ಹಿಟ್ ಆಯ್ತು 'ಅಯೋಗ್ಯ'ನ ಮತ್ತೊಂದು ಹಾಡು

By Naveen

ನಟ ಸತೀಶ್ ನೀನಾಸಂ ನಟನೆಯ 'ಅಯೋಗ್ಯ' ಸಿನಿಮಾದ ಮೊದಲ ಹಾಡು 'ಏನಮ್ಮಿ ಏನಮ್ಮಿ...' ಈಗಾಗಲೇ ಸೂಪರ್ ಹಿಟ್ ಆಗಿದೆ. ಈಗ ಸಿನಿಮಾದ ಎರಡನೇ ಹಾಡು ಕೂಡ ಕೇಳುಗರಿಗೆ ಇಷ್ಟ ಆಗಿದೆ.

ಚಿತ್ರದ ಒಂದೊಂದೆ ಹಾಡನ್ನು ರಿಲೀಸ್ ಮಾಡುತ್ತಿರುವ ಚಿತ್ರತಂಡ ಮೊದಲ ಹಾಡನ್ನು ನಟ ಧ್ರುವ ಸರ್ಜಾ ಅವರಿಂದ ಬಿಡುಗಡೆ ಮಾಡಿಸಿತ್ತು. ಎರಡನೇ ಹಾಡನ್ನು ರೆಬಲ್ ಸ್ಟಾರ್ ಅಂಬರೀಶ್ ರಿಲೀಸ್ ಮಾಡಿದ್ದರು. ಅಂಬಿ ರಿಲೀಸ್ ಮಾಡಿದ್ದ ಹಾಡಿನ ಸದ್ದು ಈಗ ಜೋರಾಗಿದೆ. ಹಾಡು ಬಿಡುಗಡೆಯಾದ ಮೂರೇ ದಿನಕ್ಕೆ ಯೂಟ್ಯೂಬ್ ನಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ.

'ಅಯೋಗ್ಯ' ಸಿನಿಮಾದ ಟೈಟಲ್ ಸಾಂಗ್ ಇದಾಗಿದೆ. ಮಂಡ್ಯ ಭಾಗದ ಜನರಿಗೆ ಹಾಡು ಹೇಳಿ ಮಾಡಿಸಿದ ಹಾಗಿದೆ. ಬಹದ್ದೂರ್ ಚೇತನ್ ಕುಮಾರ್ ಸಿನಿಮಾದ ಎಲ್ಲ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ayogya movie 2nd song got 1.5 lakh views in youtube

ಅಂಟೋನಿ ದಾಸ್ ಈ ಹಾಡನ್ನು ಹಾಡಿದ್ದಾರೆ. 'ಟಗರು' ಸಿನಿಮಾದ 'ಟಗರು ಬಂತು ಟಗರು..' ಹಾಡಿನ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದ ಅಂಟೋನಿ ದಾಸ್ ಮತ್ತೆ ಕನ್ನಡ ಹಾಡು ಹಾಡಿದ್ದಾರೆ.

'ಅಯೋಗ್ಯ' ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದರೆ. ಸತೀಶ್ ಗೆ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Actor Sathish Neenasam and Rachita Ram's 'Ayogya' movie 2nd song got 1.5 lakh views in youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X