twitter
    For Quick Alerts
    ALLOW NOTIFICATIONS  
    For Daily Alerts

    ಪವನ್ ಚಿತ್ರದ 'ಪವರ್ ಫುಲ್'ಗಳಿಕೆ ಕುಸಿತ

    By ಜೇಮ್ಸ್ ಮಾರ್ಟಿನ್
    |

    'ಈ ಚಿತ್ರದ ಕಲೆಕ್ಷನ್ ಹಾಲಿವುಡ್ ರೇಂಜ್ ಗೆ ತಲುಪಿದೆ' ಎಂದು ಖ್ಯಾತ ಚಿತ್ರಕರ್ಮಿ ರಾಮ್ ಗೋಪಾಲ್ ವರ್ಮಾ ಅವರಿಂದಲೂ ಹೊಗಳಿಸಿಕೊಂಡಿರುವ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ 'ಅತ್ತಾರಿಂಟಿಕಿ ದಾರೇದಿ' ಚಿತ್ರಕ್ಕೆ ಬಂದ್ ಭೀತಿ ಎದುರಾಗಿದೆ.

    ಸಮೈಕ್ಯಾಂಧ್ರ ಪ್ರತಿಭಟನೆ, ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಹೋರಾಟಗಾರರ ಅವಿರತ ಪ್ರತಿಭಟನೆ, ದೊಂಬಿಯಿಂದಾಗಿ ಚಿತ್ರಮಂದಿರಕ್ಕೆ ಜನ ಬರುವುದು ಕಡಿಮೆಯಾಗಿದೆ. ಅಲ್ಲದೆ ಸೀಮಾಂಧ್ರ ಭಾಗದ 13 ಜಿಲ್ಲೆಗಳಲ್ಲಿ ಕರೆಂಟ್ ಕಟ್ ಆಗಿ ಎರಡು ದಿನವಾಗಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ 'ಅತ್ತಾರಿಂಟಿಕಿ ದಾರೇದಿ' ಚಿತ್ರ ತಂಡ ಈಗ ಗಳಿಕೆ ಹೆಚ್ಚಿಸಲು ಏನು ಮಾಡಬೇಕು ಎಂದು ತಿಳಿಯದೆ 'ದಾರಿ ಕಾಣದಾಗಿದೆ ರಾಘವೇಂದ್ರನೇ..' ಎಂದು ಹಾಡುವುದೊಂದೇ ಬಾಕಿ.

    ಸೆ.27 ರಂದು ಬೀಡುಗಡೆಗೊಂಡ ಪವನ್ ಅವರ ಚಿತ್ರ ಜಾಗತಿಕವಾಗಿ ಇನ್ನೂ ಸದ್ದು ಮಾಡುತ್ತಿದೆ ಆದರೆ, ಮೊದಲ ವಾರಕ್ಕೆ ಹೋಲಿಸಿದರೆ ಒಟ್ಟಾರೆ ಕಲೆಕ್ಷನ್ ನಲ್ಲಿ ಶೇ 50ರಷ್ಟು ಡಲ್ ಹೊಡೆಯುತ್ತಿದೆ ಎಂಬ ಸುದ್ದಿ ಬಂದಿದೆ. ಅಲ್ಲದೆ ಜ್ಯೂ. ಎನ್ಟಿಆರ್ ಆವರ 'ರಾಮಯ್ಯ ವಸ್ತಾವಯ್ಯ..' ಚಿತ್ರ ಕೂಡಾ ಬಿಡುಗಡೆಗೆ ಕಾದು ನಿಂತಿದೆ.

    ಅತ್ತಾರಿಂಟಿಕಿ ದಾರೇದಿ ಚಿತ್ರ ಮೊದಲ ವಾರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಸುಮಾರು 49.24 ಕೋಟಿ ರು ಕಲೆ ಹಾಕಿತ್ತು. ಆದರೆ, ತೆಲಂಗಾಣ ರಚನೆ ವಿರೋಧಿ ಹೋರಾಟದಿಂದಾಗಿ ಕಳೆದ ಶುಕ್ರವಾರದಿಂದ ಗಳಿಕೆ ಡಲ್ ಹೊಡೆಯುತ್ತಿದೆ. ಮೊದಲ ಹತ್ತು ದಿನದ ವರದಿ ಪ್ರಕಾರ ಜಾಗತಿಕವಾಗಿ 55 ಕೋಟಿ ಗಳಿಸಿದೆ. ಮಿಕ್ಕಂತೆ ಎಲ್ಲೆಲ್ಲಿ ಎಷ್ಟು ಗಳಿಸಿದೆ ಎಂಬುದನ್ನು ಮುಂದೆ ಓದಿ

