ಮಾನ್ಸೂನ್ ರಾಗ ತೆಲುಗಿನ ಈ ಚಿತ್ರದ ರಿಮೇಕ್?; ಫ್ಯಾನ್ಸ್ ಹೇಳಿದ್ದು ಅದೇ, ವಿಕಿಪಿಡಿಯಾ ಹೇಳಿದ್ದು ಅದೇ!

ಧನಂಜಯ್ ಹಾಗೂ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಇದೇ ಶುಕ್ರವಾರ ( ಸೆಪ್ಟೆಂಬರ್ 16 ) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರಕ್ಕೆ ರಮೇಶ್ ಅರವಿಂದ್ ಅವರ ಶತಕದ ಚಿತ್ರವಾದ ಪುಷ್ಪಕ ವಿಮಾನವನ್ನು ನಿರ್ದೇಶಿಸಿದ್ದ ಎಸ್ ರವೀಂದ್ರನಾಥ್ ಅವರ ನಿರ್ದೇಶನವಿದೆ. ಇನ್ನು ಈ ಚಿತ್ರಕ್ಕೆ ವಿಖ್ಯಾತ್ ಬಂಡವಾಳ ಹೂಡಿದ್ದು, ನಿನ್ನೆಯಷ್ಟೇ ಚಿತ್ರದ ಪ್ರಿ ರಿಲೀಸ್ ಇವೆಂಟ್ ಭರ್ಜರಿಯಾಗಿ ನಡೆದಿದೆ.

ಇನ್ನು ಈ ಚಿತ್ರದಲ್ಲಿ ಧನಂಜಯ್ ಹಾಗೂ ರಚಿತಾ ರಾಮ್ ಮಾತ್ರವಲ್ಲದೇ ಸುಹಾಸಿನಿ, ಅಚ್ಯುತ್ ಕುಮಾರ್ ಹಾಗೂ ಯಶಾ ಶಿವಕುಮಾರ್ ಕೂಡ ಇದ್ದಾರೆ. ಮಾನ್ಸೂನ್ ರಾಗ ಕನ್ನಡ ಸಿನಿ ಪ್ರೇಕ್ಷಕರನ್ನು ತನ್ನತ್ತ ಸೆಳೆದದ್ದು ಯಶಾ ಶಿವಕುಮಾರ್ ಪರಿಚಯಿಸಲು ಬಿಡುಗಡೆ ಮಾಡಿದ್ದ ರಾಗಾ ಸುಧಾ ಹಾಡಿನ ಮೂಲಕ. ಈ ಹಾಡಿನ ಲಿರಿಕ್ಸ್, ಮ್ಯೂಸಿಕ್ ಹಾಗೂ ವಿಶ್ಯುವಲ್ಸ್ ನೆಕ್ಸ್ಟ್ ಲೆವೆಲ್ಸ್ ಗುರು ಎಂದು ಕನ್ನಡ ಸಿನಿ ಪ್ರೇಮಿಗಳು ಕೊಂಡಾಡಿದ್ದರು.

ಆದರೆ, ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಇದೇ ಸಿನಿ ಪ್ರೇಕ್ಷಕ ವೃಂದ ಪೈಕಿ ಕೆಲವರು ಮಾನ್ಸೂನ್ ರಾಗ ಸ್ವಮೇಕ್ ಅಲ್ಲ ರಿಮೇಕ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾರಂಭಿಸಿದ್ದರು. ಈ ಪೋಸ್ಟ್‌ಗಳನ್ನು ನೋಡಿ ಆಶ್ಷರ್ಯಕ್ಕೊಳಗಾಗಿ ವಿಕಿಪಿಡಿಯಾ ಮೊರೆ ಹೋದರೆ ವಿಕಿಪಿಡಿಯಾ ಕೂಡ ಅದೇ ಉತ್ತರವನ್ನು ನೀಡಿದ್ದು, ಸದ್ಯ ಸಿನಿ ಪ್ರೇಕ್ಷಕರಲ್ಲಿ ಇದು ಸ್ವಮೇಕಾ ಅಥವಾ ರಿಮೇಕಾ ಎಂಬ ಗೊಂದಲವನ್ನು ಮೂಡಿಸಿದೆ.

