'ಅಟ್ಟಯ್ಯ v/s ಹಂದಿ ಕಾಯೋಳು' ಚಿತ್ರ ಇದೇ ವಾರ ಬಿಡುಗಡೆ

'ಅಟ್ಟಯ್ಯ v/s ಹಂದಿ ಕಾಯೋಳು' ಎಂದ ತಕ್ಷಣ ಏನಿದು ಸಿನಿಮಾಗೆ ಹೆಸರು ಇಷ್ಟೊಂದು ಡಿಫರೆಂಟ್ ಆಗಿದೆ ಅಂತ ನಿಮಗೆ ಅನಿಸಬಹುದು. ಸಿನಿಮಾದ ಹೆಸರು ಮಾತ್ರವಲ್ಲ ಈ ಸಿನಿಮಾ ಕೂಡ ವಿಭಿನ್ನತೆಯಿಂದ ಕೂಡಿದೆಯಂತೆ.

ಸುಮಾರು 18 ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಲೋಕೆಂದ್ರ ಸೂರ್ಯ ಅವರು ಜೂನಿಯರ್ ಉಪೇಂದ್ರ ಎಂದೇ ಖ್ಯಾತಿ ಗಳಿಸಿದ್ದಾರೆ. ಅವರ ಕನಸಿನ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ.

attayya vs handi kaayolu kannada movie will be releasing on february 1

ಮಳವಳ್ಳಿಯಲ್ಲಿ ನಡೆದ ಕ್ರೈಂ ಸ್ಟೋರಿ ಚಿತ್ರದ ಕಥೆಯಾಗಿದೆ. ಗದ್ದೆಗಳಿಗೆ ನುಗ್ಗುವ ಹಂದಿಗಳಿಂದ ಶುರುವಾಗುವ ಗಲಾಟೆ ಯಾವ ರೀತಿ ಕ್ರೈಮ್ ಸ್ಟೋರಿಯಾಗಿ ಬದಲಾಗುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬೇಕಾಗುತ್ತದೆ.

ಈ ರೀತಿಯ ಕಥೆಯ ಜೊತೆಗೆ ಲವ್ ಸ್ಟೋರಿ ಕೂಡ ಬೆರೆತಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕರಿಗೆ ನಟನೆ ಗೊತ್ತೆ ಇರಲಿಲ್ಲವಂತೆ. ಪಾತ್ರಕ್ಕೆ ನೈಜತೆ ಬೇಕು ಎನ್ನವ ಉದ್ದೇಶದಿಂದ ಹೊಸಬರ ಬಳಿ ನಟನೆಯನ್ನು ತೆಗೆಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಎನ್ ಎಸ್ ಡಿ ವಿಧ್ಯಾರ್ಥಿಗಳು ಕಾಣಿಸಿಕೊಂಡಿದ್ದಾರೆ.

attayya vs handi kaayolu kannada movie will be releasing on february 1

ಚಿತ್ರದಲ್ಲಿ ಎರಡು ಹಾಡುಗಳು ಇದ್ದು, ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಹಾಡಿನ ಸಾಹಿತ್ಯದಲ್ಲಿ ಸಂಭವಾಮಿ ಎಂಬ ಪದವನ್ನು ಸೆನ್ಸಾರ್ ಬೋರ್ಡ್ ಮ್ಯೂಟ್ ಮಾಡಿದೆ. ಹಾಡು ಕೇಳಲು ಸಖತ್ ಮಜಾವಾಗಿದೆ.

ಮಹದೇವಯ್ಯ, ಚೈತ್ರಾ, ಅರ್ಜುನ ಕೃಷ್ಣ, ತಾತಗುಣಿ ಕೆಂಪೇಗೌಡ, ವಿನಯ್ ಕೂರ್ಗ್, ಎಂ.ಸಿ. ನಾಗರಾಜ್‌, ಗುಣಶೇಖರ್ ಚಿತ್ರದಲ್ಲಿದ ಕಲಾವಿದರಾಗಿದ್ದಾರೆ. ಒಂದು ಒಳ್ಳೆಯ ಪ್ರಯತ್ನದ ಈ ಸಿನಿಮಾ ಇದೇ ಶುಕ್ರವಾರ ಅಂದರೆ, ಫೆಬ್ರವರಿ 1 ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗುತ್ತಿದೆ.

More from Filmibeat

English summary
Attayya VS Handi Kaayolu kannada movie will be releasing on february 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X