ಸುದೀಪ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ

Recommended Video

ಸುದೀಪ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ವಿರುದ್ಧ ಸಮರ ಸಾರಿದ್ದಾರೆ. ಈ ಬಗ್ಗೆ ಸಾಕಷ್ಟು ಟ್ವೀಟ್ ಗಳನ್ನು ಮಾಡುತ್ತಿರುವ ಕಿಚ್ಚ ಪೈರಸಿ ಮಾಡಿದ ಕಿರಾತಕರನ್ನು ಹುಡುಕುವ ವರೆಗೂ ಬಿಡಲ್ಲ ಎಂದು ಪಣತೊಟ್ಟಿದ್ದಾರೆ. ಈಗಾಗಲೆ ಪೊಲೀಸರು ಪೈರಸಿ ಮಾಡಿದ ಒಬ್ಬನನ್ನು ಬಂಧಿಸಿದ್ದಾರೆ.

ಇತ್ತೀಚಿಗೆ ಸುದೀಪ್ ಮಾಡಿರುವ ಕೆಲವು ಟ್ವೀಟ್ ಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿವೆ. ಇದರ ನಡುವೆ ಈಗ ಸುದೀಪ್ ಅಕೌಂಟ್ ಹ್ಯಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನುವ ಶಾಕಿಂಗ್ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಅಭಿಮಾನಿಗಳ ಪೋಸ್ಟ್

ಅಭಿಮಾನಿಗಳ ಪೋಸ್ಟ್

"ಕಿಚ್ಚ ಸುದೀಪಣ್ಣ ಟ್ವೀಟರ್ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ. ಇಂದು ಮಧ್ಯಾಹ್ನ ಮೂರು ಗಂಟೆಯಿಂದ ಸುಮಾರು ಏಳು ಸಲ ಸುದೀಪಣ್ಣನ ಟ್ವೀಟರ್ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ. Password Reset Request ದೀಪಣ್ಣನ mail ಗೆ ಬಂದಿವೆ. ಸೈಬರ್ ಕ್ರೈಮ್ ಅವರು ಕೂಡಲೇ ಈ ಬಗ್ಗೆ ಗಮನಹರಿಸಲು ಕೋರುತ್ತೇವೆ" ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಸುದೀಪ್ ಅಧಿಕೃತವಾಗಿ ಎಲ್ಲಿಯೊ ಹೇಳಿಕೊಂಡಿಲ್ಲ.

ಪೈಲ್ವಾನ್ ಪೈರಸಿ

ಪೈಲ್ವಾನ್ ಪೈರಸಿ

ಪೈಲ್ವಾನ್ ಸಿನಿಮಾ ರಿಲೀಸ್ ಆದ ನಂತರ ಸುದೀಪ್ ಮತ್ತು ಟೀಂ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದೆ. ಪೈರಸಿ ಮಾಡಿ ಸಿನಿಮಾ ಲಿಂಕ್ ವೈರಲ್ ಮಾಡಿದವರನ್ನು ಸುಮ್ಮನೆ ಬಿಡಬಾರದು ಎಂದು ಪೈರಸಿ ಕಿಡಿಗೇಡಿಗಳ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ ಸುದೀಪ್. ಅಲ್ಲದೆ ಇತ್ತೀಚಿಗೆ ಈ ವಿಚಾರವಾಗಿ ಸಾಕಷ್ಟು ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಫ್ಯಾನ್ಸ್ ವಾರ್ ಕೂಡ ಜಾಸ್ತಿ ಆಗಿದೆ. ಈ ಸಮಯದಲ್ಲಿ ಸುದೀಪ್ ಅಕೌಂಟ್ ಹ್ಯಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರೆ ಉದ್ದೇಶ ಪೂರ್ವಕವಾಗಿಯೆ ಮಾಡಲಾಗುತ್ತಿದೆ ಎನ್ನುವುದು ಅಭಿಮಾನಿಗಳ ಮಾತು.

ಸುದೀಪ್ ಭೇಟಿ ಮಾಡಿದ ಭಾಸ್ಕರ್ ರಾವ್

ಸುದೀಪ್ ಭೇಟಿ ಮಾಡಿದ ಭಾಸ್ಕರ್ ರಾವ್

ಪೈರಸಿ ವಿಚಾರವಾಗಿ ಮತ್ತು ಅನಾವಶ್ಯವಾಗಿ ಟ್ರೋಲ್ ಮಾಡುವವರ ವಿರುದ್ಧ ದೂರು ನೀಡಲು ಸುದೀಪ್ ಸೈಬರ್ ಕ್ರೈಮ್ ಅಧಿಕಾರಿಗಳ ಬಳಿ ಹೋಗಿದ್ದರು. ಆಲ್ಲದೆ ಮೊನ್ನೆ ಮೊನ್ನೆಯಷ್ಟೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸುದೀಪ್ ಮನೆಗೆ ಭೇಟಿ ನೀಡಿದ್ದರು, ಇದು ಕೂಡ ಕುತೂಹಲ ಮೂಡಿಸಿತ್ತು.

ಕೋಟಿಗೊಬ್ಬ-3 ಶೂಟಿಂಗ್ ನಲ್ಲಿ ಸುದೀಪ್

ಕೋಟಿಗೊಬ್ಬ-3 ಶೂಟಿಂಗ್ ನಲ್ಲಿ ಸುದೀಪ್

ಸುದೀಪ್ ಸದ್ಯ ಬೆಂಗಳೂರಿನಲ್ಲಿ ಇಲ್ಲ. ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕೆಂದು ಕಿಚ್ಚ ಪೋಲಾಂಡ್ ಗೆ ಪ್ರಯಾಣ ಬೆಳೆಸಿದ್ದಾರೆ. ಚಿತ್ರದ ಚೇಸಿಂಗ್ ದೃಶ್ಯವನ್ನು ಅಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿದೆ ಚಿತ್ರತಂಡ. ಈ ಬಗ್ಗೆ ಸುದೀಪ್ ಅವರೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Attempt to hack Kannada actor Sudeep twitter account. Sudeep fans post in social media.
Read more about: sudeep piracy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X