For Quick Alerts
  ALLOW NOTIFICATIONS  
  For Daily Alerts

  'ಶ್ರೀಮನ್ನಾರಾಯಣ' ಟ್ರೈಲರ್ ನಲ್ಲಿ ಹಾಲಿವುಡ್ ಚಿತ್ರದ 'ನೆರಳು': ಇದು ಕಾಪಿನಾ? ಸ್ಫೂರ್ತಿನಾ?

  By ಫಿಲ್ಮಿ ಬೀಟ್ ಡೆಸ್ಕ್
  |
  ಅವನೆ ಶ್ರೀಮನ್ನಾರಾಯಣ ಚಿತ್ರಕ್ಕೆ ಹಾಲಿವುಡ್ ಸಿನಿಮಾ ಕಾಪಿನಾ? ಸ್ಪೂರ್ತಿನಾ? | FILMIBEAT KANNADA

  ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದೆ ಸದ್ದು. ಸದ್ಯ ರಿಲೀಸ್ ಆಗಿರುವ ಅವನೇ ಶ್ರೀಮನ್ನಾರಾಯಣ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಈಗಾಗಲೆ ಐದು ಭಾಷೆಯ ಟ್ರೈಲರ್ ರಿಲೀಸ್ ಆಗಿದೆ. 'ಕೆಜಿಎಫ್' ಚಿತ್ರದ ನಂತರ ಕನ್ನಡದ ಮತ್ತೊಂದು ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ.

  'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?

  ಇತ್ತೀಚಿಗಷ್ಟೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಟ್ರೈಲರ್ ರಿಲೀಸ್ ಆಗುತ್ತಿದೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಅನೇಕರು ಹಾಲಿವುಡ್ ಚಿತ್ರದ ನೆನಪಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಶ್ರೀಮನ್ನಾರಾಯಣ ಸಿನಿಮಾ ಹಾಲಿವುಡ್ ಸಿನಿಮಾ ಕಾಪಿನಾ ಅಥವಾ ಸ್ಫರ್ತಿನಾ ಎನ್ನುವ ಅನುಮಾನ ಕಾಡುತ್ತಿದೆ.

  'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಚಿತ್ರವನ್ನು ಹೋಲುತ್ತಿದೆ

  'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಚಿತ್ರವನ್ನು ಹೋಲುತ್ತಿದೆ

  ಶ್ರೀಮನ್ನಾರಾಯಣ ಟ್ರೈಲರ್ ಹಾಲಿವುಡ್ ನ 'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಚಿತ್ರದ ನೆನಪು ತರುತ್ತಿದೆ ಎಂದು ಹೇಳಲಾಗುತ್ತಿದೆ. ಶ್ರೀಮನ್ನಾರಾಯಣನ ಅನೇಕ ದೃಶ್ಯಗಳು 'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಚಿತ್ರವನ್ನು ಹೋಲುತ್ತಿದೆ. 'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಕಳೆದ ವರ್ಷ ಆಗಸ್ಟ್ ನಲ್ಲಿ ತೆರೆಗೆ ಬಂದಿದೆ.

  'ಶ್ರೀಮನ್ನಾರಾಯಣ' ಟ್ರೈಲರ್ ರಿಲೀಸ್ ವೇಳೆ ರಕ್ಷಿತ್ ಕಣ್ಣೀರಿಟ್ಟಿದ್ದೇಕೆ?'ಶ್ರೀಮನ್ನಾರಾಯಣ' ಟ್ರೈಲರ್ ರಿಲೀಸ್ ವೇಳೆ ರಕ್ಷಿತ್ ಕಣ್ಣೀರಿಟ್ಟಿದ್ದೇಕೆ?

  ಕಾಸ್ಟ್ಯೂಮ್, ಲೊಕೇಶನ್, ನಾಯಕನ ಮ್ಯಾನರಿಸಂ

  ಕಾಸ್ಟ್ಯೂಮ್, ಲೊಕೇಶನ್, ನಾಯಕನ ಮ್ಯಾನರಿಸಂ

  ಕಾಸ್ಟ್ಯೂಮ್, ಲೊಕೇಶನ್, ನಾಯಕನ ಮ್ಯಾನರಿಸಂ, ಕೆಲವು ದೃಶ್ಯಗಳು, ಕೌವ್ ಬಾಯ್ ಪಾತ್ರ ಪ್ರತಿಯೊಂದು ಸಹ 'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಚಿತ್ರದ ನೆನಪನ್ನು ತರಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ರಕ್ಷಿತ್ ತಂಡ ಹಾಲಿವುಡ್ 'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಸಿನಿಮಾದಿಂದ ಸ್ಫೂರ್ತಿ ಪಡೆದು ಮಾಡಿದ್ದಾರಾ ಅಥವಾ ಕಾಪಿ ಮಾಡಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಈ ಬಗ್ಗೆ ಅವರೆ ಸ್ಪಷ್ಟಪಡಿಸಬೇಕಿದೆ.

  ಅವಾರ್ಡ್ ಗಳನ್ನು ಗೆದ್ದ ಸಿನಿಮಾ

  ಅವಾರ್ಡ್ ಗಳನ್ನು ಗೆದ್ದ ಸಿನಿಮಾ

  ನಂತರ ನವೆಂಬರ್ ನಲ್ಲಿ ಈ ಸಿನಿಮಾವನ್ನು ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಮಾಡಲಾಗಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ಟಿಮ್ ಬ್ಲೇಕ್ ನೆಲ್ಸನ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸಾಕಷ್ಟು ಅವಾರ್ಡ್ ಗಳನ್ನು ಮುಡಿಗೇರಿಸಿಕೊಂಡಿದೆ. ಹಾಲಿವುಡ್ ನಲ್ಲಿ ಸದ್ದು ಮಾಡಿದ 'ದಿ ಬಲ್ಲಾಡ್ ಆಫ್ ಬಸ್ಟರ್ ಸ್ಕ್ರಗ್ಸ್' ಸಿನಿಮಾ, ಅವನೇ ಶ್ರೀಮನ್ನಾರಾಯಣನಿಗೆ ಸ್ಫೂರ್ತಿನಾ ಎನ್ನುವುದು ಗೊತ್ತಾಗಬೇಕಿದೆ.

  'ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ': ರಿಷಬ್ ಶೆಟ್ಟಿ'ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ': ರಿಷಬ್ ಶೆಟ್ಟಿ

  ಐದು ಭಾಷೆಯಲ್ಲಿ ಬರ್ತಿದೆ ಶ್ರೀಮನ್ನಾರಾಯಣ

  ಐದು ಭಾಷೆಯಲ್ಲಿ ಬರ್ತಿದೆ ಶ್ರೀಮನ್ನಾರಾಯಣ

  ಆದೇನೆ ಇದ್ದರು ಟ್ರೈಲರ್ ಗೆ ಸದ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ವರ್ಷದ ಶ್ರಮ ಈ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಸಿನಿಮಾ ಮುಂದಿನ ತಿಂಗಳು ಡಿಸೆಂಬರ್ 27ಕ್ಕೆ ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಬೇರೆ ಬೇರೆ ಭಾಷೆಯಲ್ಲಿ ಪ್ರಮೋಶನ್ ಮಾಡಲು ಚಿತ್ರತಂಡ ಸಿದ್ಧವಾಗಿದೆ.

  English summary
  Rakshith Shetty starrer Avane Srimannarayana movie may Inspired by hollywood film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X