For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ' ಅಂತಿದ್ದಾರೆ ಧನುಷ್, ನಾನಿ, ನಿವಿನ್ ಪೌಲಿ

  |
  Avane Srimannarayana : Dhanush , Nani and Nivin Pauly joins ASN team | FILMIBEAT KANNADA

  ಸ್ಯಾಂಡಲ್ ವುಡ್ ಮಾತ್ರವಲ್ಲದೆ ದೇಶದಾದ್ಯಂತ ಸದ್ದು ಮಾಡುತ್ತಿರುವ 'ಅವನೇ ಶ್ರೀಮನ್ನಾರಾಯಣ'ನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ತಿಂಗಳು 'ಅವನೇ ಶ್ರೀಮನ್ನಾರಾಯಣ' ದರ್ಶನ ನೀಡುತ್ತಿದ್ದಾನೆ. ಅದಕ್ಕು ಮುಂಚಿತವಾಗಿ ಸಿನಿಮಾ ಹೇಗಿರಲಿದೆ ಎನ್ನುವುದಕ್ಕೆ ಮತ್ತೊಂದು ಟ್ರೈಲರ್ ರಿಲೀಸ್ ಮಾಡುತ್ತಿದೆ ಚಿತ್ರತಂಡ.

  ಈಗಾಗಲೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಎರಡನೆ ಟ್ರೈಲರ್ ರಿಲೀಸ್ ಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನವೆಂಬರ್ 28ಕ್ಕೆ ಚಿತ್ರದ ಬಹುನಿರೀಕ್ಷೆಯ ಟ್ರೈಲರ್ ತೆರೆಗೆ ಬರುತ್ತಿದೆ. ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ವಿಶೇಷ ಅಂದರೆ ಚಿತ್ರದ ಟ್ರೈಲರ್ ಅನ್ನು ಬೇರೆ ಬೇರೆ ಭಾಷೆ ಸ್ಟಾರ್ ನಟರು ರಿಲೀಸ್ ಮಾಡುತ್ತಿದ್ದಾರೆ.

  ಬಿಡುಗಡೆಗೆ ಮೊದಲೇ ಅಕ್ಷಯ್ ಕುಮಾರ್ ಸಿನಿಮಾ ಹಿಂದೆ ಹಾಕಿದ ರಕ್ಷಿತ್ ಶೆಟ್ಟಿಬಿಡುಗಡೆಗೆ ಮೊದಲೇ ಅಕ್ಷಯ್ ಕುಮಾರ್ ಸಿನಿಮಾ ಹಿಂದೆ ಹಾಕಿದ ರಕ್ಷಿತ್ ಶೆಟ್ಟಿ

  ತಮಿಳು ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ಧನುಷ್

  ತಮಿಳು ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ಧನುಷ್

  'ಅವನೇ ಶ್ರೀಮನ್ನಾರಾಯಣ' ಚಿತ್ರದ ತಮಿಳು ಟ್ರೈಲರ್ ಅನ್ನು ಕಾಲಿವುಡ್ ಸ್ಟಾರ್ ನಟ ಧನುಷ್ ರಿಲೀಸ್ ಮಾಡುತ್ತಿದ್ದಾರಂತೆ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಅದ್ಭುತ ನಟ ಧನುಷ್. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೈಲರ್ ರಿಲೀಸ್ ಮಾಡಲು ಧನುಷ್ ಅವರೇ ಉತ್ತಮ ಎಂದು ಚಿತ್ರತಂಡ ಅವರ ಬಳಿ ತಮಿಳು ಟ್ರೈಲರ್ ಅನ್ನು ರಿಲೀಸ್ ಮಾಡಿಸುತ್ತಿದೆ. ಟ್ರೈಲರ್ ನೋಡಿ ಮೆಚ್ಚಿಕೊಂಡಿರುವ ಧನುಷ್ ಸಂತಸದಿಂದ ಚಿತ್ರದ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ.

  ತೆಲುಗು ಟ್ರೈಲರ್ ರಿಲೀಸ್ ಮಾಡಲಿದ್ದಾರೆ ನಾನಿ

  ತೆಲುಗು ಟ್ರೈಲರ್ ರಿಲೀಸ್ ಮಾಡಲಿದ್ದಾರೆ ನಾನಿ

  ತೆಲುಗಿನ ಖ್ಯಾತ ನಟ ನಾನಿ ಕೂಡ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಸಾಥ್ ನೀಡಿದ್ದಾರೆ. ನಾನಿ ಎಲ್ಲಾ ವರ್ಷದ ಪ್ರೇಕ್ಷಕರ ಮೆಚ್ಚಿನ ನಟ. ಮಕ್ಕಳಿಂದ ಹಿಡಿದು ವಯಸ್ಸಾದವರು ಇಷ್ಟಪಡುವ ನಟ. ಹಾಗಾಗಿ ನಾನಿ ಟ್ರೈಲರ್ ರಿಲೀಸ್ ಮಾಡಿದ್ರೆ ಎಲ್ಲಾ ವರ್ಗದ ಪ್ರೇಕ್ಷಕರಿಗೂ ರೀಚ್ ಆಗುತ್ತೆ ಎನ್ನುವ ಪ್ಲಾನ್ ಚಿತ್ರತಂಡದ್ದು. ಹಾಗಾಗಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ತೆಲುಗು ಟ್ರೈಲರ್ ಅನ್ನು ನಾನಿ ಬಳಿ ರಿಲೀಸ್ ಮಾಡಿಸುತ್ತಿದ್ದಾರಂತೆ.

