'KGF' ಚಿತ್ರದ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ರವಿಶಂಕರ್ ಸಹೋದರ ಅಯ್ಯಪ್ಪ!

By Naveen

Recommended Video

KGF : Kannada Actor Ayyappa reveals few facts about movie | Filmibeat Kannada

'ಕೆಜಿಎಫ್' ಸಿನಿಮಾ ಶುರುವಾಗಿ ವರ್ಷಗಳೆ ಕಳೆದಿದೆ. ಆದರೆ 'ಕೆಜಿಎಫ್' ಚಿತ್ರತಂಡ ಮಾತ್ರ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಆದರೆ ಇದೀಗ 'ಕೆಜಿಎಫ್' ಚಿತ್ರದ ಬಗ್ಗೆ ನಟ ರವಿಶಂಕರ್ ಸಹೋದರ ಅಯ್ಯಪ್ಪ ಮಾತನಾಡಿದ್ದಾರೆ.

ಈ ಹಿಂದೆ ಯಶ್ ಅವರ 'ಮಾಸ್ಟರ್ ಪೀಸ್' ಸಿನಿಮಾದಲ್ಲಿ ನಟಿಸಿದ್ದ ಅಯ್ಯಪ್ಪ ಈಗ 'ಕೆಜಿಎಫ್' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಯ್ಯಪ್ಪ ಚಿತ್ರದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ. ಹೀಗಿರುವಾಗ, ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಅಯ್ಯಪ್ಪ 'ಕೆಜಿಎಫ್' ಸಿನಿಮಾದ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸಿನಿಮಾದಲ್ಲಿ ನಟಿಸುತ್ತಿದ್ದೇನೆ

ಸಿನಿಮಾದಲ್ಲಿ ನಟಿಸುತ್ತಿದ್ದೇನೆ

''ನಾನು ಈಗ 'ಕೆಜಿಎಫ್' ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ನನ್ನ ಮತ್ತು ಯಶ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಹ್ಯಾಟ್ರಿಕ್ ಸಿನಿಮಾ.'' ಎಂದು ನಟ ಅಯ್ಯಪ್ಪ ಚಿತ್ರದಲ್ಲಿ ನಟಿಸಿರುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.

ಒಳ್ಳೆಯ ಪಾತ್ರ

ಒಳ್ಳೆಯ ಪಾತ್ರ

''ಕೆಜಿಎಫ್ ಚಿತ್ರದಲ್ಲಿ ನಾನು ಒಂದು ಒಳ್ಳೆಯ ಪಾತ್ರವನ್ನು ಮಾಡುತ್ತಿದ್ದೇನೆ. ಹಿಂದೆ ಎಲ್ಲಿಯೂ ನೋಡಿರದ ತುಂಬ ವಿಭಿನ್ನವಾದ ಪಾತ್ರದ ಮೂಲಕ ಈ ಚಿತ್ರದಲ್ಲಿ ನನ್ನನ್ನು ನೋಡಬಹುದಾಗಿದೆ.'' - ಅಯ್ಯಪ್ಪ, ನಟ

ಎಲ್ಲರೂ ಗಡ್ಡ ಬಿಟ್ಟಿದ್ದಾರೆ

ಎಲ್ಲರೂ ಗಡ್ಡ ಬಿಟ್ಟಿದ್ದಾರೆ

''ಕೆಜಿಎಫ್' ಸೆಟ್ ನಲ್ಲಿ ಎಲ್ಲರೂ ಗಡ್ಡ ಬಿಟ್ಟಿದ್ದಾರೆ. ಯಶ್, ನಾನು, ನಿರ್ದೇಶಕರ ತಂಡ, ತಾಂತ್ರಿಕ ತಂಡ ಸೇರಿದಂತೆ ಸುಮಾರು 500 ಜನ ಗಡ್ಡ ಬಿಟ್ಟಿದ್ದಾರೆ. ಆದರೆ ಅದು ಏಕೆ ನನಗೆ ಗೊತ್ತಿಲ್ಲ. ಅಲ್ಲಿಯೂ ಏನೋ ಒಂದು ಕನ್ಸೆಪ್ಟ್ ಇದೆ ಎನಿಸುತ್ತದೆ.'' - ಅಯ್ಯಪ್ಪ, ನಟ

ಪ್ರಶಾಂತ್ ನೀಲ್ ಬಗ್ಗೆ

ಪ್ರಶಾಂತ್ ನೀಲ್ ಬಗ್ಗೆ

''ನಿರ್ದೇಶಕ ಪ್ರಶಾಂತ್ ನೀಲ್ ಒಬ್ಬ ಪ್ಯಾಶನೇಟ್ ಡೈರೆಕ್ಟರ್. 'ಉಗ್ರಂ' ಸಿನಿಮಾದಿಂದ ಶುರು ಮಾಡಿ ಚಿಂದಿ ಉಡಾಯಿಸುತ್ತಿದ್ದಾರೆ. ಅವರು ಈ ಚಿತ್ರದಲ್ಲಿಯೂ ಏನೋ ಕನಸು ಕಂಡಿದ್ದಾರೆ. ಅದು ಬರುವವರೆಗೂ ಅವರು ಯಾರನ್ನು ಬಿಡುವುದಿಲ್ಲ.'' - ಅಯ್ಯಪ್ಪ, ನಟ

ಬಹುನಿರೀಕ್ಷಿತ ಸಿನಿಮಾ

ಬಹುನಿರೀಕ್ಷಿತ ಸಿನಿಮಾ

'ಕೆಜಿಎಫ್' ಕನ್ನಡದ ಬಹುನಿರೀಕ್ಷಿತ ಸಿನಿಮಾವಾಗಿದ್ದು, ಈ ವರ್ಷದ ಡಿಸೆಂಬರ್ ಕೊನೆಗೆ ಅಥಾವ ಮುಂದಿನ ವರ್ಷದ ಪ್ರಾರಂಭದಲ್ಲಿ ಸಿನಿಮಾ ಬಿಡುಗಡೆಯಾಗಬಹುದು.

More from Filmibeat

English summary
Sai Kumar brother Ayyappa spoke about Yash's 'KGF' movie. The movie is direted by Prashanth Neel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X