Don't Miss!
- News
Black Tea: ಕಪ್ಪು ಚಹಾದಿಂದ ಕೊರೊನಾ ವೈರಸ್ ನಿಯಂತ್ರಣ
- Sports
CSA ಟಿ20 ಲೀಗ್: RPSG-ಮಾಲೀಕತ್ವದ ಡರ್ಬನ್ ಫ್ರಾಂಚೈಸ್ ಪರ ಆಡಲಿದ್ದಾರೆ ಕ್ವಿಂಟನ್ ಡಿ ಕಾಕ್, ಹೋಲ್ಡರ್
- Automobiles
ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಬಜಾಜ್ ಸಿಟಿ110ಎಕ್ಸ್ ಬೈಕ್
- Finance
ಕೋಟ್ಯಾಧಿಪತಿ ಆಗಲು ಇದರಲ್ಲಿ ಹೂಡಿಕೆ ಮಾಡಿ!
- Lifestyle
ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ
- Technology
ಈ ಫೋನ್ಗಳಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಇದೆ!..ಫೋನ್ ಬೆಲೆಯೂ ಕಡಿಮೆ!
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
‘ದೂರದರ್ಶನ’ದೊಳಗೆ ಪೃಥ್ವಿ ಅಂಬರ್ ಜೊತೆ ಕಂಡಳು ನಾಯಕಿ ಆಯನಾ!
ದಿಯಾ
ಸಿನಿಮಾ
ಮೂಲಕ
ಕನ್ನಡ
ಚಿತ್ರರಂಗಕ್ಕೆ
ಹೊಸ
ಮುಖದ
ಪರಿಚಯವಾಯಿತು.
ಅವರೇ
ಪೃಥ್ವಿ
ಅಂಬರ್.
ಈಗತಾನೇ
ಪೃಥ್ವಿ
ಅಂಬರ್
ಅಭಿನಯದ
ಮೊದಲ
ಮಲ್ಟಿಸ್ಟಾರರ್
ಸಿನಿಮಾ
'ಬೈರಾಗಿ'
ರಿಲೀಸ್
ಆಗಿದೆ.
ಈಗ
'ದೂರದರ್ಶನ'
ಹೊತ್ತು
ಬರಲು
ಸಜ್ಜಾಗಿದ್ದಾರೆ.
ಇದೊಂದು
ವಿಭಿನ್ನ
ಕಥಾಹಂದರ
ಹೊಂದಿರುವ
ಸಿನಿಮಾ
ಆಗಿದ್ದು
ಟೈಟಲ್ನಿಂದಲೇ
ಗಮನ
ಸೆಳೆಯುತ್ತಿದೆ.
'ದೂರದರ್ಶನ'
ಟೈಟಲ್
ಟೀಸರ್
ಇತ್ತೀಚೆಗೆ
ರಿಲೀಸ್
ಆಗಿದ್ದು,
ಸಾಕಷ್ಟು
ಸಿನಿಪ್ರಿಯರ
ಗಮನ
ಸೆಳೆದಿದೆ.
ಇಲ್ಲಿವರೆಗೂ 'ದೂರದರ್ಶನ'ದಲ್ಲಿರು ನಾಯಕಿ ಯಾರು ಎಂಬುದನ್ನು ಪರಿಚಯ ಮಾಡಿರಲಿಲ್ಲ. ಈಗ ಚಿತ್ರತಂಡ ನಾಯಕಿಯನ್ನು ಸಿನಿಪ್ರಿಯರಿಗೆ ಪರಿಚಯಿಸುತ್ತಿದೆ. ಈ ಹಿಂದೆ 'ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ' ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟಿದ್ದ ಆಯನಾ ಪೃಥ್ವಿ ಅಂಬರ್ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ದೂರದರ್ಶನಕ್ಕೆ ಆಯನಾ ಆಯ್ಕೆ ಆಗಿದ್ದೇಗೆ?
'ದೂರದರ್ಶನ' ಸಿನಿಮಾ ಅನೌನ್ಸ್ ಆದಾಗ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆದಿತ್ತು. ಈ ವೇಳೆ ನಾಯಕಿ ಆಯ್ಕೆಗಾಗಿ ಆಡಿಷನ್ ಕರೆಯಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸುಮಾರು 30 ರಿಂದ 40 ಮಂದಿ ಆಡಿಷನ್ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಆಯನಾ ಕೊನೆಯದಾಗಿ ಆಗಿ ಆಯ್ಕೆಯಾದರು.
ಈ ಸಿನಿಮಾದಲ್ಲಿ ಆಯನಾ, ಮೈತ್ರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಕ್ಷಾ ಡ್ರೈವರ್ ಮಗಳಾಗಿ ಅಪ್ಪನ ಆಸೆಯಲ್ಲಿ ಬೆಳೆಯುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೇನು ಆಗುತ್ತೆ ಎಂಬುದು ಆಯನಾ ಪಾತ್ರ.
ನೈಜ ಘಟನೆ ಆಧರಿಸಿದ ಸಿನಿಮಾ
ನೈಜ ಘಟನೆ ಹಾಗೂ ಕಾಲ್ಪನಿಕತೆ ಎರಡನ್ನೂ ಸೇರಿಸಿ 'ದೂರದರ್ಶನ' ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸುಕೇಶ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮಂಗಳೂರು ಪುತ್ತೂರು ಸೇರಿದಂತೆ ಹಲವೆಡೆ 38 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ರಾಜೇಶ್ ಭಟ್ ಎಂಬುವವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ ಬರೆದಿದ್ದಾರೆ.

ಪೃಥ್ವಿ ಹಾಗೂ ಆಯನಾ ಜೊತೆ ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ. ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಸುಕೇಶ್ ಶೆಟ್ಟಿ ಕೆಲಸ ಮಾಡಿದ್ದಾರೆ. ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದು ಈಗ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಸಿನಿಮಾ ಕೂಡ ಹೌದು.