For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ ಗೆ ತಯಾರಾದ ದರ್ಶನ್: ಕಮಲ್, ಅಕ್ಷಯ್ ಕೊಡ್ತಾರೆ ಸರ್ಪ್ರೈಸ್.!

  By Bharath Kumar
  |
  ಆಗಸ್ಟ್‌ಗೆ ದರ್ಶನ್ ಅಭಿಮಾನಿಗಳಿಗೆ ಸಿಗಲಿದೆ ಸಿಹಿ ಸುದ್ದಿ..!! | Filmibeat Kannada

  ಆಗಸ್ಟ್ ತಿಂಗಳು ಬಂತಂದ್ರೆ ಸ್ವಾತಂತ್ಯ ದಿನಾಚರಣೆಯನ್ನ ಆಚರಿಸಲು ಇಡೀ ದೇಶವೇ ಕಾಯುತ್ತಿರುತ್ತೆ. ಈ ವಿಶೇಷ ತಿಂಗಳಿನಲ್ಲಿ ಸ್ಯಾಂಡಲ್ ವುಡ್ ನಲ್ಲೂ ಸಂಭ್ರಮ ಜೋರಾಗಿರುತ್ತೆ. ಹಾಗಾಗಿ, ಹೊಸ ಚಿತ್ರಗಳ ಪೋಸ್ಟರ್, ಟ್ರೈಲರ್, ಟೀಸರ್ ಅಥವಾ ಬೇರೆ ಕಾರ್ಯಕ್ರಮಗಳು ಇದ್ದೇ ಇರುತ್ತೆ.

  ಈಗಾಗಲೇ ಚಂದನವನದಲ್ಲಿ ಕೆಲವು ದೊಡ್ಡ ಸಿನಿಮಾ ಆಗಸ್ಟ್ ತಿಂಗಳಲ್ಲಿ, ಅದರಲ್ಲೂ ಆಗಸ್ಟ್ 15ರ ವಿಶೇಷವಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗುತ್ತಿದೆ. ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಯ ಚಿತ್ರಗಳು ಕೂಡ ಈ ವಿಶೇಷವಾದ ದಿನಕ್ಕೆ ತಯಾರಾಗಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಎರಡು ಗುಡ್ ನ್ಯೂಸ್ ಇದೆ. ಕಮಲ್ ಹಾಸನ್ ಅವರಿಂದ ಒಂದು ಉಡುಗೊರೆ ಇದೆ. ಅಕ್ಷಯ್ ಕುಮಾರ್ ಕೂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರೆ. ಹಾಗಿದ್ರೆ, ಆಗಸ್ಟ್ ತಿಂಗಳ ಸ್ಪೆಷಲ್ ಬೆಳವಣಿಗೆಗಳೇನಿದೆ.? ಮುಂದೆ ಓದಿ.....

  'ಒಡೆಯರ್' ಲಾಂಚ್

  'ಒಡೆಯರ್' ಲಾಂಚ್

  ಸದ್ಯದ ಮಾಹಿತಿ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ ಆಗಸ್ಟ್ 16 ರಂದು ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂದೇಶ್ ನಾಗರಾಜ್ ನಿರ್ಮಾಣ ಹಾಗೂ ಎಂಡಿ ಶ್ರೀಧರ್ ನಿರ್ದೇಶನದಲ್ಲಿ ಆರಂಭವಾಗಲಿರುವ 'ಒಡೆಯರ್' ಆಗಸ್ಟ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಲಿದೆಯಂತೆ. ಆ ದಿನ ನಿರ್ಮಾಪಕ ಸಂದೇಶ ನಾಗರಾಜ್ ಅವರ ಹುಟ್ಟುಹಬ್ಬವೂ ಇದೆ.

  ದರ್ಶನ್ 'ಒಡೆಯರ್' ಸಿನಿಮಾ ಲಾಂಚ್ ಗೆ ನಿಗದಿ ಆಯ್ತು ದಿನಾಂಕದರ್ಶನ್ 'ಒಡೆಯರ್' ಸಿನಿಮಾ ಲಾಂಚ್ ಗೆ ನಿಗದಿ ಆಯ್ತು ದಿನಾಂಕ

  'ಕುರುಕ್ಷೇತ್ರ' ಬರೋ ಸಾಧ್ಯತೆ.!

