ಆಗಸ್ಟ್ ಗೆ 'ಅವನೇ ಶ್ರೀಮನ್ನಾರಾಯಣ' ಬರೋದು ಪಕ್ಕಾ
Recommended Video

ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಆಗ ಬಿಡುಗಡೆಯಾಗುತ್ತೆ, ಈಗ ಬಿಡುಗಡೆಯಾಗುತ್ತೆ ಎಂಬ ಸುದ್ದಿ ಬರ್ತಾನೆ ಇದೆ. ಆದರೆ, ಇದುವರೆಗೆ ಸಿನಿಮಾದ ಬಿಡುಗಡೆಯ ದಿನಾಂಕ ಅಂತಿಮ ಆಗಿರಲಿಲ್ಲ. ಆದರೆ, ಇದೀಗ ಈ ಚಿತ್ರದ ರಿಲೀಸ್ ಪ್ಲಾನ್ ತಿಳಿಸಲಾಗಿದೆ.
'ಅವನೇ ಶ್ರೀಮನ್ನಾರಾಯಣ' ಸಿನಿಮಾ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿಯಂತೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 'ಅವನೇಶ್ರೀಮನ್ನಾರಾಯಣ' ಮಾತನಾಡಲಿದ್ದಾನೆ.

'ಕಿರಿಕ್ ಪಾರ್ಟಿ' ಸಿನಿಮಾ ಬಂದು ಮೂರು ವರ್ಷಗಳು ಕಳೆದಿವೆ. ಆದರೆ, ರಕ್ಷಿತ್ ನಟನೆಯ ಯಾವ ಸಿನಿಮಾ ಸಹ ಬಿಡುಗಡೆಯಾಗಿಲ್ಲ. ಆದರೆ, ಆಗಸ್ಟ್ ವರೆಗೆ ಕಾದರೆ ಅಭಿಮಾನಿಗಳು 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ನೋಡಬಹುದಾಗಿದೆ.
'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ. ನಟಿ ಶಾನ್ವಿ ಶ್ರೀವತ್ಸವ್ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಜೊತೆಗೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications











