ಆ ಒಬ್ಬಾಕೆಗಾಗಿ 25 ಸಲ ಆ ಸಿನಿಮಾ ನೋಡಿದ್ದರಂತೆ ವಾಜಪೇಯಿ

By Bharath Kumar

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಗ್ರೇಟ್ ರಾಜಕಾರಣಿ. ಕೇವಲ ರಾಜಕಾರಣಿ ಮಾತ್ರವಲ್ಲ ಇವರೊಬ್ಬ ಅತ್ಯುತ್ತಮ ಕವಿ ಮತ್ತು ಸಾಹಿತಿ. ಭಾರತದ ಭವಿಷ್ಯ ಬದಲಿಸಲು ಹಲವು ರೀತಿಯಲ್ಲಿ ದಿಟ್ಟ ನಿರ್ಧಾರಗಳನ್ನ ತೆಗೆದುಕೊಂಡು, ಹಲವು ಅಭಿವೃದ್ಧಿ ಕೆಲಸಗಳನ್ನ ಮಾಡಿದ ಸ್ವಾಭಿಮಾನಿ ನಾಯಕ.

ಇಂತಹ ನಾಯಕನಿಗೆ ಸಿನಿಮಾ ಪ್ರಪಂಚದ ಜೊತೆಯಲ್ಲಿ ಕೂಡ ಉತ್ತಮ ಸಂಬಂಧವಿತ್ತು. ಹಾಗಂತ ಯಾವುದೇ ಸಿನಿಮಾದಲ್ಲಿ ನಟಿಸಿರುವುದಾಗಲಿ ಅಥವಾ ಕಥೆ ಬರೆಯವುದಾಗಲಿ ಮಾಡಿಲ್ಲ. ಬದಲಾಗಿ ಒಳ್ಳೆಯ ಚಿತ್ರಗಳನ್ನ ಪ್ರೋತ್ಸಾಹಿಸುತ್ತಿದ್ದರಂತೆ. ಕಲಾವಿದರು ಅಂತ ಹೋದ್ರೆ ಹೃದಯಪೂರ್ವಕವಾಗಿ ಸಹಾಯ ಮಾಡುತ್ತಿದ್ದರಂತೆ.

ಇಂತಹ ವಾಜಪೇಯಿ ಅವರು ಒಂದು ಸಿನಿಮಾವನ್ನ ಬರೋಬ್ಬರಿ 25 ಸಲ ನೋಡಿದ್ದರಂತೆ. ಅದು ಆ ಒಬ್ಬ ಆಕೆಗಾಗಿ ಎನ್ನುವುದು ವಿಶೇಷ. ಆ ಒಬ್ಬಾಕೆಗೆ ವಾಜಪೇಯಿ ಅಭಿಮಾನಿಯಾಗಿಬಿಟ್ಟಿದ್ದರಂತೆ. ಅಷ್ಟಕ್ಕೂ, ವಾಜಪೇಯಿ ನೋಡಿದ ಆ ಚಿತ್ರ ಯಾವುದು.? ಆ ಒಬ್ಬಾಕೆ ಯಾರು.? ಮುಂದೆ ಓದಿ......

'ಸೀತಾ ಔರ್ ಗೀತಾ' ಚಿತ್ರಕ್ಕೆ ವಾಜಪೇಯಿ ಫಿದಾ

'ಸೀತಾ ಔರ್ ಗೀತಾ' ಚಿತ್ರಕ್ಕೆ ವಾಜಪೇಯಿ ಫಿದಾ

ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರು ಬಾಲಿವುಡ್ ಸಿನಿಮಾಗಳನ್ನ ಹೆಚ್ಚು ನೋಡುತ್ತಿದ್ದರು. ಹೆಚ್ಚು ಹಾಡುಗಳನ್ನ ಕೇಳುತ್ತಿದ್ದರು. ಆದ್ರೆ, 1972ರಲ್ಲಿ ಬಿಡುಗಡೆಯಾಗಿದ್ದ 'ಸೀತಾ ಔರ್ ಗೀತಾ' ಚಿತ್ರವನ್ನ ವಾಜಪೇಯಿ ಅವರು ಬರೋಬ್ಬರಿ 25 ಸಲ ನೋಡಿದ್ದಾರಂತೆ. ಈ ವಿಷ್ಯವನ್ನ ಖುದ್ದು ನಟಿ ಹೇಮಾ ಮಾಲಿನಿ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇತಿಹಾಸದಲ್ಲಿ ಎಂದೂ ನಡೆಯದ್ದನ್ನು ಅಂದು ಅಟಲ್ ಮಾಡಿದ್ದರು!

