ಆಗಸ್ಟ್ 15ಕ್ಕೆ 'ಗಿಮಿಕ್' ಜೊತೆ 'ಬ್ರಹ್ಮಾಸ್ತ್ರ': ತಮಿಳಿನಲ್ಲಿ ಕುರುಕ್ಷೇತ್ರ

ಆಗಸ್ಟ್ 15 ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುತ್ತೆ. ಆ ಸಂಭ್ರಮವನ್ನ ಹೆಚ್ಚಿಸಲು ಸ್ಯಾಂಡಲ್ ವುಡ್ ನಲ್ಲಿ ಎರಡು ಸ್ಪೆಷಲ್ ಸಿನಿಮಾ ತೆರೆಕಾಣ್ತಿದೆ.

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಸಿನಿಮಾ ನಾಳೆ ಚಿತ್ರಮಂದಿರಕ್ಕೆ ಬರ್ತಿದೆ. ಇದೇ ಮೊದಲ ಬಾರಿಗೆ ಕಾಮಿಡಿ ಹಾರರ್ ಚಿತ್ರದಲ್ಲಿ ನಟ ಗಣೇಶ್ ಅಭಿನಯಿಸಿದ್ದು, ಈ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆ ಇದೆ.

ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸಿನಿಮಾದಿಂದ ಬಂದ ಲಾಭದಲ್ಲಿ ಶೇಕಡಾ 1 ರಷ್ಟು ಹಣವನ್ನ ಕರ್ನಾಟಕ ರಾಜ್ಯದ ನೆರೆ ಸಂತ್ರಸ್ಥರಿಗೆ ನೀಡುವುದಾಗಿ ಚಿತ್ರತಂಡ ತಿಳಿಸಿದೆ.

august-15-releasing-four-movies

ಗಿಮಿಕ್ ಜೊತೆ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾ ಕೂಡ ಥಿಯೇಟರ್ ಗೆ ಬರ್ತಿದೆ. 'ಒಂದು ಮೊಟ್ಟೆಯ ಕಥೆ' ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ನಟಿಸಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಹಾಗಾಗಿ, ಈ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ.

ಸ್ಯಾಂಡಲ್ ವುಡ್ ನ ಈ ಎರಡು ಚಿತ್ರಗಳ ಜೊತೆ ತಮಿಳಿನಲ್ಲಿ ಕುರುಕ್ಷೇತ್ರ ಎಂಟ್ರಿಯಾಗುತ್ತಿದೆ. ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಈಗಾಗಲೇ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡಿದೆ. ಈಗ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ.

august-15-releasing-four-movies

ದಕ್ಷಿಣದ ಈ ಮೂರು ಸಿನಿಮಾಗಳ ಜೊತೆ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಮಿಷನ್ ಮಂಗಲ್' ಸಿನಿಮಾ ಕೂಡ ನಾಳೆಯೇ ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಈ ನಾಲ್ಕು ಚಿತ್ರಗಳು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಿನಿಮಾ ಪ್ರೇಮಿಗಳ ಸಂಭ್ರಮ ಹೆಚ್ಚು ಮಾಡಲಿದೆ.

More from Filmibeat

English summary
Tamil version kurukshetra, ganresh starrer gimik, akshay kumar's mission mangal and gubbi mele brahmastra movies are releasing on August 15th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X