ನಕರ ಚಿತ್ರಕ್ಕೆ ಬಂದ ಚಿನ್ನದ ಬುಗುರಿ ಆಯೇಶಾ

By ಉದಯರವಿ

ಕನ್ನಡಕ್ಕೆ ಮತ್ತೊಬ್ಬ ಐಟಂ ಬೆಡಗಿಯ ಆಗಮನವಾಗಿದೆ. ಈ ಐಟಂ ಬೆಡಗಿ ಹೆಸರು ಆಯೇಶಾ. ನೋಡಲು ದಂತದಗೊಂಬೆಯಂತಿರುವ ಈ ಬ್ಯೂಟಿ ಮುಮೈತ್ ಖಾನ್ ದೂರದ ಸಂಬಂಧಿ ತರಹ ಕಾಣುತ್ತಾರೆ. ಈಗ ಕನ್ನಡ ನಕರ ಚಿತ್ರದಲ್ಲಿ ತಮ್ಮ ಮೈಮಾಟ ತೋರಿಸಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಾಸ್ ಮಸಾಲಾ ಚಿತ್ರ. ಮಾಸ್ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಚಿತ್ರದನ್ನು ತೆರೆಗೆ ತರಲಾಗಿದೆ ಎಂಬುದು ಚಿತ್ರದ ಟ್ರೇಲರ್ ನೋಡಿದರೆ ಅರ್ಥವಾಗುತ್ತದೆ. ಮೇಲ್ಮೋಟಕ್ಕೆ ಇದು ಕಳ್ಳ ಪೊಲೀಸ್ ಚಿತ್ರದಂತೆ ಕಂಡರೂ ಒಂದಷ್ಟು ಸೆಂಟಿಮೆಂಟ್ ಅಂಶಗಳನ್ನೂ ಬೆರೆಸಿರುವುದನ್ನು ಕಾಣಬಹುದು.

ಜೊತೆಗೆ ಟ್ರೇಲರ್ ನಲ್ಲಿ ಅಲ್ಲಲ್ಲಿ ಸೆಂಟಿಮೆಂಟು, ಅಣ್ಣತಂಗಿ ಸಂಬಂಧ ಅನುಬಂಧದ ಸನ್ನಿವೇಶಗಳು ಬರುತ್ತವೆ. ಒಂದಷ್ಟು ಲವ್ವು ಇನ್ನೊಂದಿಷ್ಟು ಡೌವ್ವು ಅಂಶಗಳನ್ನು ತುಂಬಿರುವ ಚಿತ್ರವಿದು. ಸ್ಲೈಡ್ ನಲ್ಲಿ ನೋಡಿ ಆನಂದಿಸಿ ಆಯೇಶಾ ಐಟಂ ದೃಶ್ಯಗಳು.

ಅಗತ್ಯಕ್ಕಿಂತ ಹೆಚ್ಚಾಗಿ ಮೈಮಾಟ ತೋರಿದ ಬುಗುರಿ

ಅಗತ್ಯಕ್ಕಿಂತ ಹೆಚ್ಚಾಗಿ ಮೈಮಾಟ ತೋರಿದ ಬುಗುರಿ

ನಕರ ಚಿತ್ರದ ಐಟಂ ಹಾಡಿನಲ್ಲಿ ಆಯೇಷಾ ತಮ್ಮ ಮೈಮಾಟವನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಪ್ರದರ್ಶಿಸಿದ್ದಾರೆ. ತಿರುತಿರುಗಿ ಚಿನ್ನದ ಬುಗುರಿ ಎಂಬ ಹಾಡಿಗೆ ತಕ್ಕಂತೆ ಅವರು ತಮ್ಮ ಮೈಯನ್ನು ಬಳುಕಿಸಿದ್ದಾರೆ.

ಗಾಂಧಿ ಕ್ಲಾಸಿನ ಪ್ರೇಕ್ಷಕರ ಮೇಲೆ ಕಣ್ಣು

ಗಾಂಧಿ ಕ್ಲಾಸಿನ ಪ್ರೇಕ್ಷಕರ ಮೇಲೆ ಕಣ್ಣು

ಗಾಂಧಿ ಕ್ಲಾಸಿನ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹಾಡನ್ನು ಚಿತ್ರೀಕರಿಸಲಾಗಿದೆ. ಕಲರ್ ಕಲರ್ ತುಂಡುಡುಗೆಯಲ್ಲಿ ಆಯೇಷಾ ಹೆಜ್ಜೆ ಹಾಕಿದ್ದಾರೆ. ಪಡ್ಡೆಗಳ ಹೃದಯ ಬಡಿವನ್ನು ಹೆಚ್ಚಿಸಿದ್ದಾರೆ.

