ಬೆಚ್ಚಿ ಬೀಳಿಸುತ್ತೆ ಶರಣ್ ವಿಚಿತ್ರ ಅವತಾರ: ಇವರು ಅವರೇನಾ ಎನ್ನುವ ಪ್ರಶ್ನೆ ಹುಟ್ಟಿದೆ!
ನಟ ಕಾಮಿಡಿ ಕಿಂಗ್ ಶರಣ್ ಅವತಾರ ಪುರುಷನಾಗಿ ಹೊಸ ಅವತಾರ ತಾಳಿದ್ದಾರೆ. 'ಅವತಾರ ಪುರುಷ' ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಹಾಗೂ ಟೀಸರ್‌ನಿಂದ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಶರಣ್ ಬರೋಬ್ಬರಿ 10 ಅವತಾರವೆತ್ತಿ ತೆರೆಮೇಲೆ ವಿಜೃಂಭಿಸಲಿದ್ದಾರೆ.
ಹಿಂದೆಂದೂ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿರದ ಶರಣ್ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದ್ದಾರೆ. ಹತ್ತು ಅವತಾರಗಳಲ್ಲಿ ನಟ ಶರಣ್ ಬೆಳ್ಳಿ ತೆರೆಯ ಮೇಲೆ ರಾರಾಜಿಸಲು ತಯಾರಾಗಿದ್ದಾರೆ. ಶರಣ್ ಚಿತ್ರಗಳು ಅಂದರೆ ಅಲ್ಲಿ ನಗುವಿಗೇನು ಕಡಿಮೆ ಇರುವುದಿಲ್ಲ. ಅದರಲ್ಲೂ ಸಿಂಪಲ್ ಸುನಿ ನಿರ್ದೇಶನ ಇದೆ ಅಂದರೆ, ಖಂಡಿತ ನಗುವಿನ ಜಾತ್ರೆಯೆ ಇರುತ್ತೆ.
ಆದರೆ ಈಗ ಚಿತ್ರದ ಫ್ಲೇವರ್ ಬದಲಾದಂತೆ ಇದೆ. ನಟ ಶರಣ್ ಹಂಚಿಕೊಂಡಿರುವ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶರಣ್ ಈ ಫೋಟೊಗೆ ಕೊಟ್ಟಿರುವ ಕ್ಯಾಪ್ಷನ್ ಎಲ್ಲೆಡೆ ಸದ್ದು ಮಾಡುತ್ತಿದೆ.

ಟ್ವಿಟ್ಟರ್‌ನಲ್ಲಿ ವಿಚಿತ್ರ ಫೋಟೊ ಹಂಚಿಕೊಂಡ ನಟ ಶರಣ್!
ಇತ್ತೀಚೆಗೆ ನಟ ಶರಣ್ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೊ ಹಂಚಿಕೊಳ್ಳುವ ಮೂಲಕ ಎಲ್ಲರ ತಲೆಗೆ ಶರಣ್ ಹುಳ ಬಿಟ್ಟಿದ್ದಾರೆ. ಈ ಫೋಟೊದಲ್ಲಿ ಇರುವವರು ಯಾರು ಎಂದು ಗುರುತಿಸುವಂತೆ ಶರಣ್ ಬರೆದುಕೊಂಡಿದ್ದಾರೆ. ಮೊದಲ ಬಾರಿಗೆ ಫೋಟೊ ನೋಡಿದವರು ಕೆಲ ಕಾಲ ಕಕ್ಕಾಬಿಕ್ಕಿ ಆಗುವುದಂತೂ ನಿಜ. ಅಷ್ಟರ ಮಟ್ಟಿಗೆ ವಿಚಿತ್ರವಾಗಿದೆ ಈ ಫೋಟೋ.

