For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೆ ಮೊದಲೇ ಅಕ್ಷಯ್ ಕುಮಾರ್ ಸಿನಿಮಾ ಹಿಂದೆ ಹಾಕಿದ ರಕ್ಷಿತ್ ಶೆಟ್ಟಿ

  |

  ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟ್ರೇಲರ್ ದಿನಾಂಕ ನಿಗದಿ ಆಗಿದೆ. ನವೆಂಬರ್ 28 ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಸಿನಿಮಾ ಡಿಸೆಂಬರ್ 27 ರಂದು ತೆರೆಗೆ ಬರುತ್ತಿದೆ.

  'ಅವನೇ ಶ್ರೀಮನ್ನಾರಾಯಣ' ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆ ಆಗುತ್ತಿದೆ. ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದೆ. ದೊಡ್ಡ ಬಜೆಟ್ ನ ಸಿನಿಮಾ ಇದಾಗಿದೆ. ಆದರೆ, ಈ ಸಿನಿಮಾಗೆ ಪೈಪೋಟಿ ನೀಡಲು ಹಿಂದಿ ಸಿನಿಮಾವೊಂದು ಸಿದ್ಧವಾಗಿದೆ.

  ಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇ ಶ್ರೀಮನ್ನಾರಾಯಣ' ಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇ ಶ್ರೀಮನ್ನಾರಾಯಣ'

  ನಟ ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಅಭಿನಯದ 'ಗುಡ್ ನ್ಯೂಜ್' ಸಿನಿಮಾ ಕೂಡ ಡಿಸೆಂಬರ್ 27 ರಂದೇ ಚಿತ್ರಮಂದಿರಕ್ಕೆ ಬರುತ್ತಿದೆ. ಬಾಲಿವುಡ್ ಸ್ಟಾರ್ ನಟನ ಈ ಸಿನಿಮಾದಿಂದ ಕನ್ನಡ ಚಿತ್ರಕ್ಕೆ ಕೊಂಚ ತೊಂದರೆ ಆಗಬಹುದು ಎನ್ನುವ ಮಾತಿದೆ. ಆದರೆ, ಈ ರೀತಿ ಹೇಳುವುದಕ್ಕಿಂತ 'ಅವನೇ ಶ್ರೀಮನ್ನಾರಾಯಣ' ಚಿತ್ರದಿಂದ 'ಗುಡ್ ನ್ಯೂಜ್' ಸಿನಿಮಾಗೆ ತೊಂದರೆ ಆಗುತ್ತದೆ ಎಂದು ಹೇಳಬಹುದು ಸೂಕ್ತ ಎನಿಸುತ್ತಿದೆ. ಹೇಗೆ ಎನ್ನುವ ಕಾರಣ ಈ ಕೆಳಗೆ ಇದೆ.

  ಕನ್ನಡ ಚಿತ್ರದ ಪವರ್ ತೋರಿಸಿದ ನಾರಾಯಣ

  ಕನ್ನಡ ಚಿತ್ರದ ಪವರ್ ತೋರಿಸಿದ ನಾರಾಯಣ

  'ಗುಡ್ ನ್ಯೂಜ್' ಸಿನಿಮಾಗಿಂತ 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ನೋಡುವುದಕ್ಕಾಗಿಯೇ ಹೆಚ್ಚು ಜನರು ಕಾತುರರಾಗಿದ್ದಾರೆ. ಈ ವಿಷಯಕ್ಕೆ ಬುಕ್ ಮೈ ಶೋ ನೋಡಿದರೆ, ಒಂದು ಅಂದಾಜು ಸಿಗುತ್ತದೆ. 1 ಲಕ್ಷದ 24 ಸಾವಿರಕ್ಕೂ ಅಧಿಕ ಜನರು 'ಅವನೇ ಶ್ರೀಮನ್ನಾರಾಯಣ' ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ, 'ಗುಡ್ ನ್ಯೂಜ್'ಗೆ ಕೇವಲ 8+ ಸಾವಿರ ಮತಗಳು ಸಿಕ್ಕಿವೆ.