ಸಹ ನರ್ತಕಿಯರ ಜೊತೆ ಎನರ್ಜಿಟಿಕ್ ಸ್ಟೆಪ್ಸ್

ಸಹ ನರ್ತಕಿಯರ ಜೊತೆ ಎನರ್ಜಿಟಿಕ್ ಸ್ಟೆಪ್ಸ್

ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವವರು ಎಸ್ ಶಿವಾಜಿರಾವ್ ಹಾಗೂ ರಾಜ್ ದೇವ್. ಸಹ ನರ್ತಕಿಯರ ಜೊತೆ ಆಯೇಷಾ ಎನರ್ಜಿಟಿಕ್ ಆಗಿ ಕುಣಿದಿದ್ದಾರೆ.

ಕನಸುಗಳ ಕೋಟೆ ಮೀರಿ ಆಡೋಣ ಲಗೋರಿ

ಕನಸುಗಳ ಕೋಟೆ ಮೀರಿ ಆಡೋಣ ಲಗೋರಿ

ತಿರುತಿರುಗು ಚಿನ್ನದ ಬುಗುರಿ ಸೆರಗಿ ಸೀರೆಯ ಟಗರಿ... ಬಾ ಎಂಥ ನಗರಿ ಚಾಂದನಿ ಬೆಳಕಲ್ಲಿ ಚಿಗರಿ... ಕನಸುಗಳ ಕೋಟೆ ಮೀರಿ ಆಡೋಣ ಲಗೋರಿ ಎಂದು ರಸಿಕರನ್ನು ಕೆಣಕಿದ್ದಾರೆ.

ಈ ಚಿತ್ರದ ಏಕಾಂಗಿ ವೀರ ರಂಜೀತ್ ಸಾರಕ್ಕಿ

ಈ ಚಿತ್ರದ ಏಕಾಂಗಿ ವೀರ ರಂಜೀತ್ ಸಾರಕ್ಕಿ

ಇನ್ನು ಈ ಚಿತ್ರವನ್ನು ಏಕಾಂಗಿಯಾಗಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಮಾಡುತ್ತಿರುವುದು ರಂಜೀತ್ ಸಾರಕ್ಕಿ. ಪ್ರಿಯಾಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಟ್ರೇಲರ್ ಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ.

ಭೂಮಿಪೂರ ಎಂಬುದು ನಕರ ಅಡಿಬರಹ

ಭೂಮಿಪೂರ ಎಂಬುದು ನಕರ ಅಡಿಬರಹ

ಇನ್ನು ವಿಶೇಷ ಎಂದರೆ ಈ ಚಿತ್ರದ ಅಡಿಬರಹ 'ಭೂಮಿಪೂರ' ಎಂಬುದು. ಪಾತ್ರವರ್ಗದಲ್ಲಿ ಥ್ರಿಲ್ಲರ್ ಮಂಜು, ಟೆನ್ನಿಸ್ ಕೃಷ್ಣ, ಶೋಭಾ ರಾಜ್, ಕೋಟೆ ಪ್ರಭಾಕರ್, ಮಾರಿಮುತ್ತು ಮುಂತಾದವರಿದ್ದಾರೆ.

ಟೆನ್ನಿಸ್, ಶೋಭಾರಾಜ್ ಪೊಲೀಸ್ ಪಾತ್ರ

ಟೆನ್ನಿಸ್, ಶೋಭಾರಾಜ್ ಪೊಲೀಸ್ ಪಾತ್ರ

ಎ ಶಿವಕುಮಾರ್ ಕಗ್ಗಲಿಪುರ ಅರ್ಪಿಸುವ ಚಿತ್ರಕ್ಕೆ ಛಾಯಾಗ್ರಹಣ ಮಹಂತೇಶ್ ಮಸ್ಕಿ. ಟೆನ್ನಿಸ್ ಕೃಷ್ಣ ಹಾಗೂ ಶೋಭಾರಾಜ್ ಅವರದು ಚಿತ್ರದಲ್ಲಿ ಪೊಲೀಸ್ ಪಾತ್ರ.

More from Filmibeat

English summary
The makers of Sandalwood forthcoming movie Nakara has roped in hottie Ayesha for the item number. The actress has showed her dance moves for the song 'Tiru tirugi chinada buguri,' which was canned in early 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X