ಹೇಮಾ ಮಾಲಿನಿಯ ಅಭಿಮಾನಿ ಆಗಿಬಿಟ್ಟರು

ಹೇಮಾ ಮಾಲಿನಿಯ ಅಭಿಮಾನಿ ಆಗಿಬಿಟ್ಟರು

'ಸೀತಾ ಔರ್ ಗೀತಾ' ಚಿತ್ರದ ನಾಯಕಿ ಹೇಮಾ ಮಾಲಿನಿ. ಈ ಚಿತ್ರದಲ್ಲಿ ಹೇಮಾ ಮಾಲಿನಿ ಅವರನ್ನ ನೋಡಿ ವಾಜಪೇಯಿ ಅವರು ಅಭಿಮಾನಿಯಾಗಿಬಿಟ್ಟರಂತೆ. ಮೊದಲ ಸಲ ಹೇಮಾ ಮಾಲಿನಿ ಅವರನ್ನ ವಾಜಪೇಯಿ ಅವರು ಭೇಟಿಯಾದಾಗ ತಬ್ಬಿಬ್ಬಾಗಿ ನಿಂತಿದ್ದರಂತೆ. ಆ ವೇಳೆ ಪಕ್ಕದಲ್ಲಿದ್ದ ವ್ಯಕ್ತಿಯನ್ನ ಕೇಳಿದ್ದಕ್ಕೆ 'ನಿಮ್ಮನ್ನ ಮೊದಲ ನೋಡಿದಾಗಲೇ ನಿಮ್ಮ ಅಭಿಮಾನಿಯಾಗಿಬಿಟ್ಟಿದ್ದಾರೆ. ನಿಮ್ಮ 'ಸೀತಾ ಔರ್ ಗೀತಾ' ಚಿತ್ರವವನ್ನ 25 ಸಲ ನೋಡಿದ್ದಾರೆ. ಅದಕ್ಕೆ ಅವರು ಸ್ವಲ್ಪ ನಾಚಿಕೊಂಡಿದ್ದಾರೆ ಎಂದರು' ಎಂದು ನಟಿ ಹೇಮಾ ಮಾಲಿನಿ ಹೇಳಿಕೊಂಡಿದ್ದಾರೆ.

'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು

ಮತ್ತೆ ಮತ್ತೆ ನೋಡಿದ ಸಿನಿಮಾಗಳು

ಮತ್ತೆ ಮತ್ತೆ ನೋಡಿದ ಸಿನಿಮಾಗಳು

ಹೇಮಾ ಮಾಲಿನಿಗೆ ಫಿದಾ ಆಗಿದ್ದ ವಾಜಪೇಯಿ ಅವರು ಹಲವು ಚಿತ್ರಗಳನ್ನ ನೋಡಿದ್ದಾರೆ. ಸಂಜೀವ್ ಕುಮಾರ್, ಸುಮಿತ್ರ ಸೇನ್ ಅವರ ಸಿನಿಮಾಗಳು ಅಂದ್ರೆ ಇಷ್ಟ ಪಡುತ್ತಿದ್ದರು. ಜೊತೆಗೆ ಹಿಂದಿಯ ದೇವದಾಸ್, ಬಂಧ್ನಿ ಚಿತ್ರಗಳು ಸೇರಿದಂತೆ ಹಲವು ಸಿನಿಮಾ ವೀಕ್ಷಿಸಿದ್ದಾರೆ. ಇಂಗ್ಲೀಷ್ ಸಿನಿಮಾಗಳನ್ನ ಕೂಡ ನೋಡುತ್ತಿದ್ದರಂತೆ.

ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು

ವಾಜಪೇಯಿ ಸಾಹಿತ್ಯಕ್ಕೆ ಅಭಿಮಾನಿಗಳಿದ್ದಾರೆ

ವಾಜಪೇಯಿ ಸಾಹಿತ್ಯಕ್ಕೆ ಅಭಿಮಾನಿಗಳಿದ್ದಾರೆ

ವಾಜಪೇಯಿ ಅವರು ಉತ್ತಮ ಸಾಹಿತಿಯಾಗಿದ್ದರು. ಅವರ ಸಾಹಿತ್ಯಕ್ಕೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಕೂಡ ಅಭಿಮಾನಿಯಾಗಿದ್ದರು. ವಾಜಪೇಯಿ ಕವಿತೆಯನ್ನ ಹೆಚ್ಚು ಜನರು ಇಷ್ಟ ಪಡುತ್ತಿದ್ದರು. ಈಗ ಅವರು ಮತ್ತು ಅವರ ಸಾಹಿತ್ಯ ಬರಿ ನೆನಪು ಮಾತ್ರ.

More from Filmibeat

English summary
Did you know that Atal Bihari Vajpayee was a huge admirer of Bollywood's 'Dream Girl' Hema Malini? Last year, in an interview, Hema Malini recollected her first meeting with the former prime minister.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X