ಭಾರಿ ಮೊತ್ತಕ್ಕೆ ಸೇಲ್ ಆಯ್ತು 'ಅಯೋಗ್ಯ' ಆಡಿಯೋ
Recommended Video

ನೀನಾಸಂ ಸತೀಶ್ ಅಭಿನಯದ 'ಅಯೋಗ್ಯ' ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಲೇ ಇದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಅಯೋಗ್ಯ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರತಂಡ ಬ್ಯುಸಿ ಆಗಿದೆ.
'ಅಯೋಗ್ಯ' ಸಿನಿಮಾಗೆ ಆಮಂತ್ರಣ ನೀಡುವ ಉದ್ದೇಶದಿಂದ ಸಿನಿಮಾತಂಡ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು ಭಾರಿ ಮೊತ್ತಕ್ಕೆ ಅಯೋಗ್ಯನ ಹಾಡುಗಳ ಹಕ್ಕು ಆನಂದ್ ಆಡಿಯೋಗೆ ಸೇಲ್ ಆಗಿದೆ.

ಇದೇ ತಿಂಗಳಲ್ಲಿ ಹಾಡುಗಳು ರಿಲೀಸ್ ಆಗಲಿದ್ದು ಚಿತ್ರತಂಡ ಈಗಾಗಲೇ ಅದಕ್ಕಾಗಿ ಭಾರಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಟೀಸರ್ ನಿಂದಲೇ ನಿರೀಕ್ಷೆ ಹುಟ್ಟುಸಿರುವ 'ಅಯೋಗ್ಯ' ಸಿನಿಮಾ ಸತೀಶ್ ವೃತ್ತಿ ಜೀವನದಲ್ಲಿ ಹೊಸ ರೀತಿಯ ಅಲೆಯನ್ನು ಸೃಷ್ಟಿ ಮಾಡಲಿದ್ಯಂತೆ.

ಇನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದ್ದು ಮಹೇಶ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಚಿತಾ ರಾಮ್ ಇದೇ ಮೊದಲ ಬಾರಿಗೆ ಸತೀಶ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ನಿರೀಕ್ಷೆ ಹುಟ್ಟಿಸಿರುವ ಅಯೋಗ್ಯ ಸಿನಿಮಾ ಆಲ್ಬಂ ಕೂಡ ಹೊಸ ಅಲೆಯನ್ನು ಹುಟ್ಟುಹಾಕಲಿದ್ಯಂತೆ.


Click it and Unblock the Notifications











