twitter
    For Quick Alerts
    ALLOW NOTIFICATIONS  
    For Daily Alerts

    ವಿವಾದ ಬಗೆಹರಿಸಲು 'ಅಯೋಗ್ಯ' ಕಂಡುಕೊಂಡ ಹೊಸ ಸೂತ್ರ.! ಏನದು.?

    By Harshitha
    |

    'ಅಭಿನಯ ಚತುರ' ನೀನಾಸಂ ಸತೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಚಿತ್ರ 'ಅಯೋಗ್ಯ'. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಅಯೋಗ್ಯ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಹೀಗಿರುವಾಗಲೇ, 'ಅಯೋಗ್ಯ' ಸಿನಿಮಾ ವಿವಾದದಲ್ಲಿ ಸಿಲುಕಿದೆ.

    'ಅಯೋಗ್ಯ' ಚಿತ್ರದ ಟೈಟಲ್ ಗೆ 'ಗ್ರಾಮ ಪಂಚಾಯತಿ ಸದಸ್ಯ' ಎನ್ನುವ ಟ್ಯಾಗ್ ಲೈನ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೈಸೂರಿನ ಕ್ರಾಂತಿ ದಳ ಸಂಘಟನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿತ್ತು.

    ''ಅಯೋಗ್ಯ' ಚಿತ್ರದ ಟೈಟಲ್ ಬದಲಾವಣೆ ಮಾಡಬೇಕು. ಇಲ್ಲಾಂದ್ರೆ, ಗ್ರಾಮ ಪಂಚಾಯತಿ ಸದಸ್ಯ ಎನ್ನುವ ಟ್ಯಾಗ್ ಲೈನ್ ತೆಗೆಯಬೇಕು. ಸಿನಿಮಾದಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಅವಹೇಳನ ಮಾಡಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ'' ಎಂದು ಮೈಸೂರಿನ ಕ್ರಾಂತಿ ದಳ ಸಂಘಟನೆ ಫಿಲ್ಮ್ ಚೇಂಬರ್ ಗೆ ಪತ್ರ ಬರೆದಿತ್ತು.

    ಇದರಿಂದ ಎಚ್ಚೆತ್ತುಕೊಂಡಿರುವ 'ಅಯೋಗ್ಯ' ಚಿತ್ರತಂಡ ಇಂದು ಬೆಂಗಳೂರಿನ ಗ್ರೀನ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವಾದಕ್ಕೆ ಪೂರ್ಣ ವಿರಾಮ ಇಡಲು ಮುಂದಾಯಿತು. ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

    ವಿವಾದ ಬಗೆಹರಿಸಲು 'ಅಯೋಗ್ಯ' ಕಂಡುಕೊಂಡ ಸೂತ್ರ...

    ವಿವಾದ ಬಗೆಹರಿಸಲು 'ಅಯೋಗ್ಯ' ಕಂಡುಕೊಂಡ ಸೂತ್ರ...

    ''ಸಿನಿಮಾದ ಕಥೆಗೆ ತಕ್ಕಂತೆ ಶೀರ್ಷಿಕೆ ಇಡಲಾಗಿದೆ. ಈಗ ಶೀರ್ಷಿಕೆ ವಿವಾದ ಆಗಿರುವ ಕಾರಣ 'ಅಯೋಗ್ಯ ಮತ್ತು ಗ್ರಾಮ ಪಂಚಾಯತಿ ಸದಸ್ಯ' ಅಂತ ಬದಲಾಯಿಸಿದ್ದೇವೆ. ಟೈಟಲ್ ಹಾಗೂ ಟ್ಯಾಗ್ ಲೈನ್ ನಡುವೆ 'ಮತ್ತು' ಅಂತ ಸೇರಿಸಿದ್ದೇವೆ'' ಎಂದರು ನಿರ್ದೇಶಕ ಮಹೇಶ್ ಕುಮಾರ್

    ವಿವಾದದ ಸುಳಿಯಲ್ಲಿ 'ಅಯೋಗ್ಯ' ಸಿನಿಮಾವಿವಾದದ ಸುಳಿಯಲ್ಲಿ 'ಅಯೋಗ್ಯ' ಸಿನಿಮಾ

    ಅವಹೇಳನ ಮಾಡಿಲ್ಲ.!

    ಅವಹೇಳನ ಮಾಡಿಲ್ಲ.!

