»   » 'ಕನ್ನಡ ಮೀಡಿಯಂ ರಾಜು' ಚಿತ್ರದ ನಟಿ-ನಿರ್ಮಾಪಕನ ವಿವಾದ ಎಲ್ಲಿಗೆ ಬಂತು!

'ಕನ್ನಡ ಮೀಡಿಯಂ ರಾಜು' ಚಿತ್ರದ ನಟಿ-ನಿರ್ಮಾಪಕನ ವಿವಾದ ಎಲ್ಲಿಗೆ ಬಂತು!

Posted By:
Subscribe to Filmibeat Kannada

'ಕನ್ನಡ ಮೀಡಿಯಂ ರಾಜು' ಚಿತ್ರದ ನಟಿ ಅವಂತಿಕಾ ಶೆಟ್ಟಿ ಮತ್ತು ನಿರ್ಮಾಪಕ ಕೆಎ ಸುರೇಶ್ ಅವರ ನಡುವಿನ ವಿವಾದಕ್ಕೆ, ಸಾರಾ ಗೋವಿಂದು ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ತಿಲಾಂಜಲಿ ಇಟ್ಟಿತ್ತು. ಆದ್ರೆ, 'ಕನ್ನಡ ಮೀಡಿಯಂ ರಾಜು' ಚಿತ್ರಕ್ಕೆ ತಡೆ ನೀಡುವಂತೆ ನಟಿ ಅವಂತಿಕಾ ಶೆಟ್ಟಿ ನ್ಯಾಯಾಲಯದಲ್ಲಿ ಹಾಕಿದ್ದ ಕೇಸ್ ನ್ನ ಹಿಂದೆ ಪಡೆದುಕೊಂಡಿರಲಿಲ್ಲ. ಹೀಗಾಗಿ, ಈ ವಿವಾದ ಇನ್ನು ಜೀವಂತವಾಗಿತ್ತು.

ಅಂತಿಮವಾಗಿ ಕೋರ್ಟ್ ನಲ್ಲಿದ್ದ ದೂರನ್ನ ನಟಿ ಅವಂತಿಕಾ ಹಿಂಪಡೆದುಕೊಂಡಿದ್ದಾರೆ. ಈ ಮೂಲಕ ಅಧಿಕೃತವಾಗಿ ಈ ವಿವಾದ ಅಂತ್ಯವಾಗಿದೆ. ಮತ್ತೊಂದೆಡೆ ನಿರ್ಮಾಪಕ ಸುರೇಶ್ ನಟಿ ಅವಂತಿಕಾಗೆ ಕೊಡಬೇಕಿದ್ದ ಬಾಕಿ ಹಣ ಕೊಡಲು ಒಪ್ಪಿದ್ದಾರೆ. ಇನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ಚಿತ್ರದ ಕಾಸ್ಟ್ಯೂಮ್ ಕೂಡಾ ಕೊಡಲು ನಟಿ ಒಪ್ಪಿದ್ದಾರೆ.

ನಟಿ ಅವಂತಿಕಾ ಮತ್ತು ಸುರೇಶ್ ವಿವಾದ ಅಂತ್ಯ.! ನಿಜವಾಗಲೂ ಆಗಿದ್ದೇನು?

Avantika Shetty withdrawn the case against KA Suresh

ಅಷ್ಟೇ ಅಲ್ಲದೇ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಅವಂತಿಕಾ ಶೆಟ್ಟಿ ತಾವು ಡಬ್ ಮಾಡುತ್ತಿಲ್ಲ. ಬೇರೆಯವರು ಡಬ್ ಮಾಡಿದರೂ ನೋ ಪ್ರಾಬ್ಲಂ ಎಂದಿದ್ದಾರೆ. ಅಲ್ಲಿಗೆ ತಿಂಗಳ ಹಿಂದಿನ 'ಕನ್ನಡ ಮೀಡಿಯಂ ರಾಜು' ವಿವಾದ ಸುಲಭವಾಗಿ ಬಗೆಹರಿದಂತಾಗಿದೆ.

'ಕನ್ನಡ ಮೀಡಿಯಂ ರಾಜು' ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದೆ. 'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಚಿತ್ರದ ನಾಯಕನಾಗಿದ್ದು, 'ಫಸ್ಟ್ Rank ರಾಜು' ಖ್ಯಾತಿಯ ನಿರ್ದೇಶಕ ನರೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

ಅವಂತಿಕಾ ಶೆಟ್ಟಿ ವಿರುದ್ಧ ವಾಣಿಜ್ಯ ಮಂಡಳಿಗೆ ಸುರೇಶ್ ದೂರು

English summary
Kannada Medium Raju Actress Avantika Shetty withdrawn the case against KA Suresh. The actress had made the allegation against the crew including producer KA Suresh of Raju Kannada Medium.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada