ಜೈಲಿಂದ ಹೊರ ಬಂದ ದರ್ಶನ್ ರಾಜಕೀಯಕ್ಕೆ ಬರುವುದು ಗ್ಯಾರಂಟಿ..!
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಈ ವಾದ-ವಿವಾದ ಏನೇ ಇರಲಿ.. ಸದ್ಯಕ್ಕೆ ದರ್ಶನ್ ಬಗ್ಗೆ ಅರ್ಜುನ್ ಗುರೂಜಿ ಹೇಳಿದ ಮತ್ತು ಹೇಳಿರುವ ಭವಿಷ್ಯದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಹೌದು, ಅಸಲಿಗೆ ದರ್ಶನ್ ಜೈಲು ಪಾಲಾದ ನಂತರ ಈ ಕಡೆ ವಿಜಯಲಕ್ಷ್ಮಿ ಜಾಮೀನು ಪಡೆಯಲು ಹರಸಾಹಸವನ್ನು ಮಾಡುತ್ತಿದ್ದ ಸಮಯದಲ್ಲಿ ಅರ್ಜುನ್ ಗುರೂಜಿ ಅಕ್ಟೋಬರ್ 20ರ ನಂತರ ದರ್ಶನ್ ಹೊರ ಬರುತ್ತಾರೆ ಎಂದು ಹೇಳಿದ್ದರು. ಇವರಾಡಿದ ಈ ಮಾತು ಈಗ ನಿಜವಾಗಿದೆ. ಈ ಹಿನ್ನೆಲೆ ದರ್ಶನ್ ಮುಂದಿನ ಬದುಕಿನ ಕುರಿತು ಅನೇಕರಲ್ಲಿ ಜಿಜ್ಞಾಸೆ ಮೂಡಿದೆ. ಹೀಗಾಗಿಯೇ ದರ್ಶನ್ ಮುಂದಿನ ನಡೆ ಹೇಗಿರಲಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಪಡೆಯಲು ಮಾಧ್ಯಮದವರು ಮೈಸೂರಿನ ಅವಧೂತ ಅರ್ಜುನ್ ಗುರೂಜಿ ಬಳಿ ತೆರಳಿದ್ದಾರೆ. ಈ ಸಮಯದಲ್ಲಿ ಅರ್ಜುನ್ ಗುರೂಜಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜಕೀಯದಲ್ಲಿ ದರ್ಶನ್‌ಗೆ ಉಜ್ವಲವಾದ ಭವಿಷ್ಯ ಇದೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿರುವ ಅರ್ಜುನ್ ಗುರೂಜಿ, ವಿಜಯಲಕ್ಷ್ಮಿ ಅವರ ಪ್ರಾರ್ಥನೆಯ ಫಲ ಇವತ್ತು ದರ್ಶನ್ ಆಚೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಸಾಕಷ್ಟು ದೇವಾಲಯಗಳಿಗೆ ವಿಜಯಲಕ್ಷ್ಮಿ ತೆರಳಿದ್ದರು ಅವರ ಪ್ರಾರ್ಥನೆ ಫಲ ನೀಡಿದೆ ಎಂದು ಹೇಳಿದ್ದಾರೆ. ಇನ್ನೂ ದರ್ಶನ್ ಪಾಲಿಗೆ ಮಗ್ಗಲ ಮುಳ್ಳಾಗಿದ್ದು ಪವಿತ್ರಾ ಗೌಡ. ಈ ಕಾರಣಕ್ಕೆ ದರ್ಶನ್‌ಗೆ ಸ್ತ್ರೀ ದೋಷ ಇದೆ ಎಂದು ಅನೇಕರು ಮಾತನಾಡಿದ್ದರು.
