twitter
    For Quick Alerts
    ALLOW NOTIFICATIONS  
    For Daily Alerts

    ವಿ. ಸೋಮಶೇಖರ್‌ಗೆ ಪುಟ್ಟಣ್ಣ,ಲೀಲಾವತಿಗೆ ರಾಜ್‌ಕುಮಾರ್‌ ಪ್ರಶಸ್ತಿ

    By Super
    |

    ಜನಪ್ರಿಯ ನಿರ್ದೇಶಕ ವಿ. ಸೋಮಶೇಖರ್‌ ಹಾಗೂ ಹಿರಿಯ ನಟಿ ಎಂ. ಲೀಲಾವತಿ ಅವರು ಕ್ರಮವಾಗಿ 1999-2000 ಸಾಲಿನ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಹಾಗೂ ರಾಜ್‌ಕುಮಾರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ಬುಧವಾರ ಇಳಿಸಂಜೆ 1999- 2000 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು , ಕವಿತಾ ಲಂಕೇಶ್‌ರ ದೇವೀರಿ ಅತ್ಯುತ್ತಮ ಚಲನಚಿತ್ರದ ಗೌರವಕ್ಕೆ ಪಾತ್ರವಾಗಿದೆ. ಸಾಮಾಜಿಕ ಪರಿಣಾಮದ ವಿಶೇಷ ಪ್ರಶಸ್ತಿ ಶಬ್ದವೇಧಿಗೆ ಹಾಗೂ ವಿಶೇಷ ತಂತ್ರ ಅಳಡಿಕೆ, ಉಡುಗೆಯ ಹೆಚ್ಚುಗಾರಿಕೆಯ ಪ್ರಶಸ್ತಿ ಎಕೆ- 47 ಸಿನಿಮಾಕ್ಕೆ ದಕ್ಕಿದೆ.

    ದ್ವಿತೀಯ ಅತ್ಯುತ್ತಮ ಚಲನಚಿತ್ರದ ಗೌರವ ಕುವೆಂಪು ಕಾದಂಬರಿ ಆಧಾರಿತ ಗಿರೀಶ್‌ ಕಾರ್ನಾಡ್‌ ನಿರ್ದೇಶನದ ಕಾನೂರು ಹೆಗ್ಗಡತಿ ಸಿನಿಮಾಗೆ ಸಂದಿದ್ದರೆ, ಚಂದ್ರಮುಖಿ ಪ್ರಾಣಸಖಿ ಸಿನಿಮಾ ತೃತೀಯ ಅತ್ಯುತ್ತಮ ಸಿನಿಮಾ ಪುರಸ್ಕಾರ ಪಡೆದಿದೆ.

    ಇತರೆ ಪ್ರಶಸ್ತಿಗಳ ವಿವರ-

    ಅತ್ಯುತ್ತಮ ನಟ - ಶಿವರಾಜ್‌ಕುಮಾರ್‌ (ಹೃದಯಾ ಹೃದಯಾ)
    ಅತ್ಯುತ್ತಮ ನಟಿ - ತಾರಾ (ಕಾನೂರು ಹೆಗ್ಗಡತಿ)
    ಅತ್ಯುತ್ತಮ ಪೋಷಕ ನಟ - ಶ್ರೀನಿವಾಸಮೂರ್ತಿ (ಶ್ರೀರಸ್ತು ಶುಭಮಸ್ತು)
    ಅತ್ಯುತ್ತಮ ಪೋಷಕ ನಟಿ- ವಿನಯಾ ಪ್ರಸಾದ್‌ (ಬಣ್ಣದ ಹೆಜ್ಜೆ)
    ಅತ್ಯುತ್ತಮ ಕಥೆ - ಬರಗೂರು ರಾಮಚಂದ್ರಪ್ಪ (ಹಗಲುವೇಷ)
    ಅತ್ಯುತ್ತಮ ಚಿತ್ರಕಥೆ - ಡಿ. ರಾಜೇಂದ್ರಬಾಬು (ಹಬ್ಬ)
    ಅತ್ಯುತ್ತಮ ಸಂಭಾಷಣೆ - ಎ.ಜಿ. ಶೇಷಾದ್ರಿ (ಹೃದಯಾ ಹೃದಯಾ)
    ಅತ್ಯುತ್ತಮ ಛಾಯಾಗ್ರಾಹಕ - ಜೆ.ಜೆ. ಕೃಷ್ಣ (ನನ್ನಾಸೆಯ ಹೂವೇ)
    ಅತ್ಯುತ್ತಮ ಸಂಗೀತ - ಕೆ. ಕಲ್ಯಾಣ್‌ (ಚಂದ್ರಮುಖಿ ಪ್ರಾಣಸಖಿ)
    ಅತ್ಯುತ್ತಮ ಸಂಕಲನಕಾರ - ಎಸ್‌. ಮನೋಹರ್‌ (ಎಕೆ- 47)
    ಅತ್ಯುತ್ತಮ ಬಾಲನಟ - ಮಾಸ್ಟರ್‌ ಮಂಜ (ದೇವೀರಿ)
    ಅತ್ಯುತ್ತಮ ಕಲಾ ನಿರ್ದೇಶಕ - ಶಶಿಧರ ಅಡಪ (ಕಾನೂರು ಹೆಗ್ಗಡತಿ)
    ಅತ್ಯುತ್ತಮ ಗೀತರಚನೆ - ಬರಗೂರು ರಾಮಚಂದ್ರಪ್ಪ (ಹಗಲುವೇಷ)
    ಅತ್ಯುತ್ತಮ ಹಿನ್ನೆಲೆಗಾಯಕ - ರಾಜೇಶ್‌ ಕೃಷ್ಣನ್‌ (ಬಣ್ಣದ ಹೆಜ್ಜೆ)
    ಅತ್ಯುತ್ತಮ ಹಿನ್ನೆಲೆಗಾಯಕಿ - ಚಿತ್ರಾ (ಅರುಣೋದಯ)

    English summary
    V. Somashekar gets puttanna kanagal award and leelavathi gets rajkumar award
    Wednesday, August 7, 2013, 11:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X