ರಾಷ್ಟ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ ವಿಕ್ಕಿ ಕೌಶಲ್, ಆಯುಷ್ಮಾನ್, ನಟಿ ಕೀರ್ತಿ ಸುರೇಶ್
66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿಯನ್ನ ಬಾಲಿವುಡ್ ನಟರಾದ ವಿಕ್ಕಿ ಕೌಶಲ್ ಮತ್ತು ಆಯುಷ್ಮಾನ್ ಖುರಾನ್ ಜಂಟಿಯಾಗಿ ಹಂಚಿಕೊಂಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ತಮಿಳಿನ ಕೀರ್ತಿ ಸುರೇಶ್ ಪಡೆದುಕೊಂಡಿದ್ದಾರೆ.
ಶ್ರೀರಾಂ ರಾಘವನ್ ನಿರ್ದೇಶನ ಮಾಡಿದ್ದ 'ಅಂಧಾಧುನ್' ಚಿತ್ರದ ಅಭಿನಯಕ್ಕಾಗಿ ಆಯುಷ್ಮಾನ್ ಖುರಾನ್ ಮತ್ತು ಉರಿ ಸಿನಿಮಾದ ನಟನೆಗಾಗಿ ವಿಕ್ಕಿ ಕೌಶಲ್ ಗೆ ನಟ ಪ್ರಶಸ್ತಿ ಒಲಿದಿದೆ.
ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ ಮಹಾನಟಿ ಚಿತ್ರದ ನಟನೆಗಾಗಿ ಕೀರ್ತಿ ಸುರೇಶ್ ಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇನ್ನು ಗುಜರಾತಿನ 'ಹೆಲ್ಲಾರೊ' ಚಿತ್ರ ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿದೆ.

ಉರಿ ಚಿತ್ರದ ನಿರ್ದೇಶನಕ್ಕಾಗಿ ಆದಿತ್ಯ ಧಾರ್ ಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಲಭಿಸಿದೆ. ಕನ್ನಡದ ಸರ್ಕಾರಿ ಹಿ.ಪ್ರಾ.ಶಾಲೆ.ಕಾಸರಗೂಡು ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ಆಯ್ಕೆಯಾಗಿದೆ.
More from Filmibeat
English summary
Bollywood actor Ayushmann Khurrana, Vicky Kaushal Won Best Actor National Award and Keerthi suresh won best actress award.


Click it and Unblock the Notifications











