'ಅಯೋಗ್ಯ- 2' ಚಿತ್ರದ 'ಮುದ್ದು ಮುದ್ದು ಪುಟ್ಟಲಕ್ಷ್ಮಿ' ಹಾಡಿನ ರುಚಿ ಕೆಡಿಸಿಬಿಡ್ತಾ ಸಿದ್ ಶ್ರೀರಾಮ್ ದನಿ?

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ- 2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿಧಾನವಾಗಿ ಸಿನಿಮಾ ಪ್ರಚಾರ ಆರಂಭಿಸಿದೆ ಚಿತ್ರತಂಡ. ಸದ್ಯ ಚಿತ್ರದ 'ಮುದ್ದು ಮುದ್ದು ಪುಟ್ಲಕ್ಷ್ಮಿ' ಹಾಡು ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಸಿದ್‌ ಶ್ರೀರಾಮ್ ಹಾಗೂ ಪೃಥ್ವಿ ಭಟ್ ಗಾಯನದಲ್ಲಿ ಮೆಲೋಡಿ ಸಾಂಗ್ ಮೂಡಿ ಬಂದಿದೆ.

ಮಹೇಶ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. 'ಅಯೋಗ್ಯ' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಈ ಚಿತ್ರಕ್ಕೂ ಜೊತೆಯಾಗಿದೆ. ಆ ಚಿತ್ರದ 4 ಹಾಡುಗಳಿಗೆ ಬಹದ್ಧೂರ್ ಚೇತನ್ ಸಾಹಿತ್ಯ ಬರೆದಿದ್ದರು. ಸದ್ಯ ಬಿಡುಗಡೆ ಆಗಿರುವ 'ಮುದ್ದು ಮುದ್ದು ಪುಟ್ಲಕ್ಷ್ಮಿ' ಹಾಡಿಗೂ ಸೊಗಸಾದ ಸಾಹಿತ್ಯ ಪೋಣಿಸಿದ್ದಾರೆ. ಹಳ್ಳಿ ಪರಿಸರದಲ್ಲಿ ಸೊಗಸಾಗಿ ಹಾಡನ್ನು ಸೆರೆಹಿಡಿಯಲಾಗಿದೆ. ಆದರೆ ಎಲ್ಲಾ ಸರಿ ನಾಯಕ ಸತೀಶ್ ನೀನಾಸಂಗೆ ಸಿದ್‌ ಶ್ರೀರಾಮ್ ವಾಯ್ಸ್ ಸೂಟ್ ಆಗ್ತಿಲ್ಲ, ಮಂಡ್ಯ ಸೊಗಡಿನ ಹಾಡಿಗೂ ಸಿಂಕ್ ಆಗ್ತಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Ayogya -2 film Mudd Muddu song Impresses But Sid Sriram s Voice Faces Criticism