  'ಶ್ರೀಮನ್ನಾರಾಯಣ'ನಿಗೆ ಮಸಿ ಬಳಿಯುವ ಪ್ರಯತ್ನ: ರಕ್ಷಿತ್ ಟಾರ್ಗೆಟ್ ಮಾಡಿದ ಕಿಡಿಗೇಡಿಗಳು!'ಶ್ರೀಮನ್ನಾರಾಯಣ'ನಿಗೆ ಮಸಿ ಬಳಿಯುವ ಪ್ರಯತ್ನ: ರಕ್ಷಿತ್ ಟಾರ್ಗೆಟ್ ಮಾಡಿದ ಕಿಡಿಗೇಡಿಗಳು!

  ಶಾರೂಖ್ ರನ್ನು 'ಜೀರೋ' ಮಾಡಿದ್ದ 'ಕೆಜಿಎಫ್'

  ಶಾರೂಖ್ ರನ್ನು 'ಜೀರೋ' ಮಾಡಿದ್ದ 'ಕೆಜಿಎಫ್'

  ಕಳೆದ ವರ್ಷ ಇದೇ ರೀತಿ ಯಶ್ ನಟನೆಯ 'ಕೆಜಿಎಫ್' ಸಿನಿಮಾದ ಮುಂದೆ ಶಾರೂಖ್ ಖಾನ್ ನಟನೆಯ 'ಜೀರೋ' ಸಿನಿಮಾ ಬಿಡುಗಡೆ ಆಗಿತ್ತು. ಆಗ 'ಕೆಜಿಎಫ್' ಸಿನಿಮಾ ಗೆದ್ದು ತೋರಿಸಿತ್ತು. ಪ್ರಾರಂಭದಲ್ಲಿ 'ಜೀರೋ'ದಿಂದ 'ಕೆಜಿಎಫ್'ಗೆ ತೊಂದರೆ ಆಗುತ್ತದೆ ಎನ್ನುವ ಮಾತಿತ್ತು. ಆದರೆ, ನಿಜವಾಗಿಯೂ 'ಕೆಜಿಎಫ್'ದಿಂದ 'ಜೀರೋ' ಪೈಪೋಟಿ ಎದುರಿಸಬೇಕಾಯಿತು.

  ಮತ್ತೆ ಅದೇ ರೀತಿ ಆಗುತ್ತಾ

  ಮತ್ತೆ ಅದೇ ರೀತಿ ಆಗುತ್ತಾ

  ಅಂದು 'ಕೆಜಿಎಫ್' ಸಿನಿಮಾ 'ಜೀರೋ' ಸಿನಿಮಾವನ್ನು ಸೋಲಿಸಿತ್ತು. ಹಿಂದಿ ಪ್ರೇಕ್ಷಕರೇ ಕನ್ನಡ ಸಿನಿಮಾವನ್ನು ಅಪ್ಪಿಕೊಂಡರು. ಈಗ ಅದೇ ರೀತಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಮುಂದೆ 'ಗುಡ್ ನ್ಯೂಜ್' ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಲೂ ಕನ್ನಡ ಸಿನಿಮಾ ಹಿಂದಿ ಸಿನಿಮಾವನ್ನು ಸೋಲಿಸುತ್ತದೆಯೇ ಎನ್ನುವ ಕುತೂಹಲ ಇದೆ. ಈ ಎರಡು ಚಿತ್ರಗಳ ಪೈಕಿ ಯಾರ ಗೆಲ್ಲುತ್ತಾರೆ ಎನ್ನುವ ಕುತೂಹಲ ಇದೆ.

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ನಿರ್ಮಾಪಕ'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ನಿರ್ಮಾಪಕ

  ಕನ್ನಡದ ಮತ್ತೊಂದು ಅದ್ದೂರಿ ಸಿನಿಮಾ

  ಕನ್ನಡದ ಮತ್ತೊಂದು ಅದ್ದೂರಿ ಸಿನಿಮಾ

  'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕನ್ನಡ ಚಿತ್ರರಂಗದ ಮತ್ತೊಂದು ಅದ್ದೂರಿ ಸಿನಿಮಾ. ಸಿನಿಮಾ ಮೇಕಿಂಗ್ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ರಕ್ಷಿತ್ ಶೆಟ್ಟಿ ಮತ್ತು ತಂಡ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಲು ಸಿದ್ಧವಾಗಿದ್ದಾರೆ. ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಸಚಿನ್ ಚಿತ್ರದ ನಿರ್ದೇಶನ ಮಾಡಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ.

  English summary
  Avane Srimannarayana And Good Newwz both the movies are releasing on December 27th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X