  'ಕುರುಕ್ಷೇತ್ರ' ಬರೋ ಸಾಧ್ಯತೆ.!

  ದರ್ಶನ್ ಅಭಿನಯಿಸಲಿರುವ 52ನೇ ಚಿತ್ರದ ಮುಹೂರ್ತ ಒಂದು ಕಡೆಯಾದರೇ, ಅದಕ್ಕೂ ಮುಂಚೆಯೇ ದರ್ಶನ್ ಅವರ 50ನೇ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆಯಂತೆ. ಈಗಾಗಲೇ ಶೂಟಿಂಗ್ ಮುಗಿಸಿರುವ 'ಕುರುಕ್ಷೇತ್ರ' ಆಗಸ್ಟ್ ಎರಡನೇ ವಾರ ಅಥವಾ ಮೂರನೇ ವಾರಕ್ಕೆ ಬಿಡುಗಡೆಯಾಗಲಿದೆ ಎನ್ನುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ್, ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಅಕ್ಷಯ್ ಕುಮಾರ್ 'ಗೋಲ್ಡ್'

  ಅಕ್ಷಯ್ ಕುಮಾರ್ 'ಗೋಲ್ಡ್'

  ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಗೋಲ್ಡ್ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಒಬ್ಬ ಬೆಂಗಾಲಿ ಹಾಕಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕು ಎಂಬ ಕನಸು ಹೊಂದಿದ್ದ ಈ ಆಟಗಾರನ ಸುತ್ತ ಚಿತ್ರದ ಕಥೆ ಇದೆ. ಹೀಗಾಗಿ ಆಗಸ್ಟ್ 15ರಂದು ಈ ಸಿನಿಮಾ ಬಂದ್ರೆ ಉತ್ತಮ ಎಂದು ನಿರ್ಧರಿಸಿರುವ ಚಿತ್ರತಂಡ ಅದೇ ದಿನ ತೆರೆಗೆ ತರುತ್ತಿದ್ದಾರೆ.

  'ಗೋಲ್ಡ್' ಪೋಸ್ಟರ್ ನೋಡಿ ಬೌಲ್ಡ್ ಆದ ಬಾಲಿವುಡ್ 'ಗೋಲ್ಡ್' ಪೋಸ್ಟರ್ ನೋಡಿ ಬೌಲ್ಡ್ ಆದ ಬಾಲಿವುಡ್

  'ವಿಶ್ವರೂಪಂ' ತೋರಿಸಲಿದ್ದಾರೆ ಕಮಲ್

  'ವಿಶ್ವರೂಪಂ' ತೋರಿಸಲಿದ್ದಾರೆ ಕಮಲ್

  ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದಲ್ಲಿ ತಯಾರಾಗಿರುವ 'ವಿಶ್ವರೂಪಂ-2' ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ದೇಶಭಕ್ತಿ ಮತ್ತು ದೇಶದ್ರೋಹದ ಕಥಾಹಂದರದಲ್ಲಿ ಸಿದ್ಧವಾಗಿರುವ ಈ ಸಿನಿಮಾವನ್ನ ಸ್ವತಃ ಕಮಲ್ ಹಾಸನ್ ನಟಿಸಿ, ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ.

  ರಜನಿಕಾಂತ್ ನಂತರ ಕಮಲ್ ಹಾಸನ್ ಗೂ ಕಾದಿದ್ಯಾ ಸಂಕಷ್ಟ.?ರಜನಿಕಾಂತ್ ನಂತರ ಕಮಲ್ ಹಾಸನ್ ಗೂ ಕಾದಿದ್ಯಾ ಸಂಕಷ್ಟ.?

  ಸತ್ಯಮೇವ ಜಯತೇ

  ಸತ್ಯಮೇವ ಜಯತೇ

  ಜಾನ್ ಅಬ್ರಾಹಂ ಅಭಿನಯದ 'ಸತ್ಯಮೇವ ಜಯತೇ' ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಮಿಲಪ್ ಜವಾರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

  English summary
  Challenging Star Darshan's new movie 'Wadeyar' will launch in August. and kamal haasan starrer Vishwaroopam 2 will be released on august 10.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X