'ಅವನೇ ಶ್ರೀಮನ್ನಾರಾಯಣ' ಹಾಗೂ '777 ಚಾರ್ಲಿ' ಫಸ್ಟ್ ಲುಕ್ ರಿಲೀಸ್
Recommended Video

ನಟ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಹಾಗೂ '777 ಚಾರ್ಲಿ' ಈ ಎರಡು ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಇಂದು ರಕ್ಷಿತ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಈ ವಿಶೇಷವಾಗಿ ಚಿತ್ರತಂಡಗಳು ಪೋಸ್ಟರ್ ರಿಲೀಸ್ ಮಾಡಿವೆ.
ಎರಡೂ ಸಿನಿಮಾಗಳ ಪೋಸ್ಟರ್ ನಲ್ಲಿಯೂ ಹೊಸತನ ಎದ್ದು ಕಾಣುತ್ತಿದೆ. ವಿಭಿನ್ನ ಕಥಾ ವಸ್ತುವಿನ ಮೂಲಕ ಬರುತ್ತಿರುವ ಈ ಸಿನಿಮಾಗಳು ಈಗಾಗಲೇ ನಿರೀಕ್ಷೆ ಹುಟ್ಟಿಸಿವೆ. ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು 'ಕಿರಿಕ್ ಪಾರ್ಟಿ' ಗೆಲುವಿನ ನಂತರ ರಕ್ಷಿತ್ ಈ ಎರಡು ಸಿನಿಮಾಗಳಲ್ಲಿ ಬಿಜಿ ಇದ್ದಾರೆ.

ಅಂದಹಾಗೆ, '777 ಚಾರ್ಲಿ' ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಶ್ವಾನದ ಲೈಸನ್ಸ್ ನಂಬರ್ 777 ಅಂತೆ. ಹೀಗಾಗಿ ಚಿತ್ರಕ್ಕೆ '777 ಚಾರ್ಲಿ' ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ರಕ್ಷಿತ್ ಶೆಟ್ಟಿ ಜೊತೆ 'ರಿಕ್ಕಿ', 'ಕಿರಿಕ್ ಪಾರ್ಟಿ' ಚಿತ್ರಗಳಿಲ್ಲಿ ಕೆಲಸ ಮಾಡಿರುವ ನಿರ್ದೇಶಕ ಕಿರಣ್ ರಾಜ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಪರಿಚಿತವಾಗುತ್ತಿದ್ದಾರೆ.

'ಅವನೇಶ್ರೀನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಐದು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಭ್ರಷ್ಟ ಪೊಲೀಸ್ ಪಾತ್ರವನ್ನು ರಕ್ಷಿತ್ ಇಲ್ಲಿ ಪ್ಲೇ ಮಾಡುತ್ತಿದ್ದಾರೆ. ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಜೊತೆಗೆ ಶಾನ್ವಿ ಶ್ರೀವತ್ಸವ್ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ,'ರಂಗಿತರಂಗ' ಖ್ಯಾತಿಯ ನಿರ್ಮಾಪಕರಾದ ಪ್ರಕಾಶ್, ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 'ಕಿರಿಕ್ ಪಾರ್ಟಿ'ಗೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ಅವರೇ ಈ ಚಿತ್ರಕ್ಕೆ ಮ್ಯೂಸಿಕ್ ನೀಡಲಿದ್ದಾರೆ.


Click it and Unblock the Notifications











