ಒಂದು ಮಿಲಿಯನ್ ಗಡಿ ದಾಟಿದ 'ಅವನೇ ಶ್ರೀಮನ್ನಾರಾಯಣ' ಟೀಸರ್

'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟೀಸರ್ ಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಟೀಸರ್ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

ಗುರುವಾರ ರಾತ್ರಿ ಬಿಡುಗಡೆಯಾದ 'ಅವನೇ ಶ್ರೀಮನ್ನಾರಾಯಣ' ಟೀಸರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಆದ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಟೀಸರ್ ಇನ್ನಷ್ಟು ಜನರಿಗೆ ತಲುಪಿದೆ. ಸದ್ಯ, ಈ ಟೀಸರ್ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ಅಲ್ಲದೆ ನಿನ್ನೆ (ಶುಕ್ರವಾರ) ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಇತ್ತು.

ಟೀಸರ್ ಕ್ವಾಲಿಟಿ ಸಿನಿಮಾದ ಮೇಲಿನ ನಂಬಿಕೆ ಹೆಚ್ಚು ಮಾಡಿದೆ. ಕನ್ನಡದ ಮತ್ತೊಂದು ಮೆಗಾ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಈ ಸಿನಿಮಾದ ಟೀಸರ್ ನಲ್ಲಿ ಕಾಣುತ್ತಿವೆ. ಟೀಸರ್ ನೋಡಿದ ಅನೇಕರು ಇದು ನೆಕ್ಸ್ಟ್ ಲೆವೆಲ್ ಸಿನಿಮಾ ಎಂದು ಹೇಳುತ್ತಿದ್ದಾರೆ.

Avane srimannarayana movie teaser got 1 million views on youtube

ಕರಮ್ ಚಾವ್ಲಾ ಕ್ಯಾಮರಾ ವರ್ಕ್ ಹಾಗೂ ಅಜನೀಶ್ ಲೋಕನಾಥ್ ಸಂಗೀತಕ್ಕೆ ವಿಶೇಷ ಮೆಚ್ಚುಗೆ ಸಿಗುತ್ತಿದೆ. ಮೊದಲ ಬಾರಿಗೆ ಸಿಂಪಲ್ ಸ್ಟಾರ್ ಪೊಲೀಸ್ ಆಗಿದ್ದಾರೆ. ಅವರ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟೀಸರ್ ಮೂಲಕ ಆ ಪಾತ್ರವನ್ನು ಪರಿಚಯ ಮಾಡಿದ್ದಾರೆ.

''ರಾಕ್ಷಸನ ಎದುರಿಸಬೇಕಾದರೆ, ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾಗ ಬೇಕು.'' ಎನ್ನುವ ಡೈಲಾಗ್ ರೋಮಾಂಚಕವಾಗಿವೆ. ಸಚಿನ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ಮತ್ತೆ ರಕ್ಷಿತ್ ಶೆಟ್ಟಿ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೆಚ್ ಕೆ ಪ್ರಕಾಶ್ ಗೌಡ ಬಂಡವಾಳ ಹಾಕಿದ್ದಾರೆ. ಶಾನ್ವಿ ಶ್ರೀವತ್ಸವ್ ಚಿತ್ರದ ನಾಯಕಿ. ಇನ್ನು ಟೀಸರ್ ನಲ್ಲಿ ಸಿನಿಮಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.ಎರಡು ವರ್ಷದ ಬಳಿಕ ರಕ್ಷಿತ್ ಸಿನಿಮಾ ಬಿಡುಗಡೆಯಾಗುತ್ತಿದೆ.

More from Filmibeat

English summary
Kannada actor Rakshit shetty and Shanvi Srivastava's 'Avane srimannarayana' movie teaser got 1 million views on youtube. The movie is directing by Sachin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X