ಯಶ್ ಮಗಳ ಬರ್ತಡೇಯಲ್ಲಿ ಕ್ಯಾಮರಾ ಸೆರೆಹಿಡಿದ 6 ಸ್ಪೆಷಲ್ ಫೋಟೋಗಳಿವು

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳು ಐರಾ ಅವರ ಹುಟ್ಟುಹಬ್ಬವನ್ನು ಇತ್ತೀಚಿಗಷ್ಟೆ ಅದ್ಧೂರಿಯಾಗಿ ಆಚರಿಸಲಾಗಿತ್ತು. ಮಗಳು ಬರ್ತಡೇಗಾಗಿ ಫನ್ ವರ್ಲ್ಡ್ನಲ್ಲಿ ಸ್ವರ್ಗವನ್ನೇ ನಿರ್ಮಿಸಿದ್ದರು ರಾಕಿಂಗ್ ದಂಪತಿ.

ಐರಾ ಬರ್ತಡೇ ಪಾರ್ಟಿಯಲ್ಲಿ ಇಡೀ ಸ್ಯಾಂಡಲ್ವುಡ್ ಭಾಗಿಯಾಗಿತ್ತು. ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಅಜಯ್ ರಾವ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ, ಸುಮಲತಾ, ಹಂಸಲೇಖ, ಅಮೂಲ್ಯ, ದ್ವಾರಕೀಶ್, ಭಾರತಿ ವಿಷ್ಣುವರ್ಧನ್, ಹರಿಕೃಷ್ಣ, ಚಿರು ಸರ್ಜಾ-ಮೇಘನಾ ರಾಜ್, ಧ್ರುವ ಸರ್ಜಾ ಸೇರಿದಂತೆ ಬಹುತೇಕರು ಕಾಣಿಸಿಕೊಂಡಿದ್ದರು.

ಈ ಬರ್ತಡೇ ಪಾರ್ಟಿಯ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪಾರ್ಟಿಯಲ್ಲಿ ಈ 6 ಫೋಟೋಗಳು ಮಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಯಾವುದು ಆ ಫೋಟೋಗಳು? ಮುಂದೆ ಓದಿ....

ಯಶ್-ರಾಧಿಕಾ ಕುದುರೆ ಸವಾರಿ

ಯಶ್-ರಾಧಿಕಾ ಕುದುರೆ ಸವಾರಿ

ಐರಾ ಬರ್ತಡೇ ಸಂಭ್ರಮದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ವಿಶೇಷವಾಗಿ ಗಮನ ಸೆಳೆದಿದ್ದು, ಇಬ್ಬರು ಒಟ್ಟಿಗೆ ಕುದುರೆ ಸವಾರಿ ಮಾಡುವ ಮೂಲಕ. ಹೌದು, ಫನ್ ವರ್ಲ್ಡ್ ನಲ್ಲಿರುವ ಕೃತಕ ಕುದುರೆ ಮೇಲೆ ಕೂತು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಆಟ ಆಡಿದರು.

ಯಶ್ ತಾಯಿಗೆ ಪುನೀತ್ ನಮಸ್ಕಾರ

ಯಶ್ ತಾಯಿಗೆ ಪುನೀತ್ ನಮಸ್ಕಾರ

ರಾಕಿಂಗ್ ಮಗಳ ಬರ್ತಡೇ ಪಾರ್ಟಿಗೆ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಯಶ್ ಅವರ ಬಳಿ ಬಂದು ಅಪ್ಪುಗೆ ನೀಡಿದ ಅಪ್ಪು, ಅವರ ತಾಯಿ ಕಂಡಾಗ ನಮಸ್ಕರಿಸಿದರು. ಈ ಫೋಟೋವೂ ಬಹಳ ಆಕರ್ಷಣೆಯಿಂದ ಕೂಡಿದೆ.

