ಅಕ್ಷಯ್ ಕುಮಾರ್ ಗೆ 'ಗುಡ್ ನ್ಯೂಸ್' ಆದ್ರೆ ರಕ್ಷಿತ್ ಶೆಟ್ಟಿಗೆ ಬಿಗ್ ಚಾಲೆಂಜ್

Recommended Video

Avane Srimannarayana and Good News movie will released on same day.

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಒಂದೊಂದು ಚಿತ್ರದಲ್ಲೂ ಒಂದೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತ ಗಮನ ಸೆಳೆಯುತ್ತಿರುವ ಅಕ್ಷಯ್ ಬಳಿ ಸಾಕಷ್ಟು ಸಿನಿಮಾಗಳಿವೆ. ಇತ್ತ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದಾರೆ.

ರಕ್ಷಿತ್ ತೆರೆ ಮೇಲೆ ಕಾಣಿಸಿಕೊಳ್ಳದೆ ಸುಮಾರು ಮೂರು ವರ್ಷಗಳಾಗುತ್ತಾ ಬಂತು. ಅದೇನೆ ಇರಲಿ ಅಕ್ಷಯ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿಗೂ ಎಲ್ಲಿಯ ಲಿಂಕು ಅಂತ ಯೋಚಿಸುತ್ತಿದ್ದೀರಾ? ಡಿಸೆಂಬರ್ ಗೆ ಅಕ್ಷಯ್ ಕುಮಾರ್ 'ಗುಡ್ ನ್ಯೂಸ್' ಕೊಡಲು ರೆಡಿಯಾಗಿದ್ದಾರೆ. ಆದರೆ ಅಕ್ಷಯ್ ಕುಮಾರ್ ಈ ಗುಡ್ ನ್ಯೂಸ್ ರಕ್ಷಿತ್ ಗೆ ಬ್ಯಾಡ್ ನ್ಯೂಸ್ ಆಗುತ್ತಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ

ಡಿಸೆಂಬರ್ 27ಕ್ಕೆ ಅವನೇ ಶ್ರೀಮನ್ನಾರಾಯಣ

ಡಿಸೆಂಬರ್ 27ಕ್ಕೆ ಅವನೇ ಶ್ರೀಮನ್ನಾರಾಯಣ

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ಡಿಸೆಂಬರ್ 27ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಚಿತ್ರಾಭಿಮಾನಿಗಳು ಭಾರಿ ಕಾತರ ಮತ್ತು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ. ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ 'ಅವನೇ ಶ್ರೀಮನ್ನಾರಾಯಣ' ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತೀಯ ಭಾಷೆಯ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ.

ಅದೇ ದಿನ ಅಕ್ಷಯ್ ಗುಡ್ ನ್ಯೂಸ್

ಅದೇ ದಿನ ಅಕ್ಷಯ್ ಗುಡ್ ನ್ಯೂಸ್

ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಗುಡ್ ನ್ಯೂಸ್ ಸಿನಿಮಾ ಕೂಡ ಡಿಸೆಂಬರ್ 27ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೆ ಟ್ರೈಲರ್ ಮೂಲಕ ನಿರೀಕ್ಷೆಯ ಮಟ್ಟವನ್ನು ಹೆಚ್ಚಿಸಿರುವ ಗುಡ್ ನ್ಯೂಸ್, ಅವನೇ ಶ್ರೀಮನ್ನಾರಾಯಣ ಪಾಲಿಗೆ ಬ್ಯಾಡ್ ನ್ಯೂಸ್ ಆಗುತ್ತಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಹಿಂದಿಯಲ್ಲೂ ತೆರೆಗೆ ಬರುತ್ತಿರುವುದರಿಂದ ಶ್ರೀಮನ್ನಾರಾಯಣನ ದರ್ಶನಕ್ಕೆ ಕೊಂಚ ಕಷ್ಟ ಆಗುತ್ತಾ ಎನ್ನುವ ಅನುಮಾನ ಮೂಡಿದೆ.

'ಝೀರೋ' ಮುಂದೆ ಗೆದ್ದು ಬೀಗಿದ್ದ 'ಕೆಜಿಎಫ್'

'ಝೀರೋ' ಮುಂದೆ ಗೆದ್ದು ಬೀಗಿದ್ದ 'ಕೆಜಿಎಫ್'

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ರಿಲೀಸ್ ದಿನವೆ ಬಾಲಿವುಡ್ ನಲ್ಲಿ ಬಹು ನಿರೀಕ್ಷೆಯನ್ನು ಮೂಡಿಸಿದ್ದ ಶಾರುಖ್ ಖಾನ್ ಅಭಿನಯದ 'ಝೀರೋ' ಸಿನಿಮಾ ತೆರೆಗೆ ಬಂದಿತ್ತು. ಬಾಲಿವುಡ್ ನ ದೊಡ್ಡ ಸ್ಟಾರ್ ಶಾರುಖ್ ಮುಂದೆ ಕನ್ನಡದ ಕೆಜಿಎಫ್ ಸಿನಿಮಾ ಗೆದ್ದು ಬೀಗಿತ್ತು. ಹಾಗೆ ಈಗ ಕನ್ನಡದ ಅವನೇ ಶ್ರೀಮನ್ನಾರಾಯಣ ದಿನವೆ ಗುಡ್ ನ್ಯೂಸ್ ರಿಲೀಸ್ ಆಗುತ್ತಿದೆ. ಶ್ರೀಮನ್ನಾರಾಯಾಣನ ಆರ್ಭಟದ ಮುಂದೆ ಅಕ್ಷಯ್ ಕುಮಾರ್ ಗೆ ಗುಡ್ ನ್ಯೂಸ್ ಆಗುವ ಬದಲು ಬ್ಯಾಡ್ ನ್ಯೂಸ್ ಆದರು ಅಚ್ಚರಿ ಇಲ್ಲ.

ಸಧ್ಯದಲ್ಲೇ ಅವನೇ ಶ್ರೀಮನ್ನಾರಾಯಣ ಟ್ರೇಲರ್

ಸಧ್ಯದಲ್ಲೇ ಅವನೇ ಶ್ರೀಮನ್ನಾರಾಯಣ ಟ್ರೇಲರ್

ಇದೆ ತಿಂಗಳು 21 ರಿಂದ 25ರ ಒಳಗೆ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಆಗಲಿದೆ. ಇನ್ನು ವಿಶೇಷ ಅಂದರೆ ಈಗಾಗಲೆ ರಿಲೀಸ್ ಆಗಿರುವ ಟ್ರೈಲರ್ ಮತ್ತು ಟೀಸರ್ ಗೆ ಸದ್ಯ ರಿಲೀಸ್ ಆಗಲಿರುವ ಟ್ರೈಲರ್ ಗೂ ಒಂದು ಲಿಂಕ್ ಇರಲಿದೆಯಂತೆ. ಈ ಬಗ್ಗೆ ಕೂಡ ರಕ್ಷಿತ್ ಶೆಟ್ಟಿಯೆ ಹೇಳಿದ್ದಾರೆ. ಹಾಗಾಗಿ ಸದ್ಯ ರಿಲೀಸ್ ಆಗಲಿರುವ ಅವನೇ ಶ್ರೀಮನ್ನಾರಾಯಣ ಟ್ರೈಲರ್ ಮೇಲಿಯೂ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Kannada actor Rakshith Shetty starrer Avane Srimannarayana and Akshay Kumar starrer Good News movie will released on same day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X