For Quick Alerts
  ALLOW NOTIFICATIONS  
  For Daily Alerts

  ಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇ ಶ್ರೀಮನ್ನಾರಾಯಣ'

  |

  ಕನ್ನಡ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಹಾಗೂ ಹಿಂದಿ ಸಿನಿಮಾ 'ದಬಾಂಗ್ 3' ಈ ಎರಡು ಸಿನಿಮಾಗಳು ಒಂದೇ ತಿಂಗಳು ಬಿಡುಗಡೆಯಾಗುತ್ತಿವೆ. ಮೊದಲು 'ದಬಾಂಗ್ 3' ಸಿನಿಮಾ ಬಂದರೆ, ನಂತರ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಆಗುತ್ತಿದೆ.

  ಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರುಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರು

  'ದಬಾಂಗ್ 3' ಚಿತ್ರಕ್ಕೆ ಹೋಲಿಕೆ ಮಾಡಿದರೆ, 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ಹೆಚ್ಚು ಜನ ನೋಡಲು ಬಯಸುತ್ತಿದ್ದಾರೆ. ಇದು ಬುಕ್ ಮೈ ಶೋ ದಲ್ಲಿಯೂ ತಿಳಿಯುತ್ತಿದೆ. 'ದಬಾಂಗ್ 3' ಸಿನಿಮಾಗಿಂತ ಹೆಚ್ಚು ಜನರು 'ಅವನೇ ಶ್ರೀಮನ್ನಾರಾಯಣ'ಕ್ಕೆ ವೋಟ್ ಮಾಡಿದ್ದಾರೆ.

  ಬುಕ್ ಮೈ ಶೋ ದಲ್ಲಿ 57 ಸಾವಿರಕ್ಕೂ ಹೆಚ್ಚು ಮಂದಿ INTERESTED ಎಂದು 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಕ್ಲಿಕ್ ಮಾಡಿದ್ದಾರೆ. 'ದಬಾಂಗ್ 3' ಸಿನಿಮಾಗೆ ಕೇವಲ 30 ಸಾವಿರ ಕ್ಲಿಕ್ ಸಿಕ್ಕಿದೆ. ಈ ಎರಡು ಸಿನಿಮಾಗಳು ಬಹು ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ದೊಡ್ಡ ನಿರೀಕ್ಷೆ ಹುಟ್ಟುಹಾಕಿವೆ. ಈ ವಿಷಯದಲ್ಲಿ 'ದಬಾಂಗ್ 3' ಸಿನಿಮಾವನ್ನು 'ಅವನೇ ಶ್ರೀಮನ್ನಾರಾಯಣ' ಚಿತ್ರ ಮೀರಿಸಿದೆ.

  ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್

  'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಮೂಲಕ ಮೂರು ವರ್ಷದ ನಂತರ ನಟ ರಕ್ಷಿತ್ ಶೆಟ್ಟಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಚಿನ್ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಶಾನ್ವಿ ಶ್ರೀವಾತ್ಸವ್ ಸಿನಿಮಾದ ನಾಯಕಿಯಾಗಿದ್ದಾರೆ.

  avane srimannarayana more votes than dabangg 3 in book my show

  'ದಬಾಂಗ್ 3' ಸಲ್ಮಾನ್ ಖಾನ್ ನಟನೆಯ ಸಿನಿಮಾ. ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪ್ರಭುದೇವ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿದೆ.

  English summary
  Avane Srimannarayana more votes than Dabangg 3 in book my show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X