    ಶ್ರೀಕಾಂತ್ ಯಳವರ್ತಿ ಟ್ವೀಟ್ಸ್

    ಪವನ್ ಕಲ್ಯಾಣ್ ಚಿತ್ರ ಅಮೆರಿಕದ ಕಲೆಕ್ಷನ್ ವಿವರ

    ತರಣ್ ಆದರ್ಶ್ ಟ್ವೀಟ್ಸ್

    ಎರಡನೇ ವಾರದ ಅಧಿಕೃತ ಹಾಗೂ ವರದಿಯಾಗದ ಗಳಿಕೆ ವಿವರಗಳು

    10 ದಿನದ ಗಳಿಕೆ ಹೀಗಿದೆ

    10 ದಿನದ ಗಳಿಕೆ ಹೀಗಿದೆ

    ಮೊದಲ ವಾರದಲ್ಲಿ 49.24 ಕೋಟಿ ರು ಗಳಿಸಿದ್ದ ಚಿತ್ರ ಮೊದಲ ಹತ್ತು ದಿನಗಳಲ್ಲಿ ನಿವ್ವಳ 55.54 ಕೋಟಿ ರು ಗಳಿಸಿದೆ. ಆಂಧ್ರಪ್ರದೇಶದಲ್ಲೇ 40.04 ಕೋಟಿ ರು, ಕರ್ನಾಟಕದಲ್ಲಿ 4.65 ಕೋಟಿ ರು, ಭಾರತದ ಇತರೆಡೆ 1.65 ಕೋಟಿ ರು , ಸಾಗರೋತ್ತರ ಪ್ರದೇಶಗಳಲ್ಲಿ 9.2 ಕೋಟಿ ರು.

    ಒಟ್ಟಾರೆ ಜಾಗತಿಕವಾಗಿ 55.54 ಕೋಟಿ ರು ಗಳಿಸಿ ಟಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿದೆ. ಆದರೆ, ಅಂಕಿಅಂಶಗಳು ಅಧಿಕೃತ ಎನ್ನಲಾಗುವುದಿಲ್ಲ. ತೆಲಂಗಾಣ ಕಡೆಯ ವಿವರ ಇನ್ನೂ ಸ್ಪಷ್ಟವಾಗಿಲ್ಲ.
    ತಿವಿಕ್ರಮ್ ಹಾಗೂ ಪವನ್ ಜೋಡಿ

    ತಿವಿಕ್ರಮ್ ಹಾಗೂ ಪವನ್ ಜೋಡಿ

    ಈ ಹಿಂದೆ ಜಲ್ಸಾ ಚಿತ್ರದಲ್ಲಿ ಕಮಾಲ್ ಮಾಡಿದ್ದ ಚಿತ್ರಸಾಹಿತಿ, ನಿರ್ದೇಶಕ ತಿವಿಕ್ರಮ್ ಶ್ರೀನಿವಾಸ್ ಹಾಗೂ ಪವನ್ ಕಲ್ಯಾಣ್ ಅವರ ಜೋಡಿ ಮತ್ತೊಮ್ಮೆ ಇಲ್ಲಿ ನಿರ್ಣಾಯಕವಾಗಿದೆ. ಪವನ್ ಸೇರಿದಂತೆ ಒನ್ ಲೈನರ್ ಡೈಲಾಗ್ ಗಳು ಈ ಚಿತ್ರಕ್ಕೆ ಜೀವಾಳವಾಗಿದೆ.

    ಈ ಚಿತ್ರದ ನಂತರ ತಿವಿಕ್ರಮ್ ಶ್ರೀನಿವಾಸ್ ಅವರ ಸಂಭಾವನೆಯೂ ಹಲವು ಕೋಟಿಗಳಿಗೆ ಏರಿಕೆಯಾಗಿದೆಯಂತೆ ಈ ಬಗ್ಗೆ ಇಲ್ಲಿ ಓದಿ

