'ಕೆಜಿಎಫ್' ಸಿನಿಮಾದ ಮತ್ತೊಬ್ಬ ನಟನ ಲುಕ್ ಬಹಿರಂಗ
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಐದು ಭಾಷೆಗಳಲ್ಲಿ ಸಿನಿಮಾ ಬರಲಿದ್ದು, ಇತ್ತೀಚಿಗಷ್ಟೆ ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ಮಾಡಿದೆ.
ಸದ್ಯಕ್ಕೆ ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಹೀರೋ ಮತ್ತು ಶ್ರೀನಿಧಿ ಶೆಟ್ಟಿ ಹೀರೋಯಿನ್ ಎಂಬ ಮಾಹಿತಿ ಅಧಿಕೃತವಾಗಿದೆ. ಇನ್ನುಳಿದಂತೆ ಚಿತ್ರಕ್ಕೆ ವಿಲನ್ ಯಾರು, ಪೋಷಕ ಕಲಾವಿದರು ಯಾರು, ಹಾಸ್ಯ ನಟರು ಇದ್ದಾರಾ ಎಂಬುದು ಕುತೂಹಲ ಮೂಡಿಸಿದೆ.
ಇದೀಗ, ಕೆಜಿಎಫ್ ಅಡ್ಡಾದಿಂದ ಮತ್ತೊಬ್ಬ ನಟನ ಪರಿಚಯವಾಗಿದೆ. ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕ ಬಿ ಸುರೇಶ್ ಚಿತ್ರದಲ್ಲಿ ಅಭಿನಯಿಸಿದ್ದು, ಅವರ ಲುಕ್ ಬಹಿರಂಗವಾಗಿದೆ.

ಬಿ ಸುರೇಶ್ ಅವರು ಕೂಡ ಯಶ್ ಅವರಂತೆ ಕೂಲಿ ವ್ಯಕ್ತಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟು ಬಿಟ್ಟರೇ ಅವರು ಪಾತ್ರದ ಹೆಸರೇನು, ಯಾವ ಸನ್ನಿವೇಶದಲ್ಲಿ ಬರ್ತಾರೆ ಎಂಬುದು ಗೌಪ್ಯವಾಗಿಯೇ ಉಳಿದಿದೆ. ಕೈಯಲ್ಲಿ ಕೊಡಲಿ ಹಿಡಿದಿರುವುದು ಮಾತ್ರ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.
ಇನ್ನುಳಿದಂತೆ ಸಾಯಿಕುಮಾರ್ ಸಹೋದರ ನಟ ಅಯ್ಯಪ್ಪ ಕೂಡ ಕೆಜಿಎಫ್ ಚಿತ್ರದಲ್ಲಿ ಪಾತ್ರವೊಂದನ್ನ ನಿರ್ವಹಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, 'ಉಂಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ.

ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ಬರಲಿದ್ದು, ಚಿತ್ರದ ಟ್ರೈಲರ್ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











