twitter
    For Quick Alerts
    ALLOW NOTIFICATIONS  
    For Daily Alerts

    ಅವಕಾಶ ಕೇಳಿ ಹೋಗಿದ್ದ 'ಅಯೋಗ್ಯ' ಮಹೇಶ್‌ಗೆ ಸಾಹಿತಿ ಹೇಳಿದ್ದು ಇಷ್ಟ ಆಗಲಿಲ್ಲ!

    |

    ಪಂಚಲಿಂಗೇಶ್ವರ ಬಸ್ ಹತ್ಕೊಂಡು ಬೆಂಗಳೂರಿಗೆ ಬಂದ ಮಹೇಶ್ ಕುಮಾರ್ ಇಂದು ಕನ್ನಡ ಚಿತ್ರರಂಗದಲ್ಲಿ ಒಬ್ಬ ಯಶಸ್ವಿ ನಿರ್ದೇಶಕನಾಗಿದ್ದು, ಸ್ಟಾರ್ ನಟರ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

    Recommended Video

    Director's Diary | ಜಂಗ್ಲಿ ಸಿನಿಮಾ ಮಾಡ್ಬೇಕಾದ್ರೆ ನನ್ನ ನಿಯತ್ತು ಸೂರಿ ಸರ್ ಗೆ ಇಷ್ಟ ಆಗಿತ್ತು

    ಸತೀಶ್ ನೀನಾಸಂ ಜೊತೆ 'ಅಯೋಗ್ಯ' ಎಂಬ ಬ್ಲಾಕ್‌ ಬಸ್ಟರ್ ಹಿಟ್ ಚಿತ್ರ ಕೊಟ್ಟ ಮಹೇಶ್ ಈಗ ಶ್ರೀಮುರಳಿ ಜೊತೆ 'ಮದಗಜ' ಸಿನಿಮಾ ಮಾಡ್ತಿದ್ದಾರೆ. ಈಗ ಸ್ಟಾರ್ ನಿರ್ದೇಶಕ ಎನಿಸಿಕೊಳ್ಳುತ್ತಿರುವ ಮಹೇಶ್, ಗಾಂಧಿನಗರದಲ್ಲಿ ಹತ್ತು ವರ್ಷಕ್ಕು ಹೆಚ್ಚು ಕಾಲ ಕಷ್ಟಪಟ್ಟು, ಊಟಕ್ಕೆ ಇಲ್ಲದೆ ಪರದಾಡಿ, ಪುಟ್‌ಪಾತ್‌ನಲ್ಲಿ ಮಲಗಿದ್ದರು ಅಂದ್ರೆ ನಂಬಲೇಬೇಕು. ಈ ಕುರಿತು ಸ್ವತಃ ಮಹೇಶ್ ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಸಿನಿಮಾ ನಿರ್ದೇಶಕ ಆಗ್ಬೇಕು ಆಸೆ

    ಸಿನಿಮಾ ನಿರ್ದೇಶಕ ಆಗ್ಬೇಕು ಆಸೆ

    ಎಸ್‌ಎಸ್‌ಎಲ್‌ಸಿ ಫೇಲ್ ಆಗಿ ನಂತರ ಮತ್ತೆ ಪರೀಕ್ಷೆ ಕಟ್ಟಿ ಪಾಸ್ ಆಗಿ, ಆಮೇಲೆ ಡಿಪ್ಲೋಮಾ ಮಾಡಿ, ಸಕ್ಕರೆ ಕಂಪನಿಯಲ್ಲಿ ಕೆಲಸಕ್ಕೆ ಸಹ ಸೇರಿಕೊಂಡಿದ್ದ ಮಹೇಶ್‌ಗೆ ಸಿನಿಮಾ ನಿರ್ದೇಶಕ ಆಗ್ಬೇಕು ಎಂಬ ಆಸೆ ಬಿಟ್ಟುಬಿಡದಂತೆ ಕಾಡುತ್ತದೆ. ಈ ಉದ್ದೇಶದಿಂದ ಮನೆಯವರಿಗೆ ಇಷ್ಟ ಇಲ್ಲ ಅಂದ್ರೂ ಒಪ್ಪಿಸಿ ಒಂದು ದಿನ ರಾತ್ರಿ 5 ಗಂಟೆಗೆ ಪಂಚಲಿಂಗೇಶ್ವರ ಬಸ್ ಹಿಡಿದು ಬೆಂಗಳೂರಿಗೆ ಬರ್ತಾರೆ ಮಹೇಶ್ ಕುಮಾರ್.

