For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹಲ್ಲೆ ಪ್ರಕರಣ: ಪ್ರತ್ಯಕ್ಷದರ್ಶಿಯ ಆಡಿಯೋ ವೈರಲ್

  |

  ನಟ ದರ್ಶನ್ ಹಾಗೂ ಗೆಳೆಯರು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಕೆಲವು ದಿನಗಳ ಹಿಂದೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದು ವೈರಲ್ ಆಗಿದೆ.

  ಘಟನೆ ನಡೆದಾಗ ಅಲ್ಲಿಯೇ ಹಾಜರಿದ್ದ ಎನ್ನಲಾದ ವ್ಯಕ್ತಿಯೊಬ್ಬರು ದೂರವಾಣಿಯಲ್ಲಿ ಬೇರೊಬ್ಬ ವ್ಯಕ್ತಿಗೆ ಅಂದಿನ ಘಟನೆಯನ್ನು ವಿವರಿಸುತ್ತಿರುವ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದ್ದು, ಆಡಿಯೋನಲ್ಲಿ ''ದರ್ಶನ್ ಹೋಟೆಲ್ ಸಿಬ್ಬಂದಿಯನ್ನು ಹೊಡೆದರು ಘಟನೆ ನಡೆದಾಗ ನಾನು ಅಲ್ಲಿಯೇ ಇದ್ದೆ'' ಎಂದಿದ್ದಾರೆ.

  ಇಂದ್ರಜಿತ್ ಕೊಟ್ಟ ದೂರಿನಲ್ಲಿ ದರ್ಶನ್ ಹೆಸರೇ ಇಲ್ಲ: ಮನವಿ ಪತ್ರದಲ್ಲಿ ಏನಿದೆ?ಇಂದ್ರಜಿತ್ ಕೊಟ್ಟ ದೂರಿನಲ್ಲಿ ದರ್ಶನ್ ಹೆಸರೇ ಇಲ್ಲ: ಮನವಿ ಪತ್ರದಲ್ಲಿ ಏನಿದೆ?

  ''ರಾತ್ರಿ ಒಂದುವರೆ ಗಂಟೆಯಲ್ಲಿ ಇಬ್ಬರಿಗೆ ರಪಾ-ರಪಾ ಹೊಡೆಯುತ್ತಿದ್ದ. ಮೊದಲು 50 ವರ್ಷ ವಯಸ್ಸಿನ ವ್ಯಕ್ತಿಗೆ ಹೊಡೆದ. ಯಾಕ್ರೊ ಊಟ ತಂದುಕೊಡೋಕೆ ಲೇಟ್ ಮಾಡ್ತೀರ ಅಂತ ಹೊಡೆದ, ನಾನು ಇಲ್ಲಿಗೆ (ಹೋಟೆಲ್‌ಗೆ) ಪುಕ್ಸಟ್ಟೆ ಬರ್ತೀನಿ ಅಂತ ಹೀಗೆ ಮಾಡ್ತೀರಾ ಅಂತ ಹೇಳಿ ಐವತ್ತು ಸಾವಿರ ದುಡ್ಡಿನ ಕಟ್ಟು ಎಸೆದ. ಆ ದುಡ್ಡನ್ನು ಮ್ಯಾನೇಜರ್ ಆಯ್ದುಕೊಳ್ಳಲು ಹೋದ ಅವನ ತಲೆಗೆ ಹೊಡೆದ. ನಾನು ಹೋಗಿ ಅಲ್ಲಿ ನಿಂತು ಕೊಂಡೆ. ನನ್ನನ್ನೂ ಕೆಟ್ಟದಾಗಿ ಬೈದ. ನಾನು ಮುಂದಕ್ಕೆ ಹೋಗಲಿಲ್ಲ'' ಎಂದಿದ್ದಾನೆ ಆ ಅನಾಮಿಕ ವ್ಯಕ್ತಿ.

