twitter
    For Quick Alerts
    ALLOW NOTIFICATIONS  
    For Daily Alerts

    'ವಿಷ್ಣು ಸ್ಮಾರಕ' ಪರ ಧ್ವನಿ ಎತ್ತಿದ 'ಕೌರವ' ಬಿಸಿ ಪಾಟೀಲ್

    |

    ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರ ಈಗ ಮತ್ತೆ ಸುದ್ದಿಯಾಗುತ್ತಿದೆ. ಅಂಬರೀಶ್ ಸ್ಮಾರಕ ನಿರ್ಮಾಣದ ಕುರಿತು ಸರ್ಕಾರದಿಂದ ಘೋಷಣೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿಷ್ಣು ಸ್ಮಾರಕ ನಿರ್ಮಿಸಿ ಎಂದು ಒತ್ತಡ ಬರುತ್ತಿದೆ.

    ಅಭಿಮಾನಿಗಳಿಂದ ಮಾತ್ರವಲ್ಲ, ಕೆಲವು ರಾಜಕಾರಣಿ ಹಾಗೂ ಸಿನಿಮಾ ಕಲಾವಿದರಿಂದಲೇ ವಿಷ್ಣು ಸ್ಮಾರಕ ಆಗಲೇಬೇಕು ಎಂಬ ಕೂಗು ಕೇಳಿ ಬರುತ್ತಿದೆ.

    'ವಿಷ್ಣು ಸ್ಮಾರಕದ ಬಗ್ಗೆ ತಪ್ಪು ಸಂದೇಶ ರವಾನೆ ಆಗುತ್ತೆ' ಎಂದ ಜಗ್ಗೇಶ್ 'ವಿಷ್ಣು ಸ್ಮಾರಕದ ಬಗ್ಗೆ ತಪ್ಪು ಸಂದೇಶ ರವಾನೆ ಆಗುತ್ತೆ' ಎಂದ ಜಗ್ಗೇಶ್

    ಈ ಬಗ್ಗೆ ನಟ ಹಾಗೂ ರಾಜಕಾರಣಿ ಬಿಸಿ ಪಾಟೀಲ್ ಟ್ವೀಟ್ ಮಾಡಿದ್ದರು. 'ವಿಷ್ಣುವರ್ಧನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ದಯವಿಟ್ಟು ಸ್ಮಾರಕ ನಿರ್ಮಾಣ ಮಾಡಿ' ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಸ್ಮಾರಕ ವಿಚಾರದಲ್ಲಿ ಸಮಸ್ಯೆ ಏನಾದರೂ ಇದ್ರೆ ಬಗೆಹರಿಸಿ ಎಂದು ಸಲಹೆ ನೀಡಿದ್ದಾರೆ. ಅಷ್ಟಕ್ಕೂ, ವಿಷ್ಣು ಸ್ಮಾರಕ ವಿವಚಾರದಲ್ಲಿ ಬಿಸಿ ಪಾಟೀಲ್ ಅವರ ನಿಲುವೇನು.? ಪೂರ್ತಿ ಮಾಹಿತಿಗಾಗಿ ಮುಂದೆ ಓದಿ......

    ರಾಜ್-ಅಂಬಿಯಂತೆ ವಿಷ್ಣು

    ರಾಜ್-ಅಂಬಿಯಂತೆ ವಿಷ್ಣು

    'ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಬಹುತೇಕ ಒಂದೇ ಸಮಕಾಲಿನ ಸಾಧಕರು. ರಾಜ್ ಕುಮಾರ್ ಅವರ ಸ್ಮಾರಕ ಸ್ವಾಗತಾರ್ಹ. ಈಗ ಅಂಬರೀಶ್ ಅವರ ಸ್ಮಾರಕ ಮಾಡುವುದು ಒಳ್ಳೆಯ ಕೆಲಸ. ಆದ್ರೆ, ವಿಷ್ಣುವರ್ಧನ್ ಸ್ಮಾರಕ ಮಾತ್ರ ಇನ್ನೂ ಅಗಿಲ್ಲ. ಷ್ಣು ಸ್ಮಾರಕ ಬಗ್ಗೆ ಸರ್ಕಾರ ಮರೆತುಬಿಟ್ಟಿದೆ. ನಿರ್ಲಕ್ಷ್ಯ ತೋರುತ್ತಿದೆ ಅನಿಸುತ್ತೆ' ಎಂದು ಬಿಸಿ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.! ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.!

    ಸರ್ಕಾರಕ್ಕೆ ಈ ವಿವಾದ ದೊಡ್ಡದಲ್ಲ

    ಸರ್ಕಾರಕ್ಕೆ ಈ ವಿವಾದ ದೊಡ್ಡದಲ್ಲ

    'ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚಿತ್ರರಂಗದ ಬಗ್ಗೆ ಕಳಕಳಿ ಹೊಂದಿರುವ ವ್ಯಕ್ತಿ. ಹಾಗಾಗಿ, ವಿಷ್ಣು ಸ್ಮಾರಕ ನಿರ್ಮಾಣ ಮಾಡಬೇಕಾಗಿರುವ ಜವಾಬ್ದಾರಿ ಅವರ ಮೇಲಿದೆ. ಸ್ವತಃ ಅಂಬರೀಶ್ ಅವರಿಗೂ ವಿಷ್ಣು ಸ್ಮಾರಕದ ಬಗ್ಗೆ ಕಾಳಜಿ ಇತ್ತು. ಆ ಜಾಗದ ವಿವಾದ ಏನಾದರೂ ನ್ಯಾಯಾಲಯದಲ್ಲಿದ್ದರೇ ಸರ್ಕಾರದ ವತಿಯಿಂದ ವಕೀಲರನ್ನ ನೇಮಿಸಿ ಬೇಗ ಇತ್ಯಾರ್ಥ ಮಾಡಬೇಕು'' ಎಂದು ಬಿಸಿ ಪಾಟೀಲ್ ಒತ್ತಾಯಿಸಿದ್ದಾರೆ.

    ವಿಷ್ಣು-ಅಂಬಿಯನ್ನ ದೂರ ಮಾಡಬೇಡಿ, ಇದ್ಯಾವ ನ್ಯಾಯ ಎನ್ನುತ್ತಿದೆ 'ದಿಗ್ಗಜರ' ಬಳಗ.! ವಿಷ್ಣು-ಅಂಬಿಯನ್ನ ದೂರ ಮಾಡಬೇಡಿ, ಇದ್ಯಾವ ನ್ಯಾಯ ಎನ್ನುತ್ತಿದೆ 'ದಿಗ್ಗಜರ' ಬಳಗ.!

    ಸರ್ಕಾರದ ನಿರ್ಲಕ್ಷ್ಯ ಕಾಣುತ್ತಿದೆ

    ಸರ್ಕಾರದ ನಿರ್ಲಕ್ಷ್ಯ ಕಾಣುತ್ತಿದೆ

    ವಿಷ್ಣು ಕೂಡ ಎಲ್ಲಾ ರೀತಿಯ ಚಿತ್ರಗಳನ್ನ ಮಾಡಿ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಆದ್ರೆ, ಸದ್ಯದ ಪರಿಸ್ಥಿತಿ ಗಮನಿಸಿದ್ರೆ, ಮೇಲ್ನೊಟಕ್ಕೆ ವಿಷ್ಣು ಸ್ಮಾರಕ ಬಗ್ಗೆ ಸರ್ಕಾರ ಯಾವುದೇ ಪ್ರಯತ್ನ ಮಾಡ್ತಿಲ್ಲ ಎನ್ನುವುದು ಜನರಿಗೆ ಕಾಣ್ತಿದೆ.

    ದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸ ದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸ

    ಕುಟುಂಬದವರ ತೀರ್ಮಾನವೇ ಅಂತಿಮ

    ಕುಟುಂಬದವರ ತೀರ್ಮಾನವೇ ಅಂತಿಮ

    ವಿಷ್ಣು ಸ್ಮಾರಕ ಮೈಸೂರಿನಲ್ಲಿ ಆಗಬೇಕು ಎನ್ನುವುದು ಭಾರತಿ ವಿಷ್ಣುವರ್ಧನ್ ಅವರ ಆಸೆ. ಆದ್ರೆ, ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು ಪುಣ್ಯ ಭೂಮಿ ಆಗಬೇಕು ಎನ್ನುವುದು ಅಭಿಮಾನಿಗಳ ಒತ್ತಾಯ. 'ಈ ವಿಷ್ಯದಲ್ಲಿ ಅವರ ಕುಟುಂಬದವರ ಸಲಹೆ ತೆಗೆದುಕೊಂಡು ಅವರು ಎಲ್ಲಿ ಹೇಳ್ತಾರೋ ಅಲ್ಲಿ ನಿರ್ಮಾಣ ಮಾಡುವುದು ಸೂಕ್ತ' ಎಂದು ಬಿಸಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

    ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ

    English summary
    Kannada actor b c patil express his opinion on dr vishnuvardhan memorial controversy.
    Wednesday, November 28, 2018, 12:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X