  ಅಕ್ಷಯ್ ಕುಮಾರ್ ಗೆ 'ಗುಡ್ ನ್ಯೂಸ್' ಆದ್ರೆ ರಕ್ಷಿತ್ ಶೆಟ್ಟಿಗೆ ಬಿಗ್ ಚಾಲೆಂಜ್ಅಕ್ಷಯ್ ಕುಮಾರ್ ಗೆ 'ಗುಡ್ ನ್ಯೂಸ್' ಆದ್ರೆ ರಕ್ಷಿತ್ ಶೆಟ್ಟಿಗೆ ಬಿಗ್ ಚಾಲೆಂಜ್

  ನಿವಿನ್ ಪೌಲಿ ಮಲಯಾಳಂ ಟ್ರೈಲರ್

  ನಿವಿನ್ ಪೌಲಿ ಮಲಯಾಳಂ ಟ್ರೈಲರ್

  ರಕ್ಷಿತ್ ಶೆಟ್ಟಿ ಮತ್ತು ಮಲಯಾಳಂನ ಖ್ಯಾತ ನಟ ನಿವಿನ್ ಪೌಲಿ ಇಬ್ಬರು ಉತ್ತಮ ಸ್ನೇಹಿತರು. ರಕ್ಷಿತ್ ಶೆಟ್ಟಿ ಅಭಿನಯದ 'ಉಳಿದವರು ಕಂಡಂತೆ' ಚಿತ್ರ ನೋಡಿ ನಿವಿನ್ ಪೌಲಿ ಫಿದಾ ಆಗಿದ್ದರು. ಅಲ್ಲಿಂದ ಇಬ್ಬರು ಉತ್ತಮ ಸ್ನೇಹಿತರು. ಸದ್ಯ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೈಲರ್ ಅನ್ನು ನಿವಿನ್ ಪೌಲಿ ರಿಲೀಸ್ ಮಾಡುವ ಮೂಲಕ ಚಿತ್ರತಂಡತಂಡಕ್ಕೆ ಸಾಥ್ ನೀಡುತ್ತಿದ್ದಾರೆ.

  'ಕನ್ನಡದಲ್ಲಿ ಶ್ರೀಮನ್ನಾರಾಯಣ ಪ್ರಮೋಟ್ ಮಾಡುವ ಅಗತ್ಯವಿಲ್ಲ' ಎಂದವರಿಗೆ ರಕ್ಷಿತ್ ಹೇಳಿದ್ದೇನು?'ಕನ್ನಡದಲ್ಲಿ ಶ್ರೀಮನ್ನಾರಾಯಣ ಪ್ರಮೋಟ್ ಮಾಡುವ ಅಗತ್ಯವಿಲ್ಲ' ಎಂದವರಿಗೆ ರಕ್ಷಿತ್ ಹೇಳಿದ್ದೇನು?

  ಕನ್ನಡ ಮತ್ತು ಹಿಂದಿ ಟ್ರೈಲರ್

  ಕನ್ನಡ ಮತ್ತು ಹಿಂದಿ ಟ್ರೈಲರ್

  ಕನ್ನಡ ಮತ್ತು ಹಿಂದಿ ಟ್ರೈಲರ್ ಅನ್ನು ರಕ್ಷಿತ್ ಶೆಟ್ಟಿ ಅವರೇ ರಿಲೀಸ್ ಮಾಡುತ್ತಿದ್ದಾರೆ. ಒಟ್ಟು ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ 'ಅವನೇ ಶ್ರೀಮನ್ನಾರಾಯಣ' ಅಭಿಮಾನಿಗಳಲ್ಲಿ ನಿರೀಕ್ಷೆಯ ಮಟ್ಟವನ್ನು ದುಪ್ಪಟ್ಟು ಮಾಡುತ್ತಿದೆ. ಅಲ್ಲದೆ 'ಅವನೇ ಶ್ರೀಮನ್ನಾರಾಯಣ' ಇಡೀ ಭಾರತೀಯ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡುವುದರಲ್ಲಿ ಯಾವುದೆ ಅನುಮಾನವಿಲ್ಲ ಎನ್ನುವ ನಂಬಿಕೆ ಕನ್ನಡ ಚಿತ್ರಪ್ರೇಕ್ಷಕರಲ್ಲಿದೆ.

  English summary
  Kannada actor Rashith Shetty starrer 'Avane Srimannarayana' trailer will relased by Dhanush, Nani and Nivin Pauly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X