'ಅವತಾರ ಪುರುಷ'ನಿಗಾಗಿ ಮಾಳವಿಕಾ ಅವಿನಾಶ್, ಭವ್ಯ, ಶೃತಿ ಹೆಸರು!
ನಟ ಶರಣ್ ಹೀಗೆ ಪೋಟೊ ಹಂಚಿಕೊಂಡು ಇದು ಯಾರು ಎಂದು ಕೇಳಿದಾಗ, ಸಾಕಷ್ಟು ಕಮೆಂಟ್‌ಗಳು ಬಂದಿವೆ. ಊಹೆಗೆ ನಿಂತ ಮಂದಿ ಫೋಟೊದಲ್ಲಿ ಇರುವುದು ಮಾಳವಿಕಾ ಅವಿನಾಶ್ ಎಂದಿದ್ದಾರೆ. ಇನ್ನೂ ಕೆಲವರು ಇದು ಹಿರಿಯ ನಟಿ ಭವ್ಯ ಅವರ ಫೋಟೊ ಎಂದು ಊಹಿಸಿದ್ದಾರೆ. ಮತ್ತೆ ಕೆಲವರು ಇದು ನಟಿ ಶೃತಿ ಎಂದಿದ್ದಾರೆ. ಆದರೆ ಹೆಚ್ಚಿನ ಜನ ಇದು ನಟ ಶರಣ್ ಅವರ ಅವತಾರವೇ ಎಂದು ಕಮೆಂಟ್ ಮಾಡಿದ್ದಾರೆ. ಈ ಫೋಟೊದಲ್ಲಿ ಇರುವುದು ನಟ ಶರಣ್ ಅವರೇ ಎನ್ನಲಾಗಿದೆ. ಅವತಾರ ಪುರುಷ ಆಗಿ ತೆರೆಗೆ ಬರ್ತಿರುವ ಶರಣ್ ಅವರ ಹತ್ತು ಅವತಾರಗಳಲ್ಲಿ ಇದು ಕೂಡ ಒಂದು ಸಾಕಷ್ಟು ಮಂದಿ ಊಹಿಸಿದ್ದಾರೆ.

10 ಅವತಾರ ಎತ್ತಲಿದ್ದಾರೆ ನಟ ಶರಣ್!
ಸದ್ಯ ನಟ ಶರಣ್ ತಮ್ಮ ಒಂದು ಅವತಾರದ ಫೋಟೊವನ್ನು ಹಂಚಿಕೊಂಡು ತಲೆಗೆ ಹುಳ ಬಿಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಇವರ ಹತ್ತು ಅವತಾರಗಳು ಹೇಗೆ ಇರಬಹುದು ಎನ್ನುವುದನ್ನು ಊಹಿಸಿಕೊಳ್ಳಿ ಸಾಕು. ನಟ ಶರಣ್ ಈ ಚಿತ್ರಕ್ಕಾಗಿ ಹಲವು ವೇಷಗಳನ್ನು ತೊಟ್ಟಿದ್ದಾರೆ. ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಸಿನಿಮಾಗಳ ಹೊರತಾಗಿ ನಿಜ ಜೀವನದಲ್ಲಿ ನಟಿಸಬೇಕಾದ ಸಂದರ್ಭ ಎದುರಾದರೆ ಏನಾಗುತ್ತದೆ ಎಂಬುದು ಈ ಚಿತ್ರದ ಒನ್‌ಲೈನ್ ಕಥೆ. ಜೊತೆಗೆ ಬ್ಲ್ಯಾಕ್ ಮ್ಯಾಜಿಕ್‌ನ ಕುರಿತಾದ ಒಂದಷ್ಟು ವಿಚಾರಗಳು ಚಿತ್ರದಲ್ಲಿ ಇವೆ.

ಅವತಾರ ಪುರುಷ ರಿಲೀಸ್ ಮುಂದೂಡಿಕೆ!
ಡಿಸೆಂಬರ್ 10 ರಂದು ಶರಣ್ 10 ಅವತಾರಗಳಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಬೇಕಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ಚಿತ್ರದ ರಿಲೀಸ್ ಮುಂದೆ ಹೋಗಿದೆ. ಇದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಚಿತ್ರ. ಹಾಗಾಗಿ ಈ ಚಿತ್ರ ವಿಭಿನ್ನವಾಗಿ ನಿಲ್ಲಲಿದೆ. ಸದ್ಯ ಚಿತ್ರದ ರಿಲೀಸ್ ದಿನಾಂಕಕ್ಕಾಗಿ ಶರಣ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯದಲ್ಲಿಯೆ ಚಿತ್ರ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ರಿವೀಲ್ ಮಾಡಲಿದೆ.


Click it and Unblock the Notifications











