Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ranbir Kapoor-Alia Bhatt Wedding: ಆಲಿಯಾ-ರಣ್ಬೀರ್ ಮದುವೆ, ಮಕ್ಕಳು, ಹೊಂದಾಣಿಕೆ ಭವಿಷ್ಯ ನುಡಿದ ಜ್ಯೋತಿಷಿ!
ಬಾಲಿವುಡ್‌ನಲ್ಲಿ ಸದ್ಯ ಬಿಸಿ, ಬಿಸಿಯಾಗಿ ಚರ್ಚೆ ಆಗುತ್ತಿರುವ ಸುದ್ದಿ ಅಂದರೆ ಅದು ರಣ್‌ಬೀರ್ ಮತ್ತು ಆಲಿಯ ಭಟ್ ಮದುವೆ ವಿಚಾರ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ. ಸದ್ಯ ಮಾಹಿತಿಯ ಪ್ರಕಾರ, ಈ ತಿಂಗಳಲ್ಲೇ ಈ ಜೋಡಿ ಮದುವೆ ಆಗುತ್ತದೆ ಎನ್ನಲಾಗಿದೆ.
ಇವರ ಮದುವೆ ಸುದ್ದಿ ಹಬ್ಬುತ್ತಲೆ, ನಾನಾ ಸುದ್ದಿಗಳು ಹಬ್ಬಿವೆ. ಅದರಲ್ಲೂ ಈ ಜೋಡಿಯ ಮದುವೆ ಭವಿಷ್ಯ ಹೇಳಿರುವುದು ಕೂಡ ಅಚ್ಚರಿಯ ವಿಚಾರ. ಖಾಸಗಿ ಮಾಧ್ಯಮ ಒಂದರಲ್ಲಿ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಮದುವೆಯ ಭವಿಷ್ಯ ಹೇಗೆ ಇರಲಿದೆ? ಮದುವೆ ಬಳಿಕ ಈ ಜೋಡಿ ಹೇಗೆ ಇರಲಿದೆ? ಎನ್ನುವ ಬಗ್ಗೆ ಜ್ಯೋತಿಷಿಗಳು ಶಾಸ್ತ್ರ ನುಡಿದಿದ್ದಾರೆ.
Alia-Ranbir:
ಆಲಿಯಾ
ಭಟ್-
ರಣ್ಬೀರ್
ಮದುವೆ
ದಿನಾಂಕ,
ಸ್ಥಳ
ನಿಗದಿ
ಈಗಾಗಲೆ ಬಾಲಿವುಡ್‌ನಲ್ಲಿ ಈ ಜೋಡಿಯ ಮದುವೆ, ಸ್ಥಳ, ದಿನಾಂಕ ಮತ್ತು ಬ್ಯಾಚುರಲ್ ಪಾರ್ಟಿ ಬಗ್ಗೆಯೂ ಯೋಜನೆ ಸುದ್ದಿಗಳು ಹರಿದಾಡುತ್ತಾ ಇವೆ. ಇದರ ನಡುವೆ ಮದುವೆ ಬಗ್ಗೆ, ಬಳಿಕ ಜೀವನದ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಾ ಇದ್ದಾರೆ.
ನಟಿ ಆಲಿಯಾ ಮತ್ತು, ರಣ್‌ಬೀರ್ ಕಪೂರ್ ಹುಟ್ಟಿದ ದಿನಾಂಕದ ಆಧಾರದ ಮೇಲೆ ಈ ಜೋಡಿಯ ಮದುವೆ ಭವಿಷ್ಯವನ್ನು ಹೇಳಲಾಗುತ್ತಿದೆ. ಇವರ ಡೇಟ್ ಆಫ್ ಬರ್ತ್ ಪ್ರಕಾರ, ಈ ವರ್ಷ ಏಪ್ರಿಲ್ ತಿಂಗಳೇ ಈ ಜೋಡಿ ಮದುವೆ ಆಗಲು ಉತ್ತಮ ಸಮಯ ಅಂತೆ.

Recommended Video

ಆಲಿಯಾ, ರಣ್‌ಬೀರ್ ಕಪೂರ್ ಇಬ್ಬರಿಗೂ ಈಗ ಗುರುಬಲ ಶುರುವಾಗುತ್ತಿದೆಯಂತೆ. ಹಾಗಾಗಿ ಈ ಜೋಡಿ ಈಗಲೇ ಮದುವೆ ಆಗುವುದು ಉತ್ತಮ ಎನ್ನಲಾಗುತ್ತಿದೆ. ಇನ್ನು ಏಪ್ರಿಲ್ ಬಿಟ್ಟರೆ ಇವರು ಮದುವೆ ಆಗಲು ಜೂನ್ ತಿಂಗಳು ಉತ್ತಮ ಅಂತೆ. ಇನ್ನು ಇವರ ಹೊಂದಾಣಿಕೆ ವಿಚಾರದ ಬಗ್ಗೆಯೂ ಹೇಳಲಾಗಿದೆ. ನಟಿ ಆಲಿಯಾ ಹೆಚ್ಚಾಗಿ ಕುಟುಂಬದ ಕಡೆಗೆ ಗಮನ ಕೊಡುವ ಸ್ವಭಾವದವರು. ಇನ್ನು ರಣ್‌ಬೀರ್ ಮಿಸ್ಟರ್ ಪರ್ಫೆಕ್ಟ್ ಅಂತೆ. ಹಾಗಾಗಿ ಇವರ ನಡುವೆ ಆಗಾಗ ಜಗಳ ಆದರೂ ಕೂಡ, ಹೊಂದಾಣಿಕೆ ಇರುತ್ತದೆ ಎಂದು ಕೆಲವು ಜ್ಯೋತಿಷಿಗಳು ಅಭಿಪ್ರಾಯ ಪಟ್ಟಿದ್ದಾರೆ.