    'ಪ್ರೇಮ್ ಕಹಾನಿ' ಸೋಲು ಕಲಿಸಿದ ಬದುಕಿನ ಪಾಠ: 'ಕಾರ್ ಇದೆ, ಪೆಟ್ರೋಲ್‌ಗೆ ದುಡ್ಡಿಲ್ಲ''ಪ್ರೇಮ್ ಕಹಾನಿ' ಸೋಲು ಕಲಿಸಿದ ಬದುಕಿನ ಪಾಠ: 'ಕಾರ್ ಇದೆ, ಪೆಟ್ರೋಲ್‌ಗೆ ದುಡ್ಡಿಲ್ಲ'

    ಖ್ಯಾತ ಸಾಹಿತಿ ಮನೆಗೆ ಹೋಗ್ತಾರೆ

    ಖ್ಯಾತ ಸಾಹಿತಿ ಮನೆಗೆ ಹೋಗ್ತಾರೆ

    ಬೆಂಗಳೂರಿಗೆ ಬಂದ ಬಳಿಕ (ತರಂಗದಲ್ಲಿ ವಿಳಾಸ ಸಂಗ್ರಹಿಸಿ) ಮಲ್ಲೇಶ್ವರಂದಲ್ಲಿರುವ ಖ್ಯಾತ ಸಾಹಿತಿಯೊಬ್ಬರ ಮನೆಗೆ ಮಹೇಶ್ ಹೋಗ್ತಾರೆ. ಅಂದಿನ ಸಮಯಕ್ಕೆ ಎಲ್ಲ ಸೂಪರ್ ಹಿಟ್ ಹಾಡುಗಳಿಗೆ ಇವರೇ ಸಾಹಿತ್ಯ ಬರೆಯುತ್ತಿದ್ದರು. ಅವರನ್ನು ಭೇಟಿ ಮಾಡಿದ ''ಸಹಾಯಕ ನಿರ್ದೇಶಕನಾಗಬೇಕು, ಮಂಡ್ಯದಿಂದ ಬಂದಿದ್ದೇನೆ'' ಎಂದು ಕೇಳಿಕೊಳ್ಳುತ್ತಾರೆ. ಆದ್ರೆ, ಆ ಸಾಹಿತಿ ಒಂದು ಒಪ್ಪಂದವನ್ನು ಮಹೇಶ್ ಮುಂದಿಟ್ಟರಂತೆ.

    ಎರಡು ವರ್ಷ ಕೆಲಸ ಮಾಡು

    ಎರಡು ವರ್ಷ ಕೆಲಸ ಮಾಡು

    ಅವಕಾಶ ಕೇಳಿ ಬಂದ ಮಹೇಶ್‌ ಮುಂದೆ ಆ ಸಾಹಿತಿ ಒಂದು ಒಪ್ಪಂದ ಮುಂದಿಡುತ್ತಾರೆ. ಎರಡು ವರ್ಷಗಳ ಕಾಲ ನನ್ನ ಮನೆಯಲ್ಲಿ ಕೆಲಸ ಮಾಡ್ಕೊಂಡು ಇರಬೇಕು, ನನಗೆ ಸಹಾಯಕನಾಗಿ ಇರಬೇಕು, ಮನೆ ಕೆಲಸ ಮಾಡಬೇಕು, ತರಕಾರಿ ಹಾಗೂ ಇತರೆ ವಸ್ತುಗಳು ತಂದು ಕೊಡಬೇಕು. ತಿಂಗಳಿಗೆ 5 ಸಾವಿರ ಸಂಬಳನೂ ಕೊಡ್ತೀನಿ, ಎರಡು ವರ್ಷದ ಆದ್ಮೇಲೆ ಒಬ್ಬ ಡೈರೆಕ್ಟರ್‌ನ ಪರಿಚಯ ಮಾಡಿಕೊಡ್ತೀನಿ ಅಂದರು.

    'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?

