ಕಿಲ ಕಿಲ ಅಂತ ನಗುತ್ತಾ ಉಗುರು ಕಟ್ ಮಾಡಿಸಿಕೊಳ್ಳುವ ಆಯ್ರಾ ವಿಡಿಯೋ ಸಿಕ್ಕಾಪಟ್ಟೆ ವೈರಲ್.!
ಪುಟಾಣಿ ಮಕ್ಕಳ ಉಗುರು ಕಟ್ ಮಾಡುವುದೆಂದರೆ ದೊಡ್ಡ ಸಾಹಸಕ್ಕೆ ಕೈ ಹಾಕಿದ ಹಾಗೆ. ಪುಟ್ಟ ಪುಟ್ಟ ಕೈ ಬೆರಳುಗಳಲ್ಲಿ ಬೆಳೆದಿರುವ ಉಗುರುಗಳನ್ನ ಎಷ್ಟೋ ತಾಯಂದಿರನ್ನು ಮಕ್ಕಳು ನಿದ್ದೆ ಮಾಡುವಾಗ ಕತ್ತರಿಸುತ್ತಾರೆ. ಯಾಕಂದ್ರೆ, ಮಕ್ಕಳ ಉಗುರು ಕತ್ತರಿಸುವುದು ಅಷ್ಟು ಸುಲಭದ ಕೆಲಸ ಅಲ್ಲವೇ ಅಲ್ಲ.
ಮಕ್ಕಳು ಎಚ್ಚರವಿದ್ದಾಗ ಉಗುರು ಕಟ್ ಮಾಡಲು ಕೂರಿಸಿಕೊಂಡರೆ, ಕೈ-ಕಾಲು ಆಡಿಸಿ ಬೆರಳಿಗೆ ಗಾಯಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತೆ. ಅಂಥದ್ರಲ್ಲಿ ಆಯ್ರಾಳ ವಿಧೇಯತೆ ಮತ್ತು ತಾಯಿ ರಾಧಿಕಾ ಪಂಡಿತ್ ರವರ ಚಾಕಚಕ್ಯತೆಯನ್ನ ಮೆಚ್ಚಲೇಬೇಕು.!
ಟಕ್.. ಟಕ್ ಅಂತ ಶಬ್ಧ ಮಾಡುತ್ತ.. ಮಗಳು ಆಯ್ರಾಳನ್ನು ನಕ್ಕು ನಲಿಸುತ್ತ.. ಉಗುರನ್ನು ಕತ್ತರಿಸುವ ಸಾಹಸವನ್ನು ತಾಯಿ ರಾಧಿಕಾ ಪಂಡಿತ್ ನೀರು ಕುಡಿದಷ್ಟೇ ಸಲೀಸಾಗಿ ಮಾಡಿದ್ದಾರೆ.

ಕಿರಿಕಿರಿಗೊಳ್ಳದೆ, ಗಲಾಟೆ ಮಾಡದೆ, ಅಮ್ಮನ ಮುಂದೆ ವಿಧೇಯ ಮಗಳಾಗಿ ಕೂತು, ಅಮ್ಮನ ಕೈಮೇಲೆ ಕೈಬೆರಳನ್ನಿಟ್ಟು ಕಿಲ ಕಿಲ ಅಂತ ನಗುತ್ತ ಆಯ್ರಾ ಉಗುರು ಕಟ್ ಮಾಡಿಸಿಕೊಂಡಿರುವ ವಿಡಿಯೋ ತುಂಬಾನೇ ಕ್ಯೂಟ್ ಆಗಿದೆ.
ಈ ವಿಡಿಯೋನ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂದ್ಹಾಗೆ, ಆಯ್ರಾಗೀಗ 14 ತಿಂಗಳು ತುಂಬಿದ್ದರೆ, ಆಯ್ರಾಳ ಪುಟ್ಟ ಸಹೋದರನಿಗೆ ಮೂರು ತಿಂಗಳು ತುಂಬಿದೆ. ಇಬ್ಬರು ಮಕ್ಕಳ ಆರೈಕೆಯಲ್ಲಿ ನಟಿ ರಾಧಿಕಾ ಪಂಡಿತ್ ಬಿಜಿಯಾಗಿದ್ದಾರೆ. ಅತ್ತ ತಂದೆ ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್-2' ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.


Click it and Unblock the Notifications











