'ಕೆ ಜಿ ಎಫ್' ರೀತಿಯೇ 5 ಭಾಷೆಗಳಲ್ಲಿ ಮತ್ತೊಂದು ಕನ್ನಡ ಚಿತ್ರ ಬಿಡುಗಡೆ
Recommended Video

ಕನ್ನಡ ಸಿನಿಮಾಗಳ ಮಾರುಕಟ್ಟೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದರ ನಂತರ ಒಂದರಂತೆ ದೊಡ್ಡ ದೊಡ್ಡ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಬರುತ್ತಿದೆ. ಬೇರೆ ಭಾಷೆಗೆ ಪೈಪೋಟಿ ನೀಡುವ ಮಟ್ಟಿಗೆ ಇಂದು ಕ್ವಾಲಿಟಿ ಸಿನಿಮಾಗಳು ಕನ್ನಡ ಚಿತ್ರರಂಗ ಕಾಲಿಡುತ್ತಿದೆ.
ಯಶ್ ಅಭಿನಯದ 'ಕೆ ಜಿ ಎಫ್' ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದ್ದು, ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರಗಳಿಗೂ ಮಾರ್ಕೆಟ್ ಇದೆ ಎನ್ನುವುದನ್ನು ಸಾಬೀತು ಮಾಡಲು ಹೊರಟಿದೆ. ಈಗ ಅದರ ಹಿಂದೆಯೇ ಮತ್ತೊಂದು ಚಿತ್ರತಂಡ ತಮ್ಮ ಸಿನಿಮಾವನ್ನು ದೊಡ್ಡ ರೀತಿಯಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ.
ಹಾಗದ್ರೆ, 'ಕೆ ಜಿ ಎಫ್' ನಂತರ ಅದ್ಯಾವ ಸಿನಿಮಾ ದೇಶದ್ಯಾಂತ ಸದ್ದು ಮಾಡಲು ಹೊರಟಿದೆ ಎಂಬುದು ಮುಂದಿದೆ ಓದಿ...

ಐದು ಭಾಷೆಗಳಲ್ಲಿ 'ಅವನೇ ಶ್ರೀಮನ್ನಾರಾಯಣ'
ನಟ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಯಣ' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಅನ್ನು ಚಿತ್ರತಂಡ ಮಾಡಿಕೊಂಡಿದೆ. 'ಕೆ ಜಿ ಎಫ್' ನಂತರ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.

ಎಲ್ಲ ಭಾಷೆಗಳಲ್ಲಿ ಟ್ರೇಲರ್
'ಅವನೇ ಶ್ರೀಮನ್ನಾರಯಣ' ಸಿನಿಮಾ ಯಾವ ಯಾವ ಭಾಷೆಗಳಲ್ಲಿ ರಿಲೀಸ್ ಆಗುತಿದೆಯೋ ಆ ಎಲ್ಲ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗುತ್ತಿದೆಯಂತೆ. ಇದೊಂದು ಯೂನಿವರ್ಸಲ್ ವಿಷಯ ಹೊತ್ತ ಸಿನಿಮಾವಾಗಿದ್ದು, ಇದೇ ಕಾರಣದಿಂದ ಬೇರೆ ಭಾಷೆಗಳಲ್ಲಿಯೂ ರಿಲೀಸ್ ಮಾಡಲು ತಯಾರಿ ನಡೆಸಲಾಗುತ್ತಿದೆಯಂತೆ.

ಮುಂದಿನ ವರ್ಷ ತೆರೆಗೆ
ಈ ವರ್ಷ ಸಿನಿಮಾ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಎಲ್ಲರಿಗೆ ಇತ್ತು. ಆದರೆ ಸಿನಿಮಾ ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿಗೆ ಪೋಸ್ಟ್ ಪೋನ್ ಆಗಿದೆ. ಸದ್ಯ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ ಸಿನಿಮಾದ ಅನೇಕ ಕೆಲಸಗಳು ಬಾಕಿ ಇವೆಯಂತೆ. ರಕ್ಷಿತ್ ಕೆರಿಯರ್ ನಲ್ಲಿ ಮಹತ್ವದ ಸಿನಿಮಾ ಇದಾಗಿದೆಯಂತೆ.

ರಕ್ಷಿತ್ ಶೆಟ್ಟಿಗೆ ಜೋಡಿಯಾದ ಶಾನ್ವಿ ಶ್ರೀವಾಸ್ತವ
ರಕ್ಷಿತ್ ಶೆಟ್ಟಿಗೆ ಇಲ್ಲಿ ಶಾನ್ವಿ ಶ್ರೀವಾಸ್ತವ ಜೋಡಿಯಾಗಿದ್ದಾರೆ. ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನ್, ಕೆ ಎಂ ಪ್ರಕಾಶ್ ಹಾಗೂ ರಕ್ಷಿತ್ ನಿರ್ಮಾಣ ಮಾಡುತ್ತಿದ್ದಾರೆ. ನವ ನಿರ್ದೇಶಕ ಸಚಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಟೀಸರ್ ನೋಡಿಯೇ ವಿಭಿನ್ನ ರೀತಿಯ ಸಿನಿಮಾ ಎನ್ನುವುದನ್ನು ಪ್ರೇಕ್ಷಕರು ನಿರ್ಧರಿಸಿದ್ದಾರೆ.


Click it and Unblock the Notifications