    ಬೇಡ ಎಂದು ಹಿಂತಿರುಗಿದ ಮಹೇಶ್

    ಬೇಡ ಎಂದು ಹಿಂತಿರುಗಿದ ಮಹೇಶ್

    ಆ ಸಾಹಿತಿ ಹೇಳಿದಂತೆ ಒಪ್ಪಿಕೊಳ್ಳಲು ನನಗೆ ಇಷ್ಟ ಇರಲಿಲ್ಲ. ಎರಡು ವರ್ಷ ಕೆಲಸ ಮಾಡಿದ್ಮೇಲೆ ಪರಿಚಯ ಮಾಡಿಕೊಟ್ಟಿಲ್ಲ ಅಂದ್ರೆ ಅಥವಾ ಎರಡು ವರ್ಷ ಸುಮ್ಮನೆ ವ್ಯರ್ಥ ಆಗಿಬಿಡುತ್ತೆ ಎಂಬ ಗೊಂದಲದಿಂದಲೇ ಅವರ ಬಳಿ ಹೋಗಲಿಲ್ಲ. ನಂತರ ಕೆಲವು ದಿನ ಬೆಂಗಳೂರಿನಲ್ಲಿ ಸುತ್ತಾಡಿದ ಬಳಿಕ ಮೋಟರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರಂತೆ.

    ನಿರ್ಮಾಪಕರೊಬ್ಬರು ಪರಿಚಯ

    ನಿರ್ಮಾಪಕರೊಬ್ಬರು ಪರಿಚಯ

    ಹೀಗೆ ಒಂದು ದಿನ ಆ ಶೋ ರೂಂನಲ್ಲಿ ಬೈಕ್ ಖರೀದಿ ಮಾಡಲು ಬಂದ ನಿರ್ಮಾಪಕರೊಬ್ಬರು (ಅವಿನಾಶ್ ಭಾರದ್ವಜ್) ಪರಿಚಯ ಆದರು. ನನ್ನ ಬಗ್ಗೆ ಹೇಳಿಕೊಂಡೆ, ಬಳಿಕ ಅವರು ನಾನೊಂದು ಸಿನಿಮಾ ಮಾಡ್ತಿದ್ದೀನಿ, ಮುಹೂರ್ತ ದಿನ ಬಾ ಎಂದು ಹೇಳಿ ನಂಬರ್ ಕೊಟ್ಟರು ಹೋದರು. ಅಲ್ಲಿಗೆ, ಹೋದೆ, ಡೈರೆಕ್ಟರ್ ಪರಿಚಯ ಸಹ ಮಾಡಿಕೊಟ್ಟರು ಜೊತೆಯಲ್ಲಿರುವ ಎಂದರು. ಕ್ಲಾಪ್ ಬಾಯ್ ಆಗಿ ಸೇರಿಸಿಕೊಂಡರು. ಆದ್ರೆ, 20 ದಿನ ಆದ್ಮೇಲೆ ಆ ಸಿನಿಮಾ ನಿಂತು ಹೋಯ್ತು. ಅಷ್ಟೊತ್ತಿಗೆ ನಾನು ಸಂಬಂಧಿಕರ ಮನೆ ಬಿಟ್ಟು ಗಾಂಧಿನಗರದಲ್ಲಿ ದಿನ ಕಳೆಯುತ್ತಿದ್ದೆ. ರಾತ್ರಿ ಪುಟ್‌ಪಾತ್‌ನಲ್ಲಿ ಮಲಗುತ್ತಿದ್ದೆ'' ಎಂದು ಹಳೆಯ ನೆನಪು ಬಿಚ್ಚಿಟ್ಟಿದ್ದಾರೆ. (ಕಥೆ ಮುಂದುವರಿಯುತ್ತದೆ)

    'ಕೆಜಿಎಫ್ ನೋಡಿದ್ಮೇಲೆ ಆ ನಿರ್ಧಾರಕ್ಕೆ ಬಂದಿದ್ದು'- ಆರ್ ಚಂದ್ರು'ಕೆಜಿಎಫ್ ನೋಡಿದ್ಮೇಲೆ ಆ ನಿರ್ಧಾರಕ್ಕೆ ಬಂದಿದ್ದು'- ಆರ್ ಚಂದ್ರು

    English summary
    'Ayogya' movie Director Mahesh Kumar shares about his struggling days with Filmibeat Director Diary Episode.
    Monday, October 12, 2020, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X