»   » ನರ, ಅಸುರನಾಗಿ ಮತ್ತೆ ಸುರನಾದ ಕಥೆ

ನರ, ಅಸುರನಾಗಿ ಮತ್ತೆ ಸುರನಾದ ಕಥೆ

Posted By: Super
Subscribe to Filmibeat Kannada

ಈತನೇನೂ ಹುಟ್ಟಿನಿಂದಲೇ ರಾಕ್ಷಸನಲ್ಲ. ಆದರೆ, ಪರಿಸ್ಥಿತಿ ಇವನನ್ನು ಅಸುರನನ್ನಾಗಿ ಮಾಡುತ್ತದೆ. ಅಸುರನಾದ ಈತ ಅ ಎಂಬ ಅಕ್ಷರ ಕಳಚಿಕೊಂಡು ಮತ್ತೆ ಸುರನಾಗುತ್ತಾನೆ. ಅರ್ಥಾತ್‌ ದೇವರಾಗುತ್ತಾನೆ. ನರನಾಗಿ (ಮನುಷ್ಯ) ಹುಟ್ಟಿ, ಅಸುರನಾಗಿದ್ದ ಈತ ಮತ್ತೆ ಹೇಗೆ ಸುರನಾದ? ಈತ ಸುರ ಅರ್ಥಾತ್‌ ದೇವರಾಗಲು ಕಾರಣ ಏನು? ಈ ಕುತೂಹಲ ನಿಮಗೆ ಅಸುರ ಚಿತ್ರ ನೋಡಿದ ಬಳಿಕವೇ ತಣಿಯಲು ಸಾಧ್ಯ.

ಸಂದೇಶ್‌ ನಾಗರಾಜ್‌ ಅರ್ಪಿಸಿ, ಸಂದೇಶ್‌ ಎಂಟರ್‌ಪ್ರೆೃಸಸ್‌ ಲಾಂಛನದಲ್ಲಿ ಸಂದೇಶ್‌ ಸ್ವಾಮಿ (ಸತೀಶ್‌) ನಿರ್ಮಿಸಿರುವ ಅಸುರ ಚಿತ್ರದ ನಾಯಕ ಶಿವರಾಜ್‌ಕುಮಾರ್‌. ಶಿವರಾಜ್‌ರಿಗೆ ನಾಯಕಿಯಾಗಿ ದಾಮಿನಿ ನಟಿಸಿದ್ದಾರೆ. ಎಸ್‌. ಮಹೇಂದರ್‌ ನಿರ್ದೇಶಿಸಿದ್ದಾರೆ. ಕೃಷ್ಣಕುಮಾರ್‌ ಛಾಯಾಗ್ರಹಣ, ಗುರುಕಿರಣ್‌ ಸಂಗೀತ, ಬಿ.ಎ. ಮಧು ಸಂಭಾಷಣೆ, ಸುಂದರ್‌ರಾಜ್‌ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.

ಶಿವರಾಜ್‌, ದಾಮಿನಿಯ ಜತೆಯಲ್ಲಿ ರಘುವರನ್‌, ಅನಂತ್‌ನಾಗ್‌, ಅರವಿಂದ್‌, ಚಿತ್ರಾಶೆಣೈ ಮೊದಲಾದವರಿದ್ದಾರೆ. ಯುಗಾದಿಗೆ ಮುನ್ನ ಅಂದರೆ 23ರ ಶುಕ್ರವಾರ ಬೆಂಗಳೂರಿನ ನರ್ತಕಿ, ವೀರೇಶ, ಉಮಾ, ಶಾಂತಿ, ಗೋವರ್ಧನ್‌, ಸಂಪಿಗೆ, ಆದರ್ಶ, ಸಿದ್ದೇಶ್ವರ, ಬಾಲಾಜಿ (ತಾವರೆಕೆರೆ), ವಿಜಯ್‌, ವೀರಭದ್ರೇಶ್ವರ (ದಿನ 3 ಆಟ) ನವರಂಗ್‌ (ದಿನ 2 ಆಟ), ಬೆಳಗಿನ ಪ್ರದರ್ಶನ : ನರ್ತಕಿ, ವೀರೇಶ್‌, ನಂದ, ಗೋವರ್ಧನ್‌, ಆದರ್ಶ, ಅಜಂತ, ಗೀತಾಂಜಲಿ, ಗೋಪಾಲ್‌ ಚಿತ್ರಮಂದಿರಗಳಲ್ಲಿ ಅಸುರ ತೆರೆಕಂಡಿದ್ದಾನೆ.

ಕುರಿಗಳು ಸಾರ್‌ ಕುರಿಗಳು : ಕವಿ ನಿಸಾರ್‌ ಅಹ್ಮದ್‌ ಅವರ ಜನಪ್ರಿಯ ಗೀತೆಯಾಂದರ ಮೊದಲ ಸಾಲನ್ನೇ ಚಿತ್ರದ ಹೆಸರಾಗಿ ಉಳ್ಳ ಈ ಚಿತ್ರ ಶುಕ್ರವಾರ ತೆರೆಕಂಡ ಮತ್ತೊಂದು ಕನ್ನಡ ಚಿತ್ರ. ಮಾಡರ್ನ್‌ ಬ್ರಹ್ಮ, ವಿಷ್ಣು, ಮಹೇಶ್ವರನ ಪಾತ್ರದಲ್ಲಿ ಯೂ ಕಾಣಿಸಿಕೊಳ್ಳುವ ಮೋಹನ್‌, ಎಸ್‌. ನಾರಾಯಣ್‌ ಹಾಗೂ ರಮೇಶ್‌ ನಾಯಕರು. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅನಂತ್‌ನಾಗ್‌ ಇದ್ದಾರೆ.

ರುಚಿತಾ ಪ್ರಸಾದ್‌, ಭಾವನಾ ಹಾಗೂ ರಕ್ಷಾ ನಾಯಕಿಯರು. ಸೆನ್ಸಾರ್‌ ಗೊಂದಲಗಳೊಂದಿಗೆ ಬಿಡುಗಡೆಗೆ ವಾರ ಮುನ್ನ ಭಾರಿ ಸುದ್ದಿ ಮಾಡಿದ ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ಈ ಚಿತ್ರವನ್ನು ಜೈಜಗದೀಶ್‌ ಹಾಗೂ ವಿಜಯಲಕ್ಷ್ಮೀ ಸಿಂಗ್‌ ಹಾಗೂ ದುಷ್ಯಂತ್‌ ಸಿಂಗ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ಬಿ.ಸಿ. ಗೌರಿಶಂಕರ್‌ ಛಾಯಾಗ್ರಹಣ ಹಾಗೂ ಹಂಸಲೇಖರ ಸಂಗೀತ ಇದೆ. ಇದೊಂದು ಹಾಸ್ಯ ಪ್ರಧಾನ ಚಿತ್ರ.

ಬೆಂಗಳೂರಿನ ಸಂತೋಷ್‌, ಪ್ರಮೋದ್‌, ನವರಂಗ್‌, ನಂದಾ, ನಳಂದಾ, ಉಲ್ಲಾಸ್‌, ಮೋಹನ್‌, ವೆಂಕಟೇಶ್ವರ (ದಿನ 3 ಆಟಗಳು), ಕಾವೇರಿ (ದಿನ 2 ಆಟ), ಬೆಳಗಿನ ಪ್ರದರ್ಶನ : ಸಂತೋಷ್‌, ಪ್ರಸನ್ನ, ನಳಂದಾ, ಪುಟ್ಟಣ್ಣ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

English summary
Asura and kurigalu saar kuriglu this weaks gift for ugadiA

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada