ಭಾನುವಾರ ನಡೆಯಲಿದೆ 'ಅಯೋಗ್ಯ'ನ ಸಂಭ್ರಮಾಚರಣೆ
ಮೂರು ವಾರಗಳ ಹಿಂದೆ ಬಿಡುಗಡೆ ಆಗಿ ಅಭಿಮಾನಿಗಳ ಮನಸ್ಸು ಗೆದ್ದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಯೋಗ್ಯ ಸಿನಿಮಾ 25ದಿನಗಳನ್ನು ಪೂರೈಸುತ್ತಿದೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ ಅಯೋಗ್ಯ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವ ಹಿನ್ನಲೆಯಲ್ಲಿ ಅಭಿಮಾನಿಗಳ ಮಧ್ಯೆಯೇ ಸಂಭ್ರಮವನ್ನು ಆಚರಣೆ ಮಾಡುತ್ತಿದೆ ಚಿತ್ರತಂಡ.
ಇದೇ ಬಾನುವಾರ ಅಂದರೆ ಸೆಪ್ಟೆಂಬರ್ 9 ರಂದು ಮಧ್ಯಾಹ್ನ 1 ಗಂಟೆಗೆ 'ನರ್ತಕಿ' ಚಿತ್ರಮಂದಿರದಲ್ಲಿ 'ಅಯೋಗ್ಯ' ಚಿತ್ರದ 25ನೇ ದಿನದ ಅದ್ಧೂರಿ ಸಂಭ್ರಮಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 25ನೇ ದಿನದ ಸಂಭ್ರಮ ಆಗಿರುವುದರಿಂದ 25ಸಾವಿರ ರೂಪಾಯಿಗಳ ಪಟಾಕಿ ಸಿಡಿಸಲಿದ್ದಾರೆ.

25 ಜೊತೆ ತಮಟೆ ನಗಾರಿಗಳ ಮಧ್ಯೆ ಅಭಿಮಾನಿಗಳು ನೃತ್ಯ ಮಾಡಲಿದ್ದಾರೆ. 25 Kg ತೂಕದ ಕೇಕ್ ಅನ್ನು ಕತ್ತರಿಸುವ ಮೂಲಕ ನಾಯಕ ನಟರಾದ ಸತೀಶ್ ನೀನಾಸಂ ಮತ್ತು ನಾಯಕಿ ರಚಿತಾ ರಾಮ್ ಹಾಗೂ ಚಿತ್ರತಂಡ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಪಾಲ್ಗೊಳ್ಳಲಿದ್ದಾರೆ.

ಇವುಗಳ ಜೊತೆ ಸಂಭ್ರಮಾಚರಣೆಗೆ ಬಂದಿರುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವೂ ಇದೆ. ಇದಷ್ಟೇ ಅಲ್ಲದೆ ನಾಯಕ ನಟರಾದ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿಮಾನಿಗಳ ಜೊತೆ 'ಅಯೋಗ್ಯ' ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸುವರು


Click it and Unblock the Notifications











