»   » 'ಯಡಿಯೂರಪ್ಪ' ಚಿತ್ರದ ಕುತೂಹಲಕ್ಕೆ ತೆರೆ ಎಳೆದ ಮಾಜಿ ಸಿಎಂ

'ಯಡಿಯೂರಪ್ಪ' ಚಿತ್ರದ ಕುತೂಹಲಕ್ಕೆ ತೆರೆ ಎಳೆದ ಮಾಜಿ ಸಿಎಂ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಸಿನಿಮಾ ಬರಲಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ ಈ ಸಿನಿಮಾದಲ್ಲಿ ನಟ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಅಂತ ನಿನ್ನೆಯಿಂದ ಸಿಕ್ಕಾಪಟ್ಟೆ ಟಾಕ್ ಶುರುವಾಗಿತ್ತು. ಈಗ ಈ ಚಿತ್ರದ ಬಗ್ಗೆ ಸ್ವತಃ ಯಡಿಯೂರಪ್ಪ ಅವರು ಮಾತನಾಡಿದ್ದಾರೆ.

ಯಡಿಯೂರಪ್ಪ ತಮ್ಮ ಜೀವನದ ಬಗ್ಗೆ ಸಿನಿಮಾ ಬರುವ ವಿಷಯದ ಬಗ್ಗೆ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಅವರು-ಇವರು ಹೇಳುತ್ತಿದ್ದ ಕಥೆಗಳಿಗೆ ಬ್ರೇಕ್ ಬಿದ್ದಿದೆ. ಅಷ್ಟಕ್ಕೂ, ಯಡಿಯೂರಪ್ಪ ಅವರು ಏನ್ ಹೇಳಿದ್ರು? ಸಿನಿಮಾ ಬರುತ್ತಾ ಅಥವಾ ಇಲ್ವೋ? ಮುಂದೆ ಓದಿ...

ನನ್ನ ಗಮನಕ್ಕೆ ಬಂದಿದೆ

''ನನ್ನ ಬಗ್ಗೆ ಸಿನಿಮಾ ಬರಲಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಈ ವಿಷಯ ನನ್ನ ಗಮನಕ್ಕೆ ಬಂದಿದೆ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಒತ್ತಾಯ ಮಾಡುತ್ತಿದ್ದಾರೆ

''ನಿಮ್ಮ ಬಗ್ಗೆ ಸಿನಿಮಾ ಮಾಡಲು ಅವಕಾಶ ಕೊಡಿ ಅಂತ ಈಗಾಗಲೇ ಕೆಲವರು ನನ್ನ ಬಳಿ ಬಂದು ಒತ್ತಾಯ ಮಾಡಿದ್ದಾರೆ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

ಸಿನಿಮಾದ ಅಗತ್ಯ ಇಲ್ಲ

''ನನ್ನ ಬಗ್ಗೆ ಸಿನಿಮಾ ಬರುವ ಅಗತ್ಯ ನನಗೆ ಇಲ್ಲ. ಅಲ್ಲದೆ ಸಿನಿಮಾದ ಬಗ್ಗೆ ನನಗೆ ಆಸಕ್ತಿಯೂ ಇಲ್ಲ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

ಒಪ್ಪಿಗೆ ಕೊಡುವುದಿಲ್ಲ

''ನನ್ನ ಬಗ್ಗೆ ಸಿನಿಮಾ ಮಾಡುವುದಕ್ಕೆ ಯಾರಿಗೂ ಒಪ್ಪಿಗೆ ಕೊಡುವುದಿಲ್ಲ. ಅಲ್ಲದೆ ಈಗ ನಾವು ಚುನಾವಣೆಯ ತಯಾರಿಯಲ್ಲಿ ಇದ್ದೇವೆ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

ನಿರ್ದೇಶಕರ ಮಾತು

ನಿರ್ದೇಶಕ ಎಂ.ಎಸ್.ರಮೇಶ್ ಈ ಚಿತ್ರದ ಬಗ್ಗೆ ಹಬ್ಬಿದ್ದು 'ಸುಳ್ಳು ಸುದ್ದಿ' ಅಂತ 'ಫಿಲ್ಮಿ ಬೀಟ್ ಕನ್ನಡ'ದ ಜೊತೆ ಮಾತನಾಡಿ ತಿಳಿಸಿದ್ದರು.

ಗಾಸಿಪ್ ಅಷ್ಟೇ

ಈ ಮೂಲಕ ಯಡಿಯೂರಪ್ಪ ಅವರ ಬಗ್ಗೆ ಸಿನಿಮಾ ಬರಲಿದೆ ಎಂಬ ಸುದ್ದಿ ಕೇವಲ ಗಾಸಿಪ್ ಅಷ್ಟೇ. ನಿರ್ದೇಶಕ ಎಂ.ಎಸ್.ರಮೇಶ್ ಮತ್ತು ಯಡಿಯೂರಪ್ಪ ಇಬ್ಬರು ಈ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದು, ಇಲ್ಲಿಗೆ ಇದು ಮುಗಿದ ಅಧ್ಯಾಯ.

English summary
Former Chief Minister 'B S Yeddyurappa' Clarify The Gossip About His Movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada