Don't Miss!
- Sports
ಸಚಿನ್ ಪ್ರಥಮ ಶತಕಕ್ಕೆ 32 ವರ್ಷ: ಯಾರ ವಿರುದ್ಧ, ಗಳಿಸಿದ್ದೆಷ್ಟು ರನ್, ಸಚಿನ್ ಆಡಿದ್ದ ಕ್ರಮಾಂಕ ಯಾವುದು?
- News
ಅಮೀರ್ ನಟನೆಯ ಲಾಲ್ ಸಿಂಗ್ ಚಡ್ಡಾ ನೋಡಿ ಹೃತಿಕ್ ರೋಷನ್ ಹೇಳಿದ್ದು ಹೀಗೆ!
- Finance
75ನೇ ಸ್ವಾತಂತ್ರ್ಯೋತ್ಸವ: ಜಿಯೋದಿಂದ ಗ್ರಾಹಕರಿಗೆ ಏನು ಕೊಡುಗೆ?
- Automobiles
ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು
- Technology
ಇನ್ಸ್ಟಾಗ್ರಾಮ್ನಲ್ಲಿ ನಿಮ್ಮ ಹೆಸರನ್ನು ಸ್ಟೈಲಿಶ್ ಆಗಿ ಬರೆಯಲು ಹೀಗೆ ಮಾಡಿ!
- Lifestyle
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
'ಅವನೇ ಶ್ರೀಮನ್ನಾರಾಯಣ' ಕಲಿಸಿದ ಪಾಠವೇ '777 ಚಾರ್ಲಿ' ಗೆಲುವು- ರಕ್ಷಿತ್ ಶೆಟ್ಟಿ!
ನಟ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ರಿಲೀಸ್ ಆಗಿದೆ. ರಿಲೀಸ್ ಬಳಿಕ ಸಿನಿಮಾ ಉತ್ತಮ ಪ್ರದರ್ಶನದ ಜೊತೆಗೆ ಉತ್ತಮ ಗಳಿಕೆಯನ್ನು ಕೂಡ ಕಂಡಿದೆ. '777 ಚಾರ್ಲಿ' ರಕ್ಷಿತ್ ಶೆಟ್ಟಿ ಸಿನಿಮಾ ಕೆರಿಯರ್ನಲ್ಲಿ ಹಿಟ್ ಲಿಸ್ಟಿಗೆ ಸೇರಿದ ಮತ್ತೊಂದು ಸಿನಿಮಾ.
ಈ ಸಿನಿಮಾ ರಿಲೀಸ್ಗೂ ಮುನ್ನ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ರಿಲೀಸ್ ಬಳಿಕ ನಿರೀಕ್ಷೆಯನ್ನು ಮುಟ್ಟಿದ್ದು, ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಟ್ಟಿಹಾಕಿದೆ. ಸಣ್ಣ ಗ್ಯಾಪ್ ಬಳಿಕ ತೆರೆಗೆ ಬಂದ ರಕ್ಷಿತ್ ಶೆಟ್ಟಿ ಸಿನಿಮಾ ಬಾಕ್ಸಾಫೀಸ್ನಲ್ಲೂ ಕೂಡ ಗೆದ್ದು ಬೀಗಿದೆ.
25
ದಿನದತ್ತ
'777
ಚಾರ್ಲಿ'
ರನ್ನಿಂಗ್:
19
ದಿನಗಳಲ್ಲಿ
ರಕ್ಷಿತ್
ಶೆಟ್ಟಿ
ಸಿನಿಮಾ
ದೋಚಿದ್ದೆಷ್ಟು?
ಆದರೆ '777 ಚಾರ್ಲಿ' ಚಿತ್ರಕ್ಕೂ ಮೊದಲು ಬಂದ ಸಿನಿಮಾ 'ಅವನೇ ಶ್ರೀಮನ್ನಾರಾಯಣ'. ಆದರೆ ರಕ್ಷಿತ್ ಶೆಟ್ಟಿ ನಿರೀಕ್ಷೆಯನ್ನು ಮುಟ್ಟಿರಲಿಲ್ಲ ಪ್ರೇಕ್ಷಕರ ನಿರೀಕ್ಷೆಯನ್ನು ಕೂಡ ಹೊಸಿ ಮಾಡಿತ್ತು. ಈ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ಈ ಗೆಲುವಿಗೆ ಆ ಪಾಠಗಳೇ ಕಾರಣ ಎಂದಿದ್ದಾರೆ.
ಅರ್ಧ
ವರ್ಷ
ಮುಗಿದೇ
ಹೋಯ್ತು:
'ಜೇಮ್ಸ್',
'ಕೆಜಿಎಫ್
2',
'777
ಚಾರ್ಲಿ'
ಜೊತೆ
ಗೆದ್ದೋರು
ಯಾರು?!

ಜನಮನಗೆದ್ದ '777 ಚಾರ್ಲಿ' ಚಾರ್ಲಿ!
2022 ರಲ್ಲಿ ತೆರೆಕಂಡು ಹಿಟ್ ಲಿಸ್ಟ್ ಸೇರಿದ ಸಿನಿಮಾಗಳ ಸಾಲಿಗೆ '777 ಚಾರ್ಲಿ' ಸಿನಿಮಾ ಕೂಡ ಸೇರಿಕೊಂಡಿದೆ. ಈ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಸಿನಿಮಾ ಪ್ಯಾನ್ ಇಂಡಿಯಾ ಟೈಟಲ್ ಅಡಿಯಲ್ಲಿ ರಿಲೀಸ್ ಆಗಿದೆ. ಹಲವು ಭಾಷೆಗಳಲ್ಲಿ ತೆರೆಕಂಡ ಚಾರ್ಲಿಗೆ ಜನ ಮನ್ನಣೆ ಸಿಕ್ಕಿದೆ. ಜನಮನ ಗೆದ್ದ '777 ಚಾರ್ಲಿ' ಬಾಕ್ಸಾಫೀಸ್ನಲ್ಲೂ ಕೂಡ ಕಮಾಲ್ ಮಾಡಿದೆ. 75 ಕೋಟಿಗೂ ರೂ. ಅಧಿಕ ಮೊತ್ತವನ್ನು ಕಲೆ ಹಾಕಿದ ಚಾರ್ಲಿಯ ಗಳಿಕೆ ಮುಂದುವರೆದಿದೆ.

ಮುಗ್ಗರಿಸಿದ 'ಅವನೇ ಶ್ರೀಮನ್ನಾರಾಯಣ'!
ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಭಾರೀ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿತ್ತು. ಅಂತೆಯೇ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಕೂಡ ಇತ್ತು. ಹಲವು ದಿನಗಳ ಕಾಲ ಹಲವು ದೊಡ್ಡ ಸೆಟ್ಗಳಲ್ಲಿ ಚಿತ್ರೀಕರಿಸಲಾದ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಬಳಿಕ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಬಾಕ್ಸಾಫೀಸ್ನಲ್ಲಿ ಸಿನಿಮಾ ಅಂದುಕೊಂಡ ಮಟ್ಟಿಗೆ ಯಶಸ್ಸು ಸಾಧಿಸಲಿಲ್ಲ.

ಹಿಂದಿನ ಸಿನಿಮಾದ ಪಾಠವೇ ಚಾರ್ಲಿ ಗೆಲುವು!
ಇನ್ನು ಚಾರ್ಲಿ ಯಶಸ್ಸಿನ ಬಗ್ಗೆ ಇತ್ತೀಚೆಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, 'ಅವನೇ ಶ್ರೀಮನ್ನಾರಾಯಣ' ನೆನಪಿಸಿಕೊಂಡಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದಿಂದ ಕಲಿತ ಪಾಠ ಇಂದು ಚಾರ್ಲಿ ಆಗಲು ಸಾಧ್ಯವಾಗಿದೆ. ಆ ಚಿತ್ರದ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿ ಮಾಡಿಲ್ಲ. ಆ ಸಿನಿಮಾ ಸೋಲು ಎಂದು ಒಪ್ಪಿಕೊಳ್ಳುವುದಿಲ್ಲ. ಅದೊಂದು ದೊಡ್ಡ ಪಾಠ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಚಾರ್ಲಿ ಗೆಲುವಿಗೆ ಆ ತಪ್ಪುಗಳೇ ಕಾರಣ!
ಇನ್ನು ಮಾತು ಮುಂದುವರೆಸಿದ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಸೋತಿದೆ ಎಂದು ಹೇಳುವುದಿಲ್ಲ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಮಾಡುವಾಗ ವ್ಯವಹಾರಿಕವಾಗಿ ಎಡವಿದ್ದೇವೆ. ಸರಿಯಾದ ವ್ಯಾಪಾರ ಮಾಡದೆ ಇದ್ದದ್ದು ಸಿನಿಮಾದ ಮೇಲೆ ಪರಿಣಾಮ ಬೀರಿತ್ತು. ಆದರೆ ಅದೇ ತಪ್ಪುಗಳನ್ನು ಈಗ ಚಾರ್ಲಿ ವಿಚಾರದಲ್ಲಿ ಮಾಡಿದ್ಧಾರೆ. ಈ ಸಿನಿಮಾ ಕೂಡ ಈ ಮಟ್ಟಿಗೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅದೇನೇ ಇದ್ದರೂ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಯಶಸ್ಸು ಕಂಡಿದೆ. ಇನ್ನೂ ಅವರ ಮುಂದಿನ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.