  ನಾನು ಅಲ್ಲಿಯೇ ಇದ್ದೆ, ನನಗೂ ಬೈದ: ಆಡಿಯೋದಲ್ಲಿನ ಧ್ವನಿ

  ನಾನು ಅಲ್ಲಿಯೇ ಇದ್ದೆ, ನನಗೂ ಬೈದ: ಆಡಿಯೋದಲ್ಲಿನ ಧ್ವನಿ

  ''ನಾನು ಅಲ್ಲಿಯೇ ಇದ್ದೆ. ಅಷ್ಟ್ರಲ್ಲಿ ದೊಡ್ಡೋರು ಬಂದು ಸಿಬ್ಬಂದಿಯನ್ನ ಹೊಡೆಯೋದು ಸರಿಯಲ್ಲ. ನಮ್ಮ ಹೋಟೆಲ್‌ ಅಲ್ಲಿ 200-300 ಜನ ಇದ್ದಾರೆ. ನಾಳೆ ಯೂನಿಯನ್‌ನವರೆಲ್ಲ ಸೇರಿ ಗಲಾಟೆ ಮಾಡಿದ್ರೆ ಏನ್ ಮಾಡ್ಲಿ. ನಾನು ಹೋಟೆಲ್ ನಡೆಸಬೇಕಪ್ಪ. ನಿಂಗೆ ಇಷ್ಟ ಇದ್ರೆ ಬಾ, ಇಲ್ದೇ ಇದ್ರೆ ಹೋಗು ಅಂತ ಹೇಳಿ ಕಳಿಸಿದರು'' ಎಂದಿದ್ದಾರೆ ಆ ಅನಾಮಿಕ ವ್ಯಕ್ತಿ.

  ''ಕುಮಾರಸ್ವಾಮಿ ಬೀಗರು ಫೋನ್ ಮಾಡಿ ಕೇಳ್ತಿದ್ದಾರೆ''

  ''ಕುಮಾರಸ್ವಾಮಿ ಬೀಗರು ಫೋನ್ ಮಾಡಿ ಕೇಳ್ತಿದ್ದಾರೆ''

  ''ದರ್ಶನ್ ಹೊಡೆದ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತಾಗಿಬಿಟ್ಟಿದೆ. ಎಲ್ಲಾ ಕೇಳ್ತಾವ್ರೆ ದರ್ಶನ್‌ ಹೊಡೆದ್ರಂತೆ ಹೌದ ಅಂತ. ಕುಮಾರಸ್ವಾಮಿ ಬೀಗರು ಫೋನ್ ಮಾಡಿ ಕೇಳ್ತಾವ್ರೆ ದರ್ಶನ್ ಹೊಡೆದ್ರಾ ಅಂತ'' ಎಂದಿದ್ದಾರೆ. ಇದಿಷ್ಟು ಆಡಿಯೋದಲ್ಲಿರುವ ಮಾಹಿತಿ.

  ದುಡ್ಡು ಎಸೆದ ವಿಷಯವನ್ನು ಇಂದ್ರಜಿತ್ ಲಂಕೇಶ್ ಉಲ್ಲೇಖಿಸಿದ್ದರು

  ದುಡ್ಡು ಎಸೆದ ವಿಷಯವನ್ನು ಇಂದ್ರಜಿತ್ ಲಂಕೇಶ್ ಉಲ್ಲೇಖಿಸಿದ್ದರು

  ಇಂದ್ರಜಿತ್ ಲಂಕೇಶ್ ಸಹ ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಬೇಕಾದರೆ ದುಡ್ಡು ಎಸೆದ ವಿಷಯ, ಇಬ್ಬರಿಗೆ ಹೊಡೆದ ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಈಗ ಆಡಿಯೋದಲ್ಲಿ ಹೇಳಲಾಗಿರುವ ಮಾಹಿತಿಗೂ ಇಂದ್ರಜಿತ್ ಹೇಳಿರುವ ಕೆಲವು ಮಾಹಿತಿಗೂ ತಾಳೆ ಆಗಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

  ಇಂದ್ರಜಿತ್ ಲಂಕೇಶ್ ಕೊಟ್ಟ ದೂರಿನಲ್ಲಿ ಏನಿದೆ? | Filmibeat Kannada
   ಸುದ್ದಿಗೋಷ್ಠಿ ನಡೆಸಲಿದ್ದಾರೆ ನಟ ದರ್ಶನ್

  ಸುದ್ದಿಗೋಷ್ಠಿ ನಡೆಸಲಿದ್ದಾರೆ ನಟ ದರ್ಶನ್

  ನಟ ದರ್ಶನ್ ಇಂದು ಸಂಜೆ ವೇಳೆಗೆ ಮೈಸೂರಿಗೆ ಭೇಟಿ ನೀಡಿದ್ದು, ನಾಳೆ ಆಷಾಢ ಶುಕ್ರವಾರದ ಪೂಜೆ ಮುಗಿಸಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಲ್ಲಿ ಎಲ್ಲ ವಿಷಯಗಳಿಗೂ ಸ್ಪಷ್ಟನೆ ನೀಡಲಿದ್ದಾರೆ. ಆದರೆ ಈಗಾಗಲೇ ಪ್ರಕರಣದ ಬಗ್ಗೆ ಮೈಸೂರು ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ಈಗಷ್ಟೆ ಆರಂಭಗೊಂಡಿದೆ.

  English summary
  Indrajit Lankesh alleged that Darshan beaten up hotel staff in Mysore. Now a audio clip viral related to the incident. In the audio clip a man saying that I'm present while the incident happened.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X