾದ ಗಂಡಾಂತರ ಎಂದು ಜನಸಾಮಾನ್ಯರೇ ಮಾತನಾಡಿಕೊಂಡಿದ್ದರು. ಈ ಮಾತುಗಳನ್ನೇ ಪುನರುಚ್ಚಿಸಿರುವ ದಿನೇಶ್ ಭಟ್, ದರ್ಶನ್ ಗೆ ಸ್ತ್ರೀ ದೋಷ ಇದೆ ಎಂದಿದ್ದಾರೆ.
ಇನ್ನೂ..ಅಜಾಗರೂಕತೆಯಿಂದ ಎದುರಾದ ಈ ಕಷ್ಟಗಳಿಂದ ದರ್ಶನ್ ಮತ್ತೆ ಹೊರ ಬರಲು ಕೆಲ ಸಮಯ ಬೇಕಾಗುತ್ತೆ ಎಂದಿರುವ ದಿನೇಶ್ ಭಟ್, 2026ರ ನಂತರ ದರ್ಶನ್ ಮತ್ತೆ ಕನ್ನಡ ಚಿತ್ರರಂಗದ ಸ್ಟಾರ್ ಹೀರೋ ಆಗಿ ಮಿಂಚುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ. ಜ್ಯೋತಿಷ್ಯದ ಪ್ರಕಾರ ದರ್ಶನ್ ಮುಂದೊಂದು ದಿನ ರಾಜಕೀಯಕ್ಕೆ ಧುಮುಕುವ ಸಾಧ್ಯತೆ ಕೂಡ ಇದೆ ಅಂದಿದ್ದಾರೆ. ಆದರೆ ಅದಕ್ಕೆ ದರ್ಶನ್ ಮನಸು ಮಾಡ್ತಿಲ್ಲ. ಮಾಡಿದರೆ ರಾಜಕೀಯದಲ್ಲಿ ದರ್ಶನ್ ಅವರಿಗೆ ವಜ್ರ ಖಚಿತ ಸಿಂಹಾಸನ ದಕ್ಕುವುದು ಗ್ಯಾರಂಟಿ ಎಂದಿದ್ದಾರೆ ದಿನೇಶ್ ಭಟ್

ಉಳಿದಂತೆ, ದರ್ಶನ್ ಜೈಲು ಪಾಲಾಗಿದ್ದು ಇದು ಮೊದಲೇನಲ್ಲ. ಇಂದು ಮತ್ತು ಅಂದು.. ದರ್ಶನ್ ಅವರಿಗೆ ಎರಡು ಬಾರಿ ಜೈಲಿನಲ್ಲಿದ್ದ ಅನುಭವ ಇದೆ. ಹಾಗಂಥ.. ಇದು ಕೊನೆಯಲ್ಲ. ದಿನೇಶ್ ಭಟ್ ಅವರು ಹೇಳಿರುವ ಭವಿಷ್ಯದ ಪ್ರಕಾರ ಮುಂವರುವ ದಿನಗಳಲ್ಲಿ ದರ್ಶನ್‌ಗೆ ರಾಜಯೋಗ ಇದ್ದರೂ ಕೂಡ, ಕೆಲ ಕಷ್ಟಗಳು ಎದುರಾಗುತ್ತವೆ. ಇಷ್ಟೇ ಅಲ್ಲ.. ತನ್ನದಲ್ಲದ ತಪ್ಪಿಗೆ.. ಬೇರೆಯವರಿಗೆ ಉಪಕಾರ ಮಾಡಲು ಹೋಗಿ, ದರ್ಶನ್ ಭವಿಷ್ಯತ್ಕಾಲದಲ್ಲಿ ಮತ್ತೊಮ್ಮೆ ಜೈಲು ಸೇರುವ ಎಲ್ಲ ಸಾಧ್ಯತೆಯೂ ಇದೆ ಎಂದಿದ್ದಾರೆ ಜ್ಯೋತಿಷಿ ದಿನೇಶ್ ಭಟ್..
ಇನ್ನೂ ದರ್ಶನ್ ಮತ್ತು ವಿಜಯ ಲಕ್ಷ್ಮೀ ಅವರ ಸಂಬಂಧ ಎಲ್ಲರಿಗೆ ಗೊತ್ತಿರುವ ವಿಚಾರವೇ. ಸರಸ-ವಿರಸ-ಕೋಪ-ತಾಪ-ವಾದ-ವಿವಾದ-ಶಾಂತಿ-ಅಶಾಂತಿಗಳಿಂದ ತುಂಬಿರುವ ಇವರ ಸಂಸಾರ, ಮುಂದೆ.. ಚೆನ್ನಾಗಿರುತ್ತೆ ಎನ್ನುವ ಭವಿಷ್ಯವನ್ನೂ ಕೂಡ ದಿನೇಶ್ ಭಟ್ ಹೇಳಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮೀ ಆದರ್ಶ ದಂಪತಿಗಳಂತೆ ಮುಂದೆ ಬದುಕುತ್ತಾರೆ ಎಂಬ ಅರ್ಥದಲ್ಲಿ ಮಾತುಗಳನ್ನೂ ಆಡಿದ್ದಾರೆ.

ಸದ್ಯಕ್ಕೆ ದಿನೇಶ್ ಭಟ್ ತಮ್ಮ ಈ ಭವಿಷ್ಯವನ್ನು ನಿಮ್ಮ ನೆಚ್ಚಿನ ವಿಸ್ತಾರ ವಾಹಿನಿ ಜೊತೆ ಹಂಚಿಕೊಂಡಿದ್ದು, ದಿನೇಶ್ ಭಟ್ ಅವರು ಹೇಳಿರುವಂತೆ ಮುಂದೆ ಎಲ್ಲವೂ ನಡೆಯುತ್ತಾ ಅನ್ನುವುದನ್ನೂ ಈಗ ಕಾದು ನೋಡಬೇಕಿದೆ.


Click it and Unblock the Notifications











