ವಿವಾದದ ಸುಳಿಯಲ್ಲಿ 'ಅಯೋಗ್ಯ' ಸಿನಿಮಾ

By Pavithra

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ಸಿಲುಕಿಕೊಂಡಿದೆ. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿ ಮುಂದಿನ ತಿಂಗಳು ತೆರೆಗೆ ಬರಬೇಕಿರುವ ಚಿತ್ರ ಇದಾಗಿದ್ದು ಆರಂಭದಿಂದಲೂ ಇಲ್ಲದ ಶೀರ್ಷಿಕೆ ಸಮಸ್ಯೆ ಈಗ ಎದುರಾಗಿದೆ.

'ಅಯೋಗ್ಯ' ಎನ್ನು ಶೀರ್ಷಿಕೆ ಅಡಿಯಲ್ಲಿ ಉಪ ಶೀರ್ಷಿಕೆಯಾಗಿ ಗ್ರಾಮ ಪಂಚಾಯಿತಿ ಸದಸ್ಯ ಎಂದು ಬಳಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಎನ್ನು ಉಪ ಶೀರ್ಷಿಕೆಯನ್ನು ಕೈ ಬಿಡಬೇಕು ಎಂದು ಮೈಸೂರಿನ ಕನ್ನಡ ಕ್ರಾಂತಿ ದಳ ಸಂಘಟನೆ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದೆ. ಅದಷ್ಟೇ ಅಲ್ಲದೆ ಶೀರ್ಷಿಕೆ ನೀಡುವ ವಿಚಾರದಲ್ಲಿ ವಾಣಿಜ್ಯ ಮಂಡಳಿ ಸರಿಯಾದ ಕೆಲಸ ಮಾಡಿಲ್ಲ ಎಂದು ಆರೋಪವನ್ನು ಮಾಡಿದೆ.

Ayogya is aimed at the controversy

ಇದೇ ವಿಚಾರಕ್ಕೆ ಪ್ರತ್ಯುತ್ತರ ನೀಡಿರುವ ವಾಣಿಜ್ಯ ಮಂಡಳಿ 'ಅಯೋಗ್ಯ' ಎನ್ನುವ ಶೀರ್ಷಿಕೆಯಷ್ಟೇ ನೋಂದಣಿ ಆಗಿರುವುದು 'ಅಯೋಗ್ಯ' ಗ್ರಾಮ ಪಂಚಾಯಿತಿ ಸದಸ್ಯ ಎನ್ನುವುದು ಅಲ್ಲ ಎನ್ನುವುದನ್ನು ತಿಳಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ನೀನಾಸಂ ಸತೀಶ್ ಸಿನಿಮಾ ನೋಡದೇ ಶೀರ್ಷಿಕೆ ತಪ್ಪಾಗಿದೆ ಎಂದು ತೊಂದರೆ ಕೊಡುವುದು ಸರಿಯಲ್ಲ ಎಂದಿದ್ದಾರೆ.

Ayogya is aimed at the controversy

ಇನ್ನು ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಮಹೇಶ್ ಕುಮಾರ್ ಸಿನಿಮಾ ಕಥೆಗೆ ತಕ್ಕಂತೆ ಶೀರ್ಷಿಕೆ ಇದೆ. ಸಿನಿಮಾ ಪೂರ್ತಿ ಮಂಡ್ಯ ಬಳಿಯ ಹಳ್ಳಿಯಲ್ಲಿ ಚಿತ್ರೀಕರಿಸಿಲಾಗಿದೆ. ಅದಕ್ಕೂ ಮುನ್ನ ಅಲ್ಲಿಯ ಜನರ ಹಾಗೂ ಹಿರಿಯ ಮುಖಂಡರಿಗೆ ಕಥೆ ಹೇಳಿ ಅನುಮತಿ ಪಡೆದ ನಂತರ ಚಿತ್ರೀಕರಣ ಮಾಡಲಾಗಿದೆ. ಆರಂಭದಿಂದ ಇಲ್ಲದ ಸಮಸ್ಯೆ ಈಗ ಏಕೆ ಬಂತು ಎನ್ನುವುದು ಚಿತ್ರತಂಡದ ಪ್ರಶ್ನೆ ಆಗಿದೆ.

More from Filmibeat

English summary
Kannada film Ayogya is aimed at the controversy, The Kannada Kranthi Sena Sangatane has written letter to the karnataka film chamber of commerce to change the sub-title of the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X