For Quick Alerts
  ALLOW NOTIFICATIONS  
  For Daily Alerts

  ಆಸ್ಟ್ರೇಲಿಯಾ ಕ್ರಿಕೆಟಿಗನಿಗೂ ಗೊತ್ತು ನಮ್ಮ ಶಿವಣ್ಣನ ಗತ್ತು

  |

  ಕೊರೊನಾ ಕಾರಣಕ್ಕೆ ಈ ಬಾರಿಯ ಐಪಿಎಲ್‌ ಅರ್ಧದಲ್ಲೇ ರದ್ದಾಗಿದೆ. ಚೆನ್ನಾಗಿ ಆಡುತ್ತಿದ್ದ ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುತ್ತದೆಂಬ ನಿರೀಕ್ಷೆ ಇರಿಸಲಾಗಿತ್ತು ಆದರೆ ಐಪಿಎಲ್ ರದ್ದಾಗಿ ಆರ್‌ಸಿಬಿಯ ಕಪ್ ಕನಸು ಮತ್ತೆ ಭಗ್ನವಾಗಿದೆ.

  ಆರ್‌ಸಿಬಿ ಪರವಾಗಿ ಈ ಬಾರಿ ಕಣಕ್ಕೆ ಇಳಿದಿದ್ದ ಆಸ್ಟ್ರೇಲಿಯಾದ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಒಳ್ಳೆಯ ಫಾರ್ಮ್‌ನಲ್ಲಿದ್ದರು. ಆದರೆ ಐಪಿಎಲ್‌ ರದ್ದಾಗಿ ಆಸೆಯೆಲ್ಲ ನಿರಾಸೆಯಾಗಿದೆ. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ನೀಡಿದ ಸಂದರ್ಶನವೊಂದು ಕನ್ನಡಿಗರ ಮನ ಗೆಲ್ಲುತ್ತಿದೆ.

  ಆರ್‌ಸಿಬಿ ತಂಡದ ಜೊತೆಗಿರುವ ಮಿಸ್ಟರ್ ನ್ಯಾಗ್ಸ್ (ದಾನಿಶ್ ಸೇಠ್) ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಮಾಷೆಯಾಗಿ ಸಂದರ್ಶನ ಮಾಡಿದ್ದು, ಸಂದರ್ಶನದಲ್ಲಿ ಮ್ಯಾಕ್ಸ್‌ವೆಲ್ ಶಿವರಾಜ್ ಕುಮಾರ್ ಅವರ ಹಾಡೊಂದನ್ನು ಗುರುತಿಸಿದ್ದಾರೆ.

  ಸಂದರ್ಶನದಲ್ಲಿ ಮಿಸ್ಟರ್ ನ್ಯಾಗ್ಸ್, ಮ್ಯಾಕ್ಸ್‌ವೆಲ್‌ಗೆ 'ಹೊಡಿ ಮಗ, ಹೊಡಿ ಮಗ' ಹಾಡು ಹೇಳಿಕೊಡುತ್ತಾರೆ. ಹಾಡು ಹಾಡುವ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 'ಇದು ಯಾರ ಹಾಡು ಗೊತ್ತಾ?' ಎಂದು ದಾನಿಶ್ ಪ್ರಶ್ನಿಸುತ್ತಾರೆ. ಆಗ ಗ್ಲೆನ್ ಮ್ಯಾಕ್ಸ್‌ವೆಲ್ 'ಓಹ್, ನಮ್ಮ ಶಿವಣ್ಣ' ಎಂದು ಉತ್ತರ ನೀಡುತ್ತಾರೆ.

  ಮ್ಯಾಕ್ಸ್‌ವೆಲ್‌ಗೆ ಶಿವರಾಜ್ ಕುಮಾರ್ ಪರಿಚಯವಿದೆ ಎಂಬುದು ಆಶ್ಚರ್ಯ ಮೂಡಿಸಿದೆ. ಮ್ಯಾಕ್ಸ್‌ವೆಲ್‌ ಸಂದರ್ಶನದ ವಿಡಿಯೋವನ್ನು ಶಿವಣ್ಣನ ಅಭಿಮಾನಿಗಳು ಬಹುವಾಗಿ ಹಂಚಿಕೊಳ್ಳುತ್ತಿದ್ದಾರೆ.

  ಸಂದರ್ಶನದಲ್ಲಿ ಕೆಲವು ಕನ್ನಡ ಪದಗಳನ್ನು ಸಹ ಮ್ಯಾಕ್ಸ್‌ವೆಲ್ ಮಾತನಾಡುತ್ತಾರೆ. ಬೆಂಗಳೂರಿನ ಬಗ್ಗೆ, ಕೊಹ್ಲಿ, ಎಬಿಡಿ ಬಗ್ಗೆಯೂ ಮ್ಯಾಕ್ಸ್‌ವೆಲ್ ಮಾತನಾಡುತ್ತಾರೆ. ಸಚಿನ್ ಹಾಗೂ ರಿಕಿ ಪಾಂಟಿಂಗ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದಾಗ ರಿಕಿ ಪಾಂಟಿಂಗ್ ಅನ್ನು ಆರಿಸುತ್ತಾರೆ ಮ್ಯಾಕ್ಸ್‌ವೆಲ್.

  ಮ್ಯಾಕ್ಸ್‌ವೆಲ್‌ಗೆ ನಿಜವಾಗಲೂ 'ಹೊಡಿ ಮಗ' ಹಾಡು ಶಿವಣ್ಣನ ಸಿನಿಮಾದ್ದು ಎಂಬುದು ಗೊತ್ತಿದೆಯೋ ಅಥವಾ ದಾನಿಶ್ ಸೇಠ್ ಹೇಳಿಕೊಟ್ಟು ಮ್ಯಾಕ್ಸ್‌ವೆಲ್ ಬಾಯಿಂದ ಶಿವಣ್ಣನ ಹೆಸರು ಹೇಳಿಸಿದರೋ ಸ್ಪಷ್ಟವಿಲ್ಲ ಆದರೆ ವಿಡಿಯೋ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ.

  Indira Gandhi ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರಾಜಕುಮಾರ್ ನಿರಾಕರಿಸಿದ್ದು ಹೇಗೆ? | Filmibeat kannada

  ಶಿವರಾಜ್ ಕುಮಾರ್ ಅವರು ಒಳ್ಳೆಯ ಕ್ರಿಕೆಟಿಗರಾಗಿದ್ದು ಆರ್‌ಸಿಬಿಯ ಬೆಂಬಲಿಗರೂ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ಆರ್‌ಸಿಬಿ ಪಂದ್ಯವಿದ್ದಾಗ ಕ್ರೀಡಾಂಗಣಕ್ಕೆ ಹೋಗಿ ಬೆಂಬಲಿಸುತ್ತಿದ್ದರು ಶಿವಣ್ಣ.

  English summary
  Australian cricketer Glenn Maxwell recognize Shiva Rajkumar's 'Hodi Maga Hodi Maga' song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X