ಕಾಲಿವುಡ್ ಗೆ ರಿಮೇಕ್ ಆಗಲಿದೆ 'ಅಯೋಗ್ಯ': ಸತೀಶ್ ರೋಲ್ ನಲ್ಲಿ ಸ್ಟಾರ್ ನಟ

By Pavithra

ಮೂರು ವಾರಗಳ ಹಿಂದೆಯಷ್ಟೇ ಬಿಡುಗಡೆ ಆಗಿ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ 'ಅಯೋಗ್ಯ'. ನಟ ಸತೀಶ್ ನೀನಾಸಂ ವೃತ್ತಿ ಜೀವನದಲ್ಲಿ ಹೆಚ್ಚು ಗಳಿಗೆ ಹಾಗೂ ಪ್ರಖ್ಯಾತಿ ತಂದುಕೊಟ್ಟ ಚಿತ್ರ.

ನಿರ್ದೇಶಕ ಮಹೇಶ್ ಕುಮಾರ್ ಚೊಚ್ಚಲ ಪ್ರಯತ್ನದಲ್ಲೇ ಸಕ್ಸಸ್ ಕಿರೀಟವನ್ನು ತಂದು ಕೊಟ್ಟ 'ಅಯೋಗ್ಯ' ಸಿನಿಮಾವನ್ನು ಜನರು ಪ್ರೀತಿಯಿಂದಲೇ ಒಪ್ಪಿಕೊಂಡಿದ್ದರು. ಎಲ್ಲಾ ರೀತಿಯಲ್ಲಿ ಯಶಸ್ಸು ಗಳಿಸಿದ 'ಅಯೋಗ್ಯ' ಕಾಲಿವುಡ್ ಗೆ ಎಂಟ್ರಿಕೊಡುತ್ತಿದ್ದಾನೆ.

ಕಾಲಿವುಡ್ ನ ಸಂಸ್ಥೆ ಚಿತ್ರದ ರೀಮೇಕ್ ಹಕ್ಕನ್ನು ಖರೀದಿ ಮಾಡಿದ್ದು ಚಿತ್ರದಲ್ಲಿ ಸತೀಶ್ ನೀನಾಸಂ ನಿರ್ವಹಿಸಿದ್ದ ಪಾತ್ರದಲ್ಲಿ ಸ್ಟಾರ್ ನಟ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಯಾರಾಗುತ್ತಾರೆ ಕಾಲಿವುಡ್ ನ ಅಯೋಗ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ರೀಮೇಕ್ ಆಗ್ತಿದೆ ಅಯೋಗ್ಯ ಸಿನಿಮಾ

ರೀಮೇಕ್ ಆಗ್ತಿದೆ ಅಯೋಗ್ಯ ಸಿನಿಮಾ

'ಅಯೋಗ್ಯ' ನೀನಾಸಂ ಸತೀಶ್, ರಚಿತಾ ರಾಮ್ ಅಭಿನಯದ ಸಿನಿಮಾ. ಮಹೇಶ್ ಕುಮಾರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ 'ಅಯೋಗ್ಯ' ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಚಿತ್ರ ಕಾಲಿವುಡ್ ಗೆ ರೀಮೇಕ್ ಆಗುತ್ತಿರುವ ವಿಚಾರವನ್ನು ಸಿನಿಮಾತಂಡ ತಿಳಿಸಿದೆ.

ಕಾಲಿವುಡ್ ನಲ್ಲಿ ಯಾರಾಗ್ತಾರೆ 'ಅಯೋಗ್ಯ'

ಕಾಲಿವುಡ್ ನಲ್ಲಿ ಯಾರಾಗ್ತಾರೆ 'ಅಯೋಗ್ಯ'

ತಮಿಳಿನಲ್ಲಿ ರೀಮೇಕ್ ಆಗುತ್ತಿರುವ 'ಅಯೋಗ್ಯ' ಸಿನಿಮಾಗೆ ಕಾಲಿವುಡ್ ಸ್ಟಾರ್ ನಾಯಕ ವಿಜಯ ಸೇತುಪತಿ ನಾಯಕನಾಗುತ್ತಾರಂತೆ. ವಿಶೇಷ ಎಂದರೆ 'ಅಯೋಗ್ಯ' ಎನ್ನುವ ಟೈಟಲ್ ನಲ್ಲಿ ತಮಿಳಿನಲ್ಲಿ ಮತ್ತೊಂದು ಚಿತ್ರ ಸೆಟ್ಟೇರಿದೆ

ವಿಜಯ್ ಸಿನಿಮಾ ರಿಮೇಕ್ ಮಾಡದ್ದ ಸತೀಶ್

ವಿಜಯ್ ಸಿನಿಮಾ ರಿಮೇಕ್ ಮಾಡದ್ದ ಸತೀಶ್

ಈ ಹಿಂದೆ ಸತೀಶ್​ ನೀನಾಸಂ, ಸೇತುಪತಿ ಅಭಿನಯದ ‘ನಡುವುಳ್​ ಕೊಂಜಮ್​ ಪಕ್ಕಥಾ ಕಾಣುಂ' ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಿದ್ದರು. ‘ಕ್ವಾಟ್ಲೆ ಸತೀಶ' ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾ ತೆರೆ ಕಂಡಿತ್ತು. ಆದರೆ ಇದೀಗ ಸತೀಶ್ ನಿನಾಸಂ ನಟನೆಯ ಸಿನಿಮಾವನ್ನು ವಿಜಯ್ ಸೇತುಪತಿ ರಿಮೇಕ್​ ಮಾಡ್ತಿದ್ದಾರೆ.

25 ದಿನಗಳು ಪೂರೈಸಿದ 'ಅಯೋಗ್ಯ'

25 ದಿನಗಳು ಪೂರೈಸಿದ 'ಅಯೋಗ್ಯ'

ಸದ್ಯ 'ಅಯೋಗ್ಯ' ಸಿನಿಮಾ 25 ದಿನಗಳನ್ನು ಪೂರೈಸಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿರುವ ಪ್ರೇಕ್ಷಕರು ಮತ್ತೆ ಮತ್ತೆ ಚಿತ್ರಮಂದಿರದತ್ತ 'ಅಯೋಗ್ಯ'ನನ್ನು ನೋಡಲು ಬರುತ್ತಿದ್ದಾರೆ.

More from Filmibeat

English summary
Kannada Ayogya cinema is remaking in Tamil. Actor Vijay Sethupathi is seen as the hero in the Tamil Ayogya film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X