ಸಮಯ ಪ್ರಜ್ಞೆ ಇಲ್ವಾ? 'ಶ್ರೀಮನ್ನಾರಾಯಣ' ತಂಡದ ಮೇಲೆ ಪ್ರೇಕ್ಷಕರ ಬೇಸರ
6 ಗಂಟೆ, 6.30, 7 ಗಂಟೆ 7.30, ಕೊನೆಗೆ 8 ಗಂಟೆನೇ ಆಯ್ತು.... 'ಅವನೇ ಶ್ರೀಮನ್ನಾರಾಯಣ' ಟೀಸರ್ ಬರಲೇ ಇಲ್ಲ.
ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟೀಸರ್ ರಿಲೀಸ್ ಪ್ಲಾನ್ ಆಗಿತ್ತು. ಅದೇ ರೀತಿ ಸಂಜೆ 6 ಗಂಟೆಗೆ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ, ಟೀಸರ್ ತಡ ಆಗುತ್ತಲೇ ಇದೆ.

ಹೇಳಿದ ಸಮಯಕ್ಕೆ ಟೀಸರ್ ಬರದೆ ಇದ್ದದ್ದು ಕೆಲವು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ. ನಿಮಗೆ ಸಮಯ ಪ್ರಜ್ಞೆ ಇಲ್ವಾ? ಎಂದು ಅಭಿಮಾನಿಗಳು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ರನ್ನು ಕೇಳುತ್ತಿದ್ದಾರೆ.
ಪುಷ್ಕರ್ ಟ್ವಿಟ್ಟರ್ ಖಾತೆಯ ಮೂಲಕ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಸಚಿನ್ ಗೆ ಟೀಸರ್ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ನಿರ್ದೇಶಕರು ಸಿಲ್ಕ್ ಬೋರ್ಡ್ ಟ್ಯಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಉತ್ತರ ನೀಡಿದ್ದಾರೆ.
ಕೆಲವು ಬಾರಿ ಈ ರೀತಿಯ ಸಮಸ್ಯೆ ಆಗುವುದು ಸಾಮಾನ್ಯ. ಆ ರೀತಿ ಯಾವುದಾದರು ತಾಂತ್ರಿಕ ತೊಂದರೆ ಇದ್ದರೂ ಅದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರೆ ಸಮಾಧಾನ ಆಗುತ್ತಿತ್ತು. ಆದರೆ, ಯಾವುದೇ ಕಾರಣ ನೀಡದ ಚಿತ್ರತಂಡದ ಮೇಲೆ ಕೆಲವರು ಬೇಸರ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