    ''ನನ್ನ ತಂದೆ-ತಾಯಿ ಕೂಡ ಗ್ರಾಮ ಪಂಚಾಯತಿ ಸದಸ್ಯರು ಆಗಿದ್ದವರು. ಆ ಸ್ಥಾನದ ಬಗ್ಗೆ ನನಗೆ ಗೌರವ ಇದೆ. ಸಿನಿಮಾದಲ್ಲಿ ಯಾರ ಗೌರವಕ್ಕೂ ನಾವು ಧಕ್ಕೆ ತಂದಿಲ್ಲ. ಯಾವುದೇ ಕಾರಣಕ್ಕೂ ಟ್ಯಾಗ್ ಲೈನ್ ಚೇಂಜ್ ಮಾಡಲು ಆಗಲ್ಲ. ಗ್ರಾಮ ಪಂಚಾಯತಿ ಸದಸ್ಯರು ಸಿನಿಮಾ ನೋಡ್ತಾರೆ. ಒಂದು ವೇಳೆ ಅವರಿಗೆ ನೋವಾದರೆ ಚೇಂಜ್ ಮಾಡುತ್ತೇವೆ'' ಎನ್ನುತ್ತಾರೆ ಮಹೇಶ್ ಕುಮಾರ್.

    ಕ್ಷಮೆ ಕೇಳಿದ ನೀನಾಸಂ ಸತೀಶ್

    ಕ್ಷಮೆ ಕೇಳಿದ ನೀನಾಸಂ ಸತೀಶ್

    ''ಟೈಟಲ್ ನಿಂದಾಗಿ ಯಾರಿಗಾದರೂ ನೋವು ಆಗಿದ್ದರೆ ಕ್ಷಮೆ ಕೇಳುತ್ತೇನೆ. ಚಿತ್ರದಲ್ಲಿ ಒಳ್ಳೆಯ ಕಥೆ ಇದೆ. ಗ್ರಾಮ ಪಂಚಾಯತಿ ಸದಸ್ಯ ಊರಲ್ಲಿ ಏನೇನು ಮಾಡಬಹುದು ಅನ್ನೋದೇ ಸಿನಿಮಾ ಕಥೆ. ಇದರಲ್ಲಿ ಗ್ರಾಮ ಪಂಚಾಯತಿ ಸದಸ್ಯನನ್ನ ವಿಜೃಂಭಿಸಿದ್ದೇವೆ. ಬಿಡುಗಡೆಗೆ ಮುನ್ನ ಸಿನಿಮಾ ಗ್ರಾಮ ಪಂಚಾಯತಿ ಸದಸ್ಯರಿಗೆ ಸ್ಪೆಷಲ್ ಶೋ ಮಾಡುತ್ತೇವೆ'' ಅಂತ ನಟ ಸತೀಶ್ ನೀನಾಸಂ ಹೇಳಿದರು.

    ಹೊಸ ಶೀರ್ಷಿಕೆ ರಿಜಿಸ್ಟರ್ ಆಗಬೇಕು.!

    ಹೊಸ ಶೀರ್ಷಿಕೆ ರಿಜಿಸ್ಟರ್ ಆಗಬೇಕು.!

    'ಅಯೋಗ್ಯ ಮತ್ತು ಗ್ರಾಮ ಪಂಚಾಯತಿ ಸದಸ್ಯ' ಅಂತ ಬದಲಾವಣೆ ಮಾಡುತ್ತೇವೆ ಅಂತ ಚಿತ್ರತಂಡ ಏನೋ ಹೇಳಿಕೊಂಡಿದೆ. ಆದ್ರೆ, ಶೀರ್ಷಿಕೆ ಹಾಗೂ ಟ್ಯಾಗ್ ಲೈನ್ ನಡುವೆ 'ಮತ್ತು' ಬಂದಿರುವ ಕಾರಣ ಇಡೀ ಶೀರ್ಷಿಕೆಯನ್ನ ಚಿತ್ರತಂಡ ಮತ್ತೊಂದು ಬಾರಿ ವಾಣಿಜ್ಯ ಮಂಡಳಿಯಲ್ಲಿ ನೋಂದಣೆ ಮಾಡಿಸಬೇಕು. 'ಅಯೋಗ್ಯ ಮತ್ತು ಗ್ರಾಮ ಪಂಚಾಯತಿ ಸದಸ್ಯ' ಟೈಟಲ್ ಕೊಡುವುದಕ್ಕೆ ಫಿಲ್ಮ್ ಚೇಂಬರ್ ಒಪ್ಪಿಕೊಳ್ಳುತ್ತಾ ಅನ್ನೋದೇ ಮುಂದಿನ ಪ್ರಶ್ನೆ.!

    English summary
    After Title Controversy, 'Ayogya' Film team has decided to change the Title to 'Ayogya mattu Grama Pachayath Sadasya'.
    Tuesday, June 26, 2018, 14:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X