ಚೆನ್ನೈ ಮೂಲದ ಗಾಯಕ ಸಿದ್ ಶ್ರೀರಾಮ್ ಗಾಯನದ ಬಗ್ಗೆ ದೂಸ್ರಾ ಮಾತಿಲ್ಲ. ಸಾಕಷ್ಟು ಅದ್ಭುತ ಗೀತೆಗಳಿಗೆ ಅವರು ದನಿಯಾಗಿದ್ದಾರೆ. ಕನ್ನಡದಲ್ಲಿ ಕೂಡ ಈಗಾಗಲೇ ಕೆಲ ಹಾಡುಗಳನ್ನು ಹಾಡಿ ಸಕ್ಸಸ್ ಕಂಡಿದ್ದಾರೆ. ಆದರೆ ಯಾಕೋ ಈ ಹಾಡಿಗೆ ಅವರ ದನಿ ಹೊಂದಿಕೆ ಆಗ್ತಿಲ್ಲ, ಮಂಡ್ಯ ಸೊಗಡು, ಸಹಜತೆ ಮಾಯವಾಗಿದೆ. ವಿಜಯ್ ಪ್ರಕಾಶ್ ಹಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಾಕಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೇಳ್ತಾ ಕೇಳ್ತಾ ಹಾಡು ಇಷ್ಟವಾಗುತ್ತಿದೆ. ಆಡಿಯೋ ಸಾಂಗ್ ಕೇಳಿದಾಗ ವ್ಯತ್ಯಾಸ ಗೊತ್ತಾಗಲ್ಲ, ವಿಡಿಯೋ ಸಾಂಗ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡ ಈ ಬಗ್ಗೆ ಚಿತ್ರತಂಡಕ್ಕೆ ಪ್ರಶ್ನೆ ಎದುರಾಗಿತ್ತು. ಸುದ್ದಿಗೋಷ್ಠಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಜರಾಗಿರಲಿಲ್ಲ. ಹಾಗಾಗಿ ನಿರ್ದೇಶಕ ಮಹೇಶ್ ಹಾಗೂ ನಟ ಸತೀಶ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. ಪ್ರತಿ ಸಿನಿಮಾದಲ್ಲೂ ವಿಜಯ್ ಪ್ರಕಾಶ್ ಹಾಡುವುದಕ್ಕ ಆಗುವುದಿಲ್ಲ. ಅರ್ಜುನ್ ಜನ್ಯಾ ಒಂದು ಪ್ರಯೋಗ ಮಾಡಿದ್ದಾರೆ. 'ಅಯೋಗ್ಯ' ಚಿತ್ರ ಹಾಡುಗಳ ಸಂಪೂರ್ಣ ಜವಾಬ್ದಾರಿಯನ್ನು ಜನ್ಯಾ ವಹಿಸಿಕೊಂಡಿದ್ದರು. ಆಲ್ಬಮ್ ಹಿಟ್ ಆಗಿತ್ತು. ಹಾಗಾಗಿ ಈ ಚಿತ್ರದ ಹಾಡುಗಳ ವಿಚಾರದಲ್ಲಿ ಎಲ್ಲಾ ನಿರ್ಧಾರಗಳನ್ನು ಅವರೇ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದರು.

'ಬ್ರ್ಯಾಟ್' ಚಿತ್ರದ 'ನಾನೇ ನೀನಂತೆ', 'ಲವ್ 360' ಚಿತ್ರದ 'ಜಗವೇ ನೀನು ಗೆಳತಿಯೇ' ರೀತಿಯ ಹಾಡುಗಳು ಸಿದ್ ಶ್ರೀರಾಮ್ ಹಾಗೂ ಅರ್ಜುನ್ ಜನ್ಯಾ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿತ್ತು. ಅಂಥದ್ದೇ ಮ್ಯಾಜಿಕ್ ಮಾಡಲು ಇಬ್ಬರೂ ಮತ್ತೆ ಜೊತೆಯಾಗಿದ್ದಾರೆ. ಆದರೆ ಅದು ಮಿಸ್ ಫೈಯರ್ ಆಗಿರುವಂತೆ ಕಾಣ್ತಿದೆ. ಮುಂದಿನ ದಿನಗಳಲ್ಲಿ ಸಿದ್ ಶ್ರೀರಾಮ್ ಬದಲು ವಿಜಯ್ ಪ್ರಕಾಶ್ ಅವರಿಂದ ಈ ಹಾಡನ್ನು ಹಾಡಿಸುತ್ತಾರಾ ಕಾದು ನೋಡಬೇಕಿದೆ. ಅಂದಹಾಗೆ ಈ ಚಿತ್ರದಲ್ಲಿ ವಿಜಯ್ ಪ್ರಕಾಶ್ ಬೇರೆ ಹಾಡುಗಳನ್ನು ಹಾಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.

2 ಕೋಟಿ ರೂ.ಗೆ 'ಅಯೋಗ್ಯ-2' ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿತ್ತು. ಆಗಸ್ಟ್ 7ಕ್ಕೆ ಸಿನಿಮಾ ತೆರೆಗೆ ಬರಲಿದೆ. ಆಗಸ್ಟ್ 3ನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೆದಿತ್ತು. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರಂದು ತೆರೆದು ಬರುತ್ತದೆ ಎಂದು ಘೋಷಿಸುತ್ತಿದ್ದಂತೆ 2 ವಾರ ಮುನ್ನ ತಮ್ಮ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. 2018ರಲ್ಲಿ ಬಂದಿದ್ದ 'ಅಯೋಗ್ಯ' ಚಿತ್ರದ ಕಥೆಯನ್ನು ಈ ಚಿತ್ರದಲ್ಲಿ ಮುಂದುವರೆಸಲಾಗ್ತಿದೆ.

Read more about: ayogya rachita ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X