ಇದಕ್ಕೆ ಉತ್ತರವನ್ನು ಕೂಡ ನೀಡಿರುವ ಅರ್ಜುನ್ ಗುರೂಜಿ ಹೆಣ್ಣಿನಿಂದ ರಾಜ್ಯ ಉದ್ಧಾರವೂ ಆಗಿದೆ. ನಾಶವೂ ಆಗಿದೆ. ಸ್ತ್ರೀ ದೋಷ ಎಂಬುದೆಲ್ಲ ಸುಳ್ಳು, ಕೆಟ್ಟ ಸಮಯ, ಕೆಟ್ಟ ನಿರ್ಧಾರಗಳಿಂದ ಈ ತರ ಆಗುತ್ತೆ ಎಂದು ಹೇಳಿದ್ದಾರೆ. ತಾಯಿ ಕಣ್ಣೀರು ಹಾಕದಂತೆ ನೋಡಿಕೊಳ್ಳುವುದು ಮಗನ ಕರ್ತವ್ಯ ದರ್ಶನ್ ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ, ತಾಯಿ ಮಕ್ಕಳನ್ನು ಕೈ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ 2025ರಲ್ಲಿ ದರ್ಶನ್ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿರುವ ಅರ್ಜುನ್ ಗುರೂಜಿ ದರ್ಶನ್ ರಾಜಕೀಯ ಜೀವನದ ಕುರಿತು ಕೂಡ ಮಾತನಾಡಿದ್ದಾರೆ. ಮುಂದೊಂದು ದಿನ ದರ್ಶನ್ ರಾಜಕೀಯಕ್ಕೂ ಬರುತ್ತಾರೆ, ಅವರಿಗೆ ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯ ಇದೆ ಎಂದು ಹೇಳಿರುವ ಅರ್ಜುನ್ ಗುರೂಜಿ ರಾಜಕೀಯ ಪಕ್ಷಗಳೇ ಅವರ ಬಳಿ ಹೋಗುತ್ತವೆ ಎಂದು ಹೇಳಿದ್ದಾರೆ. ಸಾಕಷ್ಟು ಕನ್ನಡಿಗರ ಪ್ರೀತಿಯನ್ನು ದರ್ಶನ್ ಸಂಪಾದಿಸಿದ್ದಾರೆ, ಒಳ್ಳೆಯ ನಟ ಎಂಬ ಪ್ರೀತಿ ಅವರಿಗೆ ಸಿಕ್ಕಿದೆ. ಇನ್ನೂ ಯಾರಿಗೂ ಗೊತ್ತಾಗದಂತೆ ಸಾಕಷ್ಟು ಜನರಿಗೆ ಮನೆ ಕಟ್ಟಿ ಕೊಟ್ಟಿದ್ದಾರೆ ಎಂದಿರುವ ಅರ್ಜುನ್ ಗುರೂಜಿ ದರ್ಶನ್ ಉತ್ತಮ ಪ್ರಜೆಯಾಗುತ್ತಾರೆ ಎಂದು ಹೇಳಿದ್ಧಾರೆ.
ಇನ್ನುಳಿದಂತೆ ಸದ್ಯಕ್ಕೆ ಜಾಮೀನು ಪಡೆದು ಹೊರ ಬಂದಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಬೆನ್ನು ನೋವಿನ ಚಿಕಿತ್ಸೆಗಾಗಿ ಇಂದು ದರ್ಶನ್ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳಿವೆ. ಇನ್ನೂ ದರ್ಶನ್ ತಮ್ಮ ಪತ್ನಿಯ ಮನೆಯಲ್ಲಿರುವ ವಿಚಾರ ತಿಳಿದ ಅವರ ಅಭಿಮಾನಿಗಳು ಹೊಸಕೆರೆಹಳ್ಳಿಯಲ್ಲಿರುವ ಅಪಾಟ್ಮೆಂಟ್ ಬಳಿ ಬೀಡು ಬಿಟ್ಟಿದ್ದಾರೆ. ದರ್ಶನ್ ಅವರನ್ನು ನೋಡಲು ಕಾದು ಕುಳಿತುಕೊಂಡಿದ್ಧಾರೆ.


Click it and Unblock the Notifications










