ಒಂದು ಮಿಲಿಯನ್ ಹಿಟ್ಸ್, ನಂ 1 ಟ್ರೆಂಡ್ - ಎಲ್ಲ ನಾರಾಯಣನ ಕೃಪೆ
'ಅವನೇ ಶ್ರೀಮನ್ನಾರಾಯಣ' ಸಿನಿಮಾ ಟೀಸರ್ ಈಗ ಸೂಪರ್ ಹಿಟ್ ಆಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆಗಿದ್ದ ಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಯೂ ಟ್ಯೂಬ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ಟೀಸರ್ ಬಿಡುಗಡೆಯಾದ ದಿನದಿಂದ ಅಂದರೆ ಸತತ ನಾಲ್ಕು ದಿನಗಳ ಕಾಲ ನಂ 1 ಟ್ರೆಂಡಿಂಗ್ ನಲ್ಲಿದೆ. ಎಲ್ಲ ಕಡೆ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿರುವ ಈ ಟೀಸರ್ ಅನ್ನು ಒಂದು ಮಿಲಿಯನ್ ಜನರು ನೋಡಿದ್ದಾರೆ. ಒಂದು ಮಿಲಿಯನ್ ಹಿಟ್ಸ್ ಪಡೆದಿರುವ ಟೀಸರ್ ಗೆ ಒಳ್ಳೆ ಒಳ್ಳೆಯ ಕಮೆಂಟ್ ಗಳು ಬಂದಿವೆ.
ಅಂದಹಾಗೆ, 'ಅವನೇ ಶ್ರೀಮನ್ನಾರಾಯಣ' ಟೀಸರ್ ತುಂಬ ಹೊಸತನದಿಂದ ಕೂಡಿದೆ. ಅದರ ಮೇಕಿಂಗ್ ಸ್ಟೈಲ್ ಎಲ್ಲರಿಗೆ ಇಷ್ಟ ಆಗಿದೆ. ಸಚಿನ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. 'ಕಿರಿಕ್ ಪಾರ್ಟಿ' ನಂತರ ಮತ್ತೆ ಅಜನೀಶ್ ಲೋಕನಾಥ್ ರಕ್ಷಿತ್ ಶೆಟ್ಟಿಗೆ ಮ್ಯೂಸಿಕ್ ಮಾಡುತ್ತಿದ್ದಾರೆ. ರಕ್ಷಿತ್ ಗೆ ಶಾನ್ವಿ ಶ್ರೀವತ್ಸವ್ ಜೋಡಿ ಆಗಿದ್ದಾರೆ. ಇನ್ನು ಸಿನಿಮಾ ಇದೇ ಡಿಸೆಂಬರ್ ಗೆ ಬರುವ ಸಾಧ್ಯತೆ ಇದೆ.

'ಅವನೇಶ್ರೀನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಐದು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಭ್ರಷ್ಟ ಪೊಲೀಸ್ ಪಾತ್ರವನ್ನು ರಕ್ಷಿತ್ ಇಲ್ಲಿ ಪ್ಲೇ ಮಾಡುತ್ತಿದ್ದಾರೆ.


Click it and Unblock the Notifications