ಇದು ಕೇರ್ ಆಫ್ ಕಂಚರಪಾಲೆಂ ರಿಮೇಕ್

ಇದು ಕೇರ್ ಆಫ್ ಕಂಚರಪಾಲೆಂ ರಿಮೇಕ್

ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾದ ಕೂಡಲೇ ಪ್ರತಿಕ್ರಿಯಿಸಿದ್ದ ಕೆಲ ಸಿನಿ ಪ್ರೇಕ್ಷಕರು ಚಿತ್ರದ ಮೇಕಿಂಗ್, ಬಿಜಿಎಂ ಎಲ್ಲವೂ ಸಖತ್ತಾಗಿದೆ, ಆದರೆ ಚಿತ್ರ ಮಾತ್ರ ತೆಲುಗಿನ ಕೇರ್ ಆಫ್ ಕಂಚರಪಾಲೆಂ ಚಿತ್ರದ ರಿಮೇಕ್ ಎಂಬ ರಿಮೇಕ್ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇನ್ನು ಇದು ನಿಜವೇ ಎಂದು ವಿಕಿಪಿಡಿಯಾದಲ್ಲಿ ಕೇರ್ ಆಫ್ ಕಂಚರಪಾಲೆಂ ಅನ್ನು ಹುಡುಕಿದ ವೀಕ್ಷಕರಿಗೆ ವಿಕಿಪಿಡಿಯಾ ಸಹ ಕೇರ್ ಆಫ್ ಕಂಚರಪಾಲೆಂ ತಮಿಳಿನಲ್ಲಿ ಕೇರ್ ಆಫ್ ಕಾದಲ್ ಹಾಗೂ ಕನ್ನಡದಲ್ಲಿ ಮಾನ್ಸೂನ್ ರಾಗ ಎಂದು ರಿಮೇಕ್ ಆಗಿದೆ ಎಂದು ಹೇಳುತ್ತಿದೆ.

ಒಟಿಟಿ ಪ್ಲೇ ಕೂಡ ಈಗಾಗಲೇ ಹಲವಾರು ಬಾರಿ ರಿಮೇಕ್ ಎಂದಿದೆ

ಒಟಿಟಿ ಪ್ಲೇ ಕೂಡ ಈಗಾಗಲೇ ಹಲವಾರು ಬಾರಿ ರಿಮೇಕ್ ಎಂದಿದೆ

ಇನ್ನು ಸಿನಿಮಾಗಳ ಕುರಿತಾಗಿ ಸಾಕಷ್ಟು ಸಮಾಚಾರ ಹಂಚಿಕೊಳ್ಳುವ ವೆಬ್ ತಾಣವಾದ ಒಟಿಟಿ ಪ್ಲೇ ಕೂಡ ಮಾನ್ಸೂನ್ ರಾಗ ತೆಲುಗಿನ ಕೇರ್ ಆಫ್ ಕಂಚರಪಾಲೆಂನ ರಿಮೇಕ್ ಎಂದು ತಿಳಿಸಿದೆ. ಈ ಸಿನಿಮಾ ಕುರಿತಾಗಿ ಈ ವೆಬ್ ತಾಣ ಪ್ರಕಟಿಸಿರುವ ಪ್ರತಿ ಸುದ್ದಿಯಲ್ಲೂ ಇದು ಕೇರ್ ಆಫ್ ಕಂಚರಪಾಲೆಂನ ರಿಮೇಕ್ ಎಂಬುದನ್ನು ಖಚಿತವಾಗಿ ಉಲ್ಲೇಖಿಸಿದೆ.

