ಯಶ್ ಹೇಳಿದ ದಿನಾಂಕಕ್ಕೆ 'ಟಾಕ್ಸಿಕ್' ರಿಲೀಸ್ ಆಗಲ್ಲ; ಅಂದೇ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ

ಅಭಿಮಾನಿಗಳ ಉತ್ಸಾಹಕ್ಕೆ ಕೊಂಚ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಮಾರ್ಚ್ 19ಕ್ಕೆ 'ಧುರಂಧರ್- 2' ಎದುರಿನ ಬಾಕ್ಸಾಫೀಸ್ ಕ್ಲ್ಯಾಶ್ ನಡೀತಿಲ್ಲ. ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇಸ್ರೇಲ್-ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ 'ಟಾಕ್ಸಿಕ್' ಸಿನಿಮಾ ರಿಲೀಸ್ ತಡವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಪದೇ ಪದೆ ಸಿನಿಮಾ ರಿಲೀಸ್ ಡೇಟ್ ಮುಂದೂಡುತ್ತಿರುವುದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ. ಕಳೆದ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಎಂದು ಮೊದಲು ಘೋಷಿಸಿದ್ದರು. ಬಳಿಕ ಹೆಚ್ಚು ಕಮ್ಮಿ ಒಂದು ವರ್ಷ ತಡವಾಗಿ ಸಿನಿಮಾ ತೆರೆಗೆ ತರಲು ಮನಸ್ಸು ಮಾಡಿದ್ದರು. ಇನ್ನು 15 ದಿನ ಬಾಕಿ ಇರುವಾಗ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.

Astrologer s Prediction Comes True Yash s Toxic Postponed to June 4 Amid Global Tensions

2026ರ ವರ್ಷವೇ ನಟ ಯಶ್ ಅವರಿಗೆ ಆಗಿ ಬರಲ್ಲ. 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಬದಲಾಗಬಹುದು ಎಂದು ಖ್ಯಾತ ಜ್ಯೋತಿಷಿ ಡಾ. ಮುಗೂರು ಮಧುದೀಕ್ಷಿತ್ ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅದು ಈಗ ನಿಜವಾದಂತೆ ಆಗಿದೆ. 'ಆತ್ಮೀಯ ಕನ್ನಡಿಗ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ವರ್ಷ ಅಂದರೆ 2026ರ ವರ್ಷ ಯಶ್ ಅವರಿಗೆ ಲಾಭ ತಂದುಕೊಡುತ್ತಾ? ಎನ್ನುವ ಬಗ್ಗೆ ಮಧುದೀಕ್ಷಿತ್ ಮಾತನಾಡಿದ್ದರು.

"ಯಶ್ ಅಂದರೆ ಎಕ್ಸ್‌ಪ್ರೆಶನ್ ನಂಬರ್ 1 ಬರುತ್ತದೆ. ಈ ವರ್ಷ ಅವರ ಪರ್ಸನಲ್ ನಂಬರ್ ಕೂಡ 1. ಆದರೆ 2026ರ ವರ್ಷಕ್ಕೆ ಅವರ ಜನ್ಮ ದಿನಾಂಕ '8' ಮ್ಯಾಚ್ ಆಗ್ತಿಲ್ಲ" ಎಂದು ಮಧುದೀಕ್ಷಿತ್ ವಿಶ್ಲೇಷಿಸಿದ್ದರು. "KGF' ಸಕ್ಸಸ್ ಗಮನದಲ್ಲಿಟ್ಟುಕೊಂಡು ನೋಡಿದ್ರೆ, ಈ ವರ್ಷ ಅವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ತಾವೆ. ಬ್ಯುಸಿನೆಸ್ ಚೆನ್ನಾಗಿ ಆಗುತ್ತೆ. ಆದರೆ ವೈಯಕ್ತಿಕವಾಗಿ ಅವರ ನಿರೀಕ್ಷೆ ತಲುಪುತ್ತಾ ಅಂದ್ರೆ ಕಷ್ಟ. ಸಿನಿಮಾ ರಿಲೀಸ್ ಡೇಟ್ ತಡವಾಗಬಹುದು, ಅಂದುಕೊಂಡ ಸಮಯಕ್ಕೆ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಮುಗಿಯದೇ ಇರಬಹುದು. ನಿರೀಕ್ಷೆಗೆ ತಕ್ಕಂತೆ ಬ್ಯುಸಿನೆಸ್ ಆಗದೇ ಇರಬಹುದು. ಆ ಮಟ್ಟಕ್ಕೆ ಯಶಸ್ಸು ಸಿಗದೇ ಇರಬಹುದು. ಹಾಗಾಗಿ ಈ ವರ್ಷ ಯಶ್ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಬಹಳ ಪ್ಲ್ಯಾನಿಂಗ್ ಮಾಡ್ಕೊಂಡು ಬರಬೇಕು" ಎಂದು ಸಲಹೆ ನೀಡಿದ್ದರು.

'KGF- 2' ಸಿನಿಮಾ ತೆರೆಕಂಡು 4 ವರ್ಷ ಕಳೆದಿದೆ. ಆ ಬಳಿಕ ಯಶ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. 'ಟಾಕ್ಸಿಕ್' ಸಿನಿಮಾ ಬಹಳ ತಡವಾಗಿ ಸೆಟ್ಟೇರಿತ್ತು. ಚಿತ್ರಕ್ಕೆ ಕಥೆ, ನಿರ್ದೇಶಕರನ್ನು ಆಯ್ಕೆ ಮಾಡಲು ಯಶ್ ಬಹಳ ಸಮಯ ತೆಗೆದುಕೊಂಡಿದ್ದರು. 2025ರ ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್ ಎಂದು ಸಣ್ಣ ಟೀಸರ್ ಮೂಲಕ ಘೋಷಿಸಿಬಿಟ್ಟರು. ಆದರೆ ಸಿನಿಮಾ ಚಿತ್ರೀಕರಣ ಶುರುವಾಗಿದ್ದು ಬಹಳ ತಡವಾಯಿತು. ಹಾಗಾಗಿ ಈ ವರ್ಷ ಮಾರ್ಚ್ 19ಕ್ಕೆ ರಿಲೀಸ್ ಡೇಟ್ ಮುಂದೂಡಿದ್ದರು.

ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ಮಾರ್ಕೆಟಿಂಗ್ ಪ್ಲ್ಯಾನ್ ಮಾಡಲಾಗ್ತಿದೆ. ಇತ್ತೀಚೆಗೆ ಟೀಸರ್ ರಿಲೀಸ್ ಆಗಿತ್ತು. ಒಂದು ಸಾಂಗ್ ಕೂಡ ಹೊರಬಂದು ಸದ್ದು ಮಾಡ್ತಿದೆ. ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಭರ್ಜರಿಯಾಗಿ ಮಾರಾಟವಾಗಿದೆ. ಈಗಾಗಲೇ 600 ಕೋಟಿ ರೂ. ಬ್ಯುಸಿನೆಸ್ ಆಗಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಎಂದು ದಿನಗಣನೆ ಶುರು ಮಾಡಿದ್ದವರಿಗೆ ಕಂಡಿತ ನಿರಾಸೆಯಾಗಿದೆ. ಇನ್ನೆರಡು ದಿನಗಳಲ್ಲಿ ಟ್ರೈಲರ್ ರಿಲೀಸ್ ಎಂದು ಕಾಯುತ್ತಿದ್ದವರು ಈಗ ಬೇಸರಗೊಂಡಿದ್ದಾರೆ.

More from Filmibeat

Read more about: yash toxic kvn productions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X