    ಬಿಡುಗಡೆ ವಿಳಂಬ

    ಬಿಡುಗಡೆ ವಿಳಂಬ

    ಅತ್ತಾರಿಂಟಕಿ ದಾರೇದಿ ಚಿತ್ರ ಬಿಡುಗಡೆ ವಿಳಂಬವಾಗಿದ್ದು ಕೂಡಾ ಹೊಡೆತ ನೀಡಿತ್ತು. ಜುಲೈ 7ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಆಂಧ್ರಪ್ರದೇಶದಲ್ಲಿ ಉಂಟಾಗಿರುವ ರಾಜ್ಯ ವಿಭಜನೆ ಗೊಂದಲ ಬಂದ್ ನಿಂದಾಗಿ ತೊಂದರೆ ಅನುಭವಿಸಿತ್ತು. ಅ.10ರಂದು ಜ್ಯೂ. ಎನ್ಟಿಆರ್ ಅವರ ರಾಮಯ್ಯ ವಸ್ತಾವಯ್ಯ ಚಿತ್ರ ಬಿಡುಗಡೆಯಾಗುತ್ತಿದ್ದು ಅತ್ತಾರಿಂಟಿಕಿ ದಾರೇದಿ ಚಿತ್ರ ಮಲ್ಟಿಫೆಕ್ಸ್ ಗಳನ್ನು ನೆಚ್ಚಿಕೊಳ್ಳಬೇಕಾಗಿದೆ.

    ವಿಡಿಯೋ ಸೋರಿಕೆ

    ವಿಡಿಯೋ ಸೋರಿಕೆ

    ಸುಮಾರು 90 ನಿಮಿಷಗಳ ವಿಡಿಯೋ ತುಣುಕು ಸೋರಿಕೆಯಾಗಿದ್ದರಿಂದ ಚಿತ್ರದ ಗಳಿಕೆ ಭಾರಿ ಪರಿಣಾಮ ಬೀರಲಿದೆ ಎಂದು ಊಹಿಸಲಾಯಿತಿ. ಚಿತ್ರದ ಬಿಡುಗಡೆ ದಿನಾಂಕಕ್ಕೂ ಎರಡು ವಾರ ಮೊದಲೇ ಚಿತ್ರದ ತುಣುಕುಗಳು ಇಂಟರ್ನೆಟ್ ನಲ್ಲಿ ಹರಿದಾಡಿತ್ತ್ತು. ಅದರೆ, ನಕಲಿ ವಿಡಿಯೋ ಜಾಲವನ್ನು ಹತ್ತಿಕ್ಕುವಲ್ಲಿ ಚಿತ್ರತಂಡ ಯಶಸ್ವಿಯಾಯಿತು.

    ಸೋರಿಕೆಯಾದ ಮೇಲೆ

    ಸೋರಿಕೆಯಾದ ಮೇಲೆ

    ವಿಡಿಯೋ ತುಣುಕು ಲೀಕ್ ಆದಮೇಲೆ ಬಿಡುಗಡೆ ಮುಂಚಿತವಾಗಿ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇದರಿಂದಾಗಿ ಸಣ್ಣ ಪುಟ್ಟ ಬಜೆಟ್ ನ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಬೇಕಾಯಿತು. ಹೀಗಾಗಿ ಅತ್ತಾರಿಂಟಿಕಿ ಬಿಡುಗಡೆಯಾದ ವಾರ ಪೈಪೋಟಿ ನೀಡಲು ಯಾವ ಚಿತ್ರವೂ ಇರಲಿಲ್ಲ. ಹೀಗಾಗಿ ಗಳಿಕೆ ಫುಲ್ ಆಗಿತ್ತು.

    ವಿಮರ್ಶಕರ ಬೆಂಬಲ

    ವಿಮರ್ಶಕರ ಬೆಂಬಲ

    ಅತ್ತಾರಿಂಟಿಕಿ ದಾರೇದಿ ಚಿತ್ರವನ್ನು ಪವನ್ ಅವರ ಅಭಿಮಾನಿಗಳು ಕೈ ಬಿಡಲಿಲ್ಲ. ಜತೆಗೆ ವಿಮರ್ಶಕರು ಕೂಡಾ ಉತ್ತಮ ಪ್ರತಿಕ್ರಿಯೆ ನೀಡಿದರು. ಸರಾಸರಿ ಎಲ್ಲಾ ಕಡೆಯಿಂದ 4 ಹಾಗೂ 5 ಸ್ಟಾರ್ ಸಿಕ್ಕಿತು. ಇದು ಚಿತ್ರದ ಗಳಿಕೆಗೆ ಭಾರಿ ಸಹಾಯಕವಾಯಿತು.

    English summary
    Latest Telugu release Attarintiki Daredi (AD), which hit the screens on September 27, has slipped at the AP Box Office in the second weekend following Samaikhyandhra protests over the division of Andhra Pradesh. Although it has performed well in other parts of globe, its overall collection is more than 50% down, when compared to its business in its opening weekend.
    Tuesday, October 8, 2013, 13:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X