ಫೋಟೋ ಆಲ್ಬಂ: ಕ್ಯಾಂಡಿ 'ವಂಡರ್ ಲ್ಯಾಂಡ್'ನಲ್ಲಿ ಆಯ್ರಾ ಬರ್ತಡೇ ಪಾರ್ಟಿ

ರಿಷಬ್ ಶೆಟ್ಟಿಯ ಮಗು

ರಿಷಬ್ ಶೆಟ್ಟಿಯ ಮಗು

ರಾಕಿಂಗ್ ದಂಪತಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಮತ್ತು ಮಗು ಸಮೇತ ಬಂದಿದ್ದರು. ರಿಷಬ್ ಶೆಟ್ಟಿಯ ಮಗು ಈ ಸಂತಸದ ಕ್ಷಣದಲ್ಲಿ ಎಲ್ಲರ ಆಕರ್ಷಣೆಯಾಗಿತ್ತು. ರಕ್ಷಿತ್ ಶೆಟ್ಟಿ, ದರ್ಶನ್ ಸೇರಿದಂತೆ ಬಹುತೇಕರು ರಿಷಬ್ ಶೆಟ್ಟಿ ಮಗುವನ್ನು ಎತ್ತುಕೊಂಡು ಮುದ್ದಾಡಿದರು.

ರಘು ಮುಖರ್ಜಿ ದಂಪತಿಯ ಮಗು

ರಘು ಮುಖರ್ಜಿ ದಂಪತಿಯ ಮಗು

ಕನ್ನಡ ನಟ ರಘು ಮುಖರ್ಜಿ ಮತ್ತು ಪತ್ನಿ ಅನು ಪ್ರಭಾಕರ್ ದಂಪತಿ ಐರಾ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡರು. ರಘು ಮುಖರ್ಜಿ ಅವರ ಕೈಯಲ್ಲಿ ಮಂದಹಾಸ ಬೀರಿದ ಮಗುವಿನ ಫೋಟೋ ಕೂಡ ಮೆಚ್ಚುಗೆ ಗಳಿಸಿಕೊಂಡಿದೆ.

ಅಜಯ್ ರಾವ್ ಮಗು

ಅಜಯ್ ರಾವ್ ಮಗು

ಕೃಷ್ಣನ ಲವ್ ಸ್ಟೋರಿ ಖ್ಯಾತಿ ನಟ ಅಜಯ್ ರಾವ್ ಕೂಡ ದಂಪತಿ ಸಮೇತ ರಾಕಿಂಗ್ ಮಗಳ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅಜಯ್ ರಾವ್ ಅವರ ಮಗು ಕೂಡ ಎಲ್ಲರ ಗಮನ ಸೆಳೆದಿದೆ.

ಹಿರಿಯ ನಟಿ ಜಯಂತಿ

ಹಿರಿಯ ನಟಿ ಜಯಂತಿ

ಯಶ್ ಅವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹಿರಿಯ ನಟಿ ಜಯಂತಿ ಅವರು ಬಂದಿದ್ದರು. ಸಾಮಾನ್ಯವಾಗಿ ಈ ರೀತಿ ಕಾರ್ಯಕ್ರಮಗಳಿಗೆ ಜಯಂತಿ ಅವರು ಭಾಗವಹಿಸುವುದು ಅಪರೂಪ. ಆರೋಗ್ಯ ಕಷ್ಟಕರವಾಗಿದ್ದರೂ ಯಶ್ ಮಗಳಿಗೆ ಹಾರೈಸಲು ಈ ಪಾರ್ಟಿಗೆ ಆಗಮಿಸಿದ್ದರು. ಜಯಂತಿ ಅವರನ್ನು ಕಂಡು ನಟ ದರ್ಶನ್, ಸುಮಲತಾ ಮಾತನಾಡಿಸುತ್ತಿರುವ ಫೋಟೋ ಕೂಡ ಗಮನ ಸೆಳೆಯುತ್ತಿದೆ.

More from Filmibeat

English summary
Rocking star yash and radhika pandit celebrates their daughter ayra birthday. sandalwood stars participated in yash daughter birthday party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X