ಚಿತ್ರತಂಡ ಎಲ್ಲಿಯೂ ರಿಮೇಕ್ ಎಂದು ಹೇಳಿಲ್ಲ

ಚಿತ್ರತಂಡ ಎಲ್ಲಿಯೂ ರಿಮೇಕ್ ಎಂದು ಹೇಳಿಲ್ಲ

ಇನ್ನು ಈ ಕುರಿತಾಗಿ ಚಿತ್ರತಂಡ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಒಂದೊಳ್ಳೆ ಚಿತ್ರವನ್ನು ಜನರಿಗೆ ಕೊಡುವ ಉದ್ದೇಶದಿಂದ ಒಳ್ಳೆಯ ಮೇಕಿಂಗ್, ಕ್ವಾಲಿಟಿ ಟ್ರೈಲರ್ ಹಾಗೂ ಕಣ್ಸೆಳೆಯುವ ಪೋಸ್ಟರ್‌ಗಳನ್ನು ಚಿತ್ರತಂಡ ತಯಾರಿಸುವಲ್ಲಿ ಗೆದ್ದಿದೆ. ಹೀಗೆ ನಾನಾ ಕಡೆಯಿಂದ ಚಿತ್ರ ರಿಮೇಕ್ ಎಂದು ಹೇಳಿಕೆಗಳು ಕೇಳಿಬರುತ್ತಿದ್ದರೂ ಸಹ ಚಿತ್ರತಂಡ ಈ ಕುರಿತು ಇಲ್ಲಿಯವರೆಗೂ ನಡೆದಿರುವ ಯಾವುದೇ ಕಾರ್ಯಕ್ರಮದಲ್ಲೂ, ಸಂದರ್ಶನದಲ್ಲೂ ಮಾಹಿತಿಯನ್ನು ನೀಡಿಲ್ಲ. ಹೀಗೆ ಈ ಚಿತ್ರ ರಿಮೇಕಾ ಅಥವಾ ಸ್ವಮೇಕಾ ಎಂಬ ಗೊಂದಲಗಳು ಉಂಟಾಗಿದ್ದು, ಚಿತ್ರ ಬಿಡುಗಡೆಯಾದ ನಂತರ ಈ ಪ್ರಶ್ನೆಗೆ ನಿಖರವಾದ ಉತ್ತರ ಸಿಗಲಿದೆ ಎನ್ನಬಹುದು.

C/o ಕಂಚರಪಾಲೆಂ ಸುಂದರ ಸಿನಿಮಾ

C/o ಕಂಚರಪಾಲೆಂ ಸುಂದರ ಸಿನಿಮಾ

C/o ಕಂಚರಪಾಲೆಂ ವೆಂಕಟೇಶ್ ಮಹಾ ಎಂಬ ಉದಯೋನ್ಮುಖ ನಿರ್ದೇಶಕ 2018ರಲ್ಲಿ ನಿರ್ದೇಶಿಸಿದ್ದ ಸಿನಿಮಾ. ಈ ಸಿನಿಮಾ ಎಷ್ಟರ ಮಟ್ಟಿಗೆ ಸದ್ದು ಮಾಡಿತ್ತೆಂದರೆ ಸಿನಿಮಾ ಬಿಡುಗಡೆಯಾದ ದಿನಗಳಲ್ಲಿ ಸಾಮಾಜಿಕ ಜಾಲತಾಣದ ತುಂಬಾ ಈ ಚಿತ್ತದ್ದೇ ಮಾತು. ಒಬ್ಬ ಪುರುಷ ತನ್ನ ಬಾಲ್ಯದಲ್ಲಿ, ಯೌವ್ವನದಲ್ಲಿ ಹಾಗೂ ಮುಪ್ಪಿನಲ್ಲಿ ಪ್ರೀತಿಯನ್ನು ಯಾವ ರೀತಿಯಲ್ಲಿ ಅನುಭವಿಸಲಿದ್ದಾನೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಲಾಗಿತ್ತು. ಅದರಲ್ಲಿಯೂ ಚಿತ್ರದ ಕ್ಲೈಮ್ಯಾಕ್ಸ್ ಟ್ವಿಸ್ಟ್ ಅನ್ನು ಮಾತ್ರ ಈ ಚಿತ್ರ ವೀಕ್ಷಿಸಿದ ಸಿನಿ ರಸಿಕರಿಗೆ ಎಂದಿಗೂ ಮರೆಯಲಾಗದಂತದ್ದು ಎಂದೇ ಹೇಳಬಹುದು.

More from Filmibeat

English summary
Audience trolled Dhananjaya and Rachita Ram starrer Monsoon Raaga as it is remake of Telugu movie